ಸೆಕ್ಸಿಸ್ಟ್ ಹೇಳಿಕೆ; ಸಂಗಾತಿಯಿಂದ ದೂರವಾದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

Giorgia Meloni: ಸುಮಾರು 10 ವರ್ಷಗಳ ಕಾಲ ಆಂಡ್ರಿಯಾ ಗಿಯಾಂಬ್ರುನೊ ಅವರೊಂದಿಗಿನ ನನ್ನ ಸಂಬಂಧವು ಇಲ್ಲಿಗೆ ಕೊನೆಗೊಂಡಿದೆ" ಎಂದು ಮೆಲೋನಿ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. "ನಮ್ಮ ಮಾರ್ಗಗಳು ಸ್ವಲ್ಪ ಸಮಯದವರೆಗೆ ಭಿನ್ನವಾಗಿವೆ, ಮತ್ತು ಅದನ್ನು ಒಪ್ಪಿಕೊಳ್ಳುವ ಸಮಯ ಬಂದಿದೆ" ಎಂದು ಅವರು ಹೇಳಿದ್ದಾರೆ. ಈ ದಂಪತಿಗೆ ಚಿಕ್ಕ ಮಗಳಿದ್ದಾಳೆ.

ಸೆಕ್ಸಿಸ್ಟ್ ಹೇಳಿಕೆ; ಸಂಗಾತಿಯಿಂದ ದೂರವಾದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ
ಜಾರ್ಜಿಯಾ ಮೆಲೋನಿ
Follow us
|

Updated on: Oct 20, 2023 | 3:24 PM

ರೋಮ್ ಅಕ್ಟೋಬರ್ 20: ಇಟಲಿ (Italy) ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರು ಶುಕ್ರವಾರ ತಮ್ಮ ಸಂಗಾತಿ, ಟಿವಿ ಪತ್ರಕರ್ತ ಆಂಡ್ರಿಯಾ ಗಿಯಾಂಬ್ರುನೊ (Andrea Giambruno) ಅವರಿಂದ ದೂರವಾಗಿದ್ದೇನೆ ಎಂದು ಹೇಳಿದ್ದಾರೆ. ಆಂಡ್ರಿಯಾ ಗಿಯಾಂಬ್ರುನೊ ಇತ್ತೀಚೆಗೆ ಪ್ರಸಾರದಲ್ಲಿ ಮಾಡಿದ ಸೆಕ್ಸಿಸ್ಟ್ ಕಾಮೆಂಟ್ ಮಾಡಿದ್ದಕ್ಕಾಗಿ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಸುಮಾರು 10 ವರ್ಷಗಳ ಕಾಲ ಆಂಡ್ರಿಯಾ ಗಿಯಾಂಬ್ರುನೊ ಅವರೊಂದಿಗಿನ ನನ್ನ ಸಂಬಂಧವು ಇಲ್ಲಿಗೆ ಕೊನೆಗೊಂಡಿದೆ” ಎಂದು ಮೆಲೋನಿ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. “ನಮ್ಮ ಮಾರ್ಗಗಳು ಸ್ವಲ್ಪ ಸಮಯದವರೆಗೆ ಭಿನ್ನವಾಗಿವೆ, ಮತ್ತು ಅದನ್ನು ಒಪ್ಪಿಕೊಳ್ಳುವ ಸಮಯ ಬಂದಿದೆ” ಎಂದು ಅವರು ಹೇಳಿದ್ದಾರೆ. ಈ ದಂಪತಿಗೆ ಚಿಕ್ಕ ಮಗಳಿದ್ದಾಳೆ.

ಮಾಜಿ ಪ್ರಧಾನ ಮಂತ್ರಿ ಮತ್ತು ಮೆಲೋನಿ ಮಿತ್ರ ದಿವಂಗತ ಸಿಲ್ವಿಯೊ ಬೆರ್ಲುಸ್ಕೋನಿಯ ಉತ್ತರಾಧಿಕಾರಿಗಳ ಮಾಲೀಕತ್ವದ MFE ಮಾಧ್ಯಮ ಗುಂಪಿನ ಭಾಗವಾದ ಮೀಡಿಯಾಸೆಟ್ ಪ್ರಸಾರ ಮಾಡಿದ ಸುದ್ದಿ ಕಾರ್ಯಕ್ರಮದ ನಿರೂಪಕರಾಗಿದ್ದಾರೆ ಗಿಯಾಂಬ್ರುನೊ. ಈ ವಾರದ ಎರಡು ದಿನಗಳಲ್ಲಿ, ಮೀಡಿಯಾಸೆಟ್ ಜಿಯಾಂಬ್ರುನೋ ಅವರ ಕಾರ್ಯಕ್ರಮದ ಆಯ್ದ ಭಾಗಗಳನ್ನು ಪ್ರಸಾರ ಮಾಡಿತು. ಅದರಲ್ಲಿ ಅವರು ಅಸಭ್ಯ ಭಾಷೆಯನ್ನು ಬಳಸುತ್ತಿದ್ದಾರೆ ಮತ್ತು ಮಹಿಳಾ ಸಹೋದ್ಯೋಗಳ ಜತೆ ಕೆಟ್ಟ ಮಾತುಗಳನ್ನಾಡುತ್ತಿರುವುದು ಕಾಣುತ್ತದೆ.

“ನಾನು ನಿನ್ನನ್ನು ಮೊದಲು ಏಕೆ ಭೇಟಿಯಾಗಲಿಲ್ಲ?”ಮಹಿಳೆಯೊಬ್ಬರಲ್ಲಿ ಆತ ಹೇಳುತ್ತಿರುವುದು ವಿಡಿಯೊದಲ್ಲಿದೆ. ಎರಡನೆಯ ವಿಡಿಯೊದಲ್ಲಿ ಅಂದರೆ ಗುರುವಾರ ಪ್ರಸಾರವಾದ ಹೆಚ್ಚು ಸ್ಪಷ್ಟವಾದ ರೆಕಾರ್ಡಿಂಗ್‌ನಲ್ಲಿ, ಗಿಯಾಂಬ್ರುನೊ ಒಂದು ಸಂಬಂಧದ ಬಗ್ಗೆ ಮಾತನಾಡಿದ್ದು ಮಹಿಳಾ ಸಹೋದ್ಯೋಗಿಗಳು ಗುಂಪಾಗಿ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಿದರೆ ಅವರು ತನಗಾಗಿ ಕೆಲಸ ಮಾಡಬಹುದು ಎಂದು ಹೇಳುತ್ತಾರೆ.

ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ಸಂತ್ರಸ್ತೆಯನ್ನು ದೂಷಿಸಿದ ಹೇಳಿಕೆಗಾಗಿ ಈತನ ವಿರುದ್ಧ ಆಗಸ್ಟ್‌ನಲ್ಲಿ ವ್ಯಾಪಕವಾಗಿ ಟೀಕೆಗಳು ಕೇಳಿಬಂದಿತ್ತು.

ಇದನ್ನೂ ಓದಿ: Narendra Modi: ಮೋದಿ ವಿಶ್ವದಲ್ಲೇ ಅತ್ಯಂತ ಜನಪ್ರಿಯ, ಪ್ರಮುಖ ನಾಯಕ; ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಶ್ಲಾಘನೆ

“ನೀವು ಕುಣಿಯುತ್ತಿದ್ದರೆ ನಿಮಗೆ ಕುಡಿಯಲು ಎಲ್ಲಾ ಹಕ್ಕಿದೆ. ಯಾವುದೇ ರೀತಿಯ ತಪ್ಪು ತಿಳುವಳಿಕೆ ಮತ್ತು ಯಾವುದೇ ರೀತಿಯ ಸಮಸ್ಯೆ ಇರಬಾರದು. ಆದರೆ ನೀವು ಕುಡಿದು ಮೈಮೇಲೆ ಪ್ರಜ್ಞೆ ಕಳೆದುಕೊಳ್ಳದೇ ಇದ್ದರೆ, ನೀವು ಕೆಲವು ಸಮಸ್ಯೆಗಳಿಗೆ ಓಡಿಹೋಗುವುದನ್ನು ಮತ್ತು ತೋಳದ ಅಡ್ಡಾಗೆ ಬೀಳುವುದನ್ನು ತಪ್ಪಿಸಬಹುದು ಎಂದು ಅವರು ತಮ್ಮ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಆ ಎಪಿಸೋಡ್‌ನ ನಂತರ ಮೆಲೋನಿ ತನ್ನ ಸಂಗಾತಿ ಮಾಡಿದ ಕಾಮೆಂಟ್‌ಗಳಿಂದ ನನ್ನನ್ನು ಅಳೆಯಬೇಡಿ. ಭವಿಷ್ಯದಲ್ಲಿ ಅವನ ನಡವಳಿಕೆಯ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಹೇಳಿದ್ದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು