ವಾರಣಾಸಿ: ಮಳೆಗಾಗಿ ಕಪ್ಪೆಗಳಿಗೆ ಮದುವೆ; ವಿಡಿಯೋ ಇಲ್ಲಿದೆ ನೋಡಿ
ವಿಡಿಯೋದಲ್ಲಿ ಸ್ಥಳೀಯ ದಂಪತಿಗಳು ಹಿಂದೂ ಪುರೋಹಿತರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಾನಗಳ ಮೂಲಕ ಕಪ್ಪೆಗಳಿಗೆ ಮದುವೆ ಮಾಡಿಸುತ್ತಿರುವುದನ್ನು ಕಾಣಬಹುದು. ಆರಂಭದಲ್ಲಿ, ಕಪ್ಪೆಗಳಿಗೆ ವಧು ವರರಂತೆ ಕೆಂಪು ಬಣ್ಣದ ಶಾಲು ಹೊದಿಸಿ ನಂತರ ಹೂವಿನ ಹಾರಗಳನ್ನು ಹಾಕುತ್ತಿರುವುದನ್ನು ಕಾಣಬಹುದು.
ಜನರು ಸತ್ತವರ ಮದುವೆಯನ್ನು ನಡೆಸುವ ‘ಪ್ರೇತ ವಿವಾಹ’ವನ್ನು ಇತ್ತೀಚಿಗೆ ಭಾರೀ ಸುದ್ದಿಯಲ್ಲಿತ್ತು. ಇದೀಗ ಕಪ್ಪೆಗಳಿಗೆ ಮದುವೆ ಮಾಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾರಣಾಸಿಯಲ್ಲಿ ಇತ್ತೀಚೆಗೆ ಕಪ್ಪೆ ವಿವಾಹವನ್ನು ನಡೆಸುತ್ತಿರುವುದು ಕಂಡುಬಂದಿದೆ, ಇದನ್ನು ವರುಣ ದೇವರ ಆಶೀರ್ವಾದವನ್ನು ಕೋರಲು ಮತ್ತು ಮಳೆ ಬರಿಸಲು ಹಿಂದಿನಿಂದಲೂ ಇಲ್ಲಿ ಮಾಡಿಕೊಂಡು ಬರಲಾಗುತ್ತಿದೆ ಎಂದು ವರದಿಯಾಗಿದೆ.
ಎರಡು ಕಪ್ಪೆಗಳ ಮದುವೆಯ ದೃಶ್ಯಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ವಿಡಿಯೋದಲ್ಲಿ ಸ್ಥಳೀಯ ದಂಪತಿಗಳು ಹಿಂದೂ ಪುರೋಹಿತರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಾನಗಳ ಮೂಲಕ ಕಪ್ಪೆಗಳಿಗೆ ಮದುವೆ ಮಾಡಿಸುತ್ತಿರುವುದನ್ನು ಕಾಣಬಹುದು. ಆರಂಭದಲ್ಲಿ, ಕಪ್ಪೆಗಳಿಗೆ ವಧು ವರರಂತೆ ಕೆಂಪು ಬಣ್ಣದ ಶಾಲು ಹೊದಿಸಿ ನಂತರ ಹೂವಿನ ಹಾರಗಳನ್ನು ಹಾಕುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
A wedding like no other 🐸 Locals in Varanasi, UP arranged a “wedding” between a male and a female frog, in hopes of appeasing the rain gods and getting respite from the heat.
We can’t be sure if it works, but it makes for a whimsical tale for sure 🌧️☀️ pic.twitter.com/GKDOipKp8a
— Khabar Lahariya (@KhabarLahariya) June 13, 2024
ಇದನ್ನೂ ಓದಿ: ಅಂಬಾನಿ ಕುಟುಂಬದ ಸದಸ್ಯರು ಕುಡಿಯುವ 1 ಲೀ. ಹಾಲಿನ ಬೆಲೆ 152 ರೂ. ;ಯಾಕಿಷ್ಟು ದುಬಾರಿ ಗೊತ್ತಾ?
ಸಂಗೀತ ಮತ್ತು ಸಂಭ್ರಮದ ಲಹರಿಯೊಂದಿಗೆ ಸ್ಥಳೀಯರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕಪ್ಪೆ ವಿವಾಹವನ್ನು ನೆರವೇರಿಸಿದ್ದಾರೆ. ಮದುವೆಯ ಸಂದರ್ಭದಲ್ಲಿ ಮಹಿಳೆಯರ ಗುಂಪು ವಾದ್ಯಗಳನ್ನು ಬಾರಿಸುವುದು ಮತ್ತು ಭಜನೆಗಳನ್ನು ಹಾಡುವುದು ಕಂಡುಬಂದಿದೆ. ವರದಿಯ ಪ್ರಕಾರ, ಈ ಆಚರಣೆಯು ಪ್ರದೇಶದ ಜನರು ಮಳೆಗಾಗಿ ಮತ್ತು ಸುಡುವ ಶಾಖದಿಂದ ಪರಿಹಾರಕ್ಕಾಗಿ ಪ್ರಾರ್ಥಿಸುವ ವಿಧಾನವಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: