AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದ್ದಿಲ್ಲದೆ ನೆರವೇರಿತು ಬಿಗ್ ಬಾಸ್ ಸಿರಿ ಮದುವೆ; ಭಯ ಎನ್ನುತ್ತಲೇ ವಿವಾಹ ಆದ ನಟಿ

ಇತ್ತೀಚೆಗೆ ಸಿರಿ ಅವರು ಅರಿಶಿಣ ಸ್ನಾನ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಆಗಲೇ ಇವರ ಮದುವೆ ಬಗ್ಗೆ ಸುದ್ದಿ ಹರಿದಾಡಿತ್ತು. ಕೆಲವರು ಇದು ಧಾರಾವಾಹಿ ಅಥವಾ ಜಾಹೀರಾತಿನ ಶೂಟ್ ಇರಬಹುದು. ಈಗ ಈ ವಿಚಾರ ಖಚಿತವಾಗಿದೆ. ಸ್ವತಃ ಸಿರಿ ಅವರೇ ಇನ್​ಸ್ಟಾಗ್ರಾಮ್​ನಲ್ಲಿ ಸ್ಟೇಟಸ್ ಹಾಕಿದ್ದಾರೆ.

ಸದ್ದಿಲ್ಲದೆ ನೆರವೇರಿತು ಬಿಗ್ ಬಾಸ್ ಸಿರಿ ಮದುವೆ; ಭಯ ಎನ್ನುತ್ತಲೇ ವಿವಾಹ ಆದ ನಟಿ
ಸದ್ದಿಲ್ಲದೆ ನೆರವೇರಿತು ಬಿಗ್ ಬಾಸ್ ಸಿರಿ ಮದುವೆ; ಭಯ ಎನ್ನುತ್ತಲೇ ವಿವಾಹ ಆದ ನಟಿ
ರಾಜೇಶ್ ದುಗ್ಗುಮನೆ
|

Updated on: Jun 14, 2024 | 2:21 PM

Share

ಸಿರಿ (Siri) ಅವರು ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಗುರುತಿಸಿಕೊಂಡಿದ್ದಾರೆ. ಅವರು ‘ಬಿಗ್ ಬಾಸ್’ ಮನೆಗೆ ಬಂದು ಎಲ್ಲರ ಗಮನ ಸೆಳೆದರು. ಈಗ ಅವರ ವಿವಾಹ ನೆರವೇರಿದೆ. ಸದ್ದಿಲ್ಲದೆ ಸಿರಿ ಅವರು ವಿವಾಹ ಆಗಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಸಿರಿ ಅವರು ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಸಿರಿ ಅವರಿಗೆ ಆಪ್ತರು ಹಾಗೂ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಅಭಿನಂದನೆ ತಿಳಿಸಿದ್ದಾರೆ.

ಇತ್ತೀಚೆಗೆ ಸಿರಿ ಅವರು ಅರಿಶಿಣ ಸ್ನಾನ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಆಗಲೇ ಇವರ ಮದುವೆ ಬಗ್ಗೆ ಸುದ್ದಿ ಹರಿದಾಡಿತ್ತು. ಕೆಲವರು ಇದು ಧಾರಾವಾಹಿ ಅಥವಾ ಜಾಹೀರಾತಿನ ಶೂಟ್ ಇರಬಹುದು. ಈಗ ಈ ವಿಚಾರ ಖಚಿತವಾಗಿದೆ. ಸ್ವತಃ ಸಿರಿ ಅವರೇ ಇನ್​ಸ್ಟಾಗ್ರಾಮ್​ನಲ್ಲಿ ಸ್ಟೇಟಸ್ ಹಾಕಿದ್ದಾರೆ. ಸಿರಿ ಅವರು ಸಿಂಪಲ್ ಆಗಿ ಮದುವೆ ಆಗಿದ್ದಾರೆ. ಹಿರಿಯರೇ ನಿಶ್ಚಯಿಸಿದ ಮದುವೆ ಇದು ಎನ್ನಲಾಗಿದೆ. ಜೂನ್ 13ರಂದು ಈ ಮದುವೆ ನಡೆದಿದೆ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಕೋರುತ್ತಿದ್ದಾರೆ.

ಹುಡುಗ ಯಾರು?

ಚಿಕ್ಕಬಳ್ಳಾರಪುರ ಬಳಿ ಇರುವ ಭೋಗ ನಂದೀಶ್ವರ ದೇವಾಲಯದಲ್ಲಿ ಈ ಮದುವೆ ನಡೆದಿದೆ. ಸಿರಿ ಅವರು ಮದುವೆ ಆಗಿದ್ದು ಉದ್ಯಮಿ ಪ್ರಭಾಕರ್​ ಬೋರೇಗೌಡ ಎಂಬುವವರನ್ನು. ಅವರು ಮಂಡ್ಯ ಮೂಲದವರಾಗಿದ್ದು, ಬೆಂಗಳೂರಲ್ಲಿ ಸೆಟಲ್ ಆಗಿದ್ದಾರೆ. ಅವರು ಉದ್ಯಮಿ. ಜೊತೆಗೆ ಚಿತ್ರರಂಗದ ಜೊತೆಯೂ ನಂಟು ಹೊಂದಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: ಕಾರ್ತಿಕ್​-ತುಕಾಲಿ ಸಂತೋಷ್​ ಕಿಸ್​; ಕೂದಲು ಕಿತ್ತ ನಮ್ರತಾ, ಸಿರಿ: ವಿಡಿಯೋ ನೋಡಿ..

ಇತ್ತು ಭಯ

ಸಿರಿ ಅವರು ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ಜವಾಬ್ದಾರಿ ಸಿರಿ ಮೇಲೆಯೆ ಇದೇ. ಒಂದೊಮ್ಮೆ ಮದುವೆ ಆದರೆ ಇದಕ್ಕೆಲ್ಲ ಅವಕಾಶ ಸಿಗುತ್ತದೆಯೋ ಅಥವಾ ಇಲ್ಲವೋ ಎನ್ನುವ ಭಯ ಅವರಿಗೆ ಕಾಡಿತ್ತು. ಇದರ ಜೊತೆಗೆ ಮದುವೆ ಆಗೋ ಹುಡುಗ ಹೇಗೆ ಇರುತ್ತಾನೇನೋ ಎನ್ನುವ ಭಯ ಕಾಡಿತ್ತು.

ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕನ್ನಡಪರ ಮಾತನಾಡಿ ‘ಕೋಗಿಲು’ ಆಗು, ಇಲ್ಲದಿದ್ರೆ ಕಾಗೆ ಆಗ್ತೀಯಾ: ಅಶೋಕ್
ಕನ್ನಡಪರ ಮಾತನಾಡಿ ‘ಕೋಗಿಲು’ ಆಗು, ಇಲ್ಲದಿದ್ರೆ ಕಾಗೆ ಆಗ್ತೀಯಾ: ಅಶೋಕ್
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ರೂರ್ಕೆಲಾ ವಾಯುನೆಲೆಯಲ್ಲಿ ವಿಮಾನ ಅಪಘಾತ; ಪೈಲಟ್ ಸೇರಿದಂತೆ 6 ಜನರಿಗೆ ಗಾಯ
ರೂರ್ಕೆಲಾ ವಾಯುನೆಲೆಯಲ್ಲಿ ವಿಮಾನ ಅಪಘಾತ; ಪೈಲಟ್ ಸೇರಿದಂತೆ 6 ಜನರಿಗೆ ಗಾಯ