AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಪ್ರಥಮ್​ ಜೊತೆ ಫೈಟ್​ ಮಾಸ್ಟರ್​ ಕೌರವ ವೆಂಕಟೇಶ್​ ಹೊಸ ಸಿನಿಮಾ ‘ಕೊಕೇನ್​’

‘ಕೊಕೇನ್​’ ಸಿನಿಮಾದಲ್ಲಿ ಪ್ರಥಮ್​ ಜೊತೆ ಆರನಾ, ಬಿ.ಸಿ. ಪಾಟೀಲ್, ಗೋಕುಲ್‌, ಅನ್ವಿತಿ ಶೆಟ್ಟಿ, ಕಾಮಿಡಿ ಕಿಲಾಡಿಗಳು ಸಂತು, ರವೀಂದ್ರನಾಥ್, ಮುನಿ, ಓಂ ಪ್ರಕಾಶ್‌ ರಾವ್ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ. ಕೌರವ ವೆಂಕಟೇಶ್​ ನಿರ್ದೇಶನ, ಪುನೀತ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬರಲಿದೆ. ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿತು.

ನಟ ಪ್ರಥಮ್​ ಜೊತೆ ಫೈಟ್​ ಮಾಸ್ಟರ್​ ಕೌರವ ವೆಂಕಟೇಶ್​ ಹೊಸ ಸಿನಿಮಾ ‘ಕೊಕೇನ್​’
‘ಕೊಕೇನ್​’ ಚಿತ್ರತಂಡ
ಮದನ್​ ಕುಮಾರ್​
|

Updated on: Jun 14, 2024 | 9:58 PM

Share

ಸಾಹಸ ನಿರ್ದೇಶಕ ಕೌರವ ವೆಂಕಟೇಶ್​ (Kaurava Venkatesh) ಅವರು ಈಗ ನಿರ್ದೇಶಕರಾಗಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ನಟ ಪ್ರಥಮ್​ ಜೊತೆಗೆ ಅವರು ‘ಕೊಕೇನ್​’ ಸಿನಿಮಾ (Cocaine Movie) ಶುರು ಮಾಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಈವರೆಗೂ 1600ಕ್ಕೂ ಅಧಿಕ ಸಿನಿಮಾಗಳಿಗೆ ಸಾಹಸ ಸಂಯೋಜಕರಾಗಿ ಕೌರವ ವೆಂಕಟೇಶ್​ ಅವರು ಕೆಲಸ ಮಾಡಿದ್ದಾರೆ. ಆ ಮೂಲಕ ದಕ್ಷಿಣ ಭಾರತದ ಹೆಸರಾಂತ ಸ್ಟಂಟ್​ ಕೊರಿಯೋಗ್ರಫರ್​​ ಆಗಿ ಅವರು ಫೇಮಸ್​ ಆಗಿದ್ದಾರೆ. ಬಿಗ್​ ಬಾಸ್​ ಖ್ಯಾತಿಯ ಪ್ರಥಮ್ (Pratham)​ ಅಭಿನಯದ ಹೊಸ ಸಿನಿಮಾಗೆ ಕೌರವ ವೆಂಕಟೇಶ್​ ನಿರ್ದೇಶನ ಮಾಡುತ್ತಿದ್ದಾರೆ. ಇಷ್ಟು ವರ್ಷಗಳ ಅನುಭವವನ್ನು ಅವರು ‘ಕೊಕೇನ್​’ ಸಿನಿಮಾಗೆ ಧಾರೆ ಎರೆಯಲಿದ್ದಾರೆ.

ಕೌರವ ವೆಂಕಟೇಶ್​ ಅವರು ‘ಕೊಕೇನ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುವುದರ ಜೊತೆಗೆ ಸಾಹಸ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ‘ದ ಡೆಫಿನಿಷನ್ ಆಫ್ ಪ್ಯಾಟ್ರಿಯಾಟಿಸಮ್’ ಎಂದು ಟ್ಯಾಗ್​ಲೈನ್​ ಈ ಸಿನಿಮಾಗೆ ಇದೆ. ‘ಅಯೋಧ್ಯ ರಾಮ್ ಪ್ರೊಡಕ್ಷನ್ಸ್’ ಮೂಲಕ ಪುನೀತ್ ಅವರು ‘ಕೊಕೇನ್​’ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ನಿರ್ದೇಶಕರ ಜನ್ಮದಿನದ ಪ್ರಯುಕ್ತ ಕಂಠೀರವ ಸ್ಟುಡಿಯೋದಲ್ಲಿ ಈ ಸಿನಿಮಾಗೆ ಮುಹೂರ್ತ ಮಾಡಲಾಯಿತು.

‘ಕೊಕೇನ್​’ ಸಿನಿಮಾದ ಮೊದಲ ದೃಶ್ಯಕ್ಕೆ ಬಿ.ಸಿ. ಪಾಟೀಲ್ ಅವರು ಕ್ಲ್ಯಾಪ್ ಮಾಡಿದರು. ಹಿರಿಯ ನಿರ್ದೇಶಕ ಓಂ ಪ್ರಕಾಶ್‌ ರಾವ್ ಅವರು ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದರು. ಈ ಸಿನಿಮಾದಲ್ಲಿ ಬಿ.ಸಿ. ಪಾಟೀಲ್ ಅವರು ಕೇಂದ್ರ ಸಚಿವನ ಪಾತ್ರ ಮಾಡುತ್ತಿದ್ದಾರೆ. ಓಂ ಪ್ರಕಾಶ್‌ ರಾವ್ ಅವರು ಇನ್ಸ್‌ಪೆಕ್ಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮುಹೂರ್ತದ ಬಳಿಕ ಚಿತ್ರತಂಡದವರು ಮಾಹಿತಿ ಹಂಚಿಕೊಂಡರು.

ನಿರ್ದೇಶಕ ಕೌರವ ವೆಂಕಟೇಶ್​ ಮಾತನಾಡಿ ಸಿನಿಮಾ ಬಗ್ಗೆ ತಿಳಿಸಿದರು. ‘ಪ್ರಥಮ್ ಅವರು ಈ ಸಿನಿಮಾಗೆ ಕಥೆ ಹಾಗೂ ಚಿತ್ರಕಥೆ ಬರೆಯುವುದರ ಜೊತೆಗೆ ಹೀರೋ ಆಗಿ ನಟಿಸುತ್ತಿದ್ದಾರೆ. 4 ಹಾಡುಗಳು, 5 ಫೈಟ್ ಇರುತ್ತದೆ. ಪ್ರತಿ ಸನ್ನಿವೇಶಗಳು ಊಹಿಸಲಾಗದ ರೀತಿ ಬರುತ್ತದೆ. ಮಂಗಳೂರು, ಬೆಂಗಳೂರು, ರಷ್ಯಾದಲ್ಲಿ ಶೂಟಿಂಗ್​ ಮಾಡುವ ಆಲೋಚನೆ ಇದೆ. ಕಾಮಿಡಿ, ಮಾಸ್ ಅಂಶಗಳ ಜೊತೆ ರೊಮಾನ್ಸ್ ಕೂಡ ಇರಲಿದೆ. ಹಾಗಾಗಿ ಪ್ರೇಕ್ಷಕರಿಗೆ ಬೋರ್ ಆಗಲ್ಲ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತೇವೆ’ ಎಂದು ಕೌರವ ವೆಂಕಟೇಶ್​ ಹೇಳಿದರು.

ಇದನ್ನೂ ಓದಿ: ‘ಕಾದಾಡಿ’ ಸಿನಿಮಾದ ಐಟಂ ಸಾಂಗ್​ನಲ್ಲಿ ಆದಿತ್ಯ ಶಶಿಕುಮಾರ್, ಸೋನಿ ಸಖತ್ ಡ್ಯಾನ್ಸ್

ಈ ಸಿನಿಮಾದ ಕಥೆ ಏನು ಎಂಬ ಬಗ್ಗೆ ನಟ ಪ್ರಥಮ್​ ಸುಳಿವು ನೀಡಿದರು. ವಿದೇಶದಿಂದ ಸಾವಿರ ಕೋಟಿ ರೂಪಾಯಿ ಮೌಲ್ಯದ ಒಂದು ಕಂಟೈನರ್​ ಬರುತ್ತದೆ. ಅದು ಬೆಂಗಳೂರಿನಿಂದ ಗೋವಾಗೆ ಹೋಗದ ರೀತಿಯಲ್ಲಿ ತಡೆಯಲು ಹೀರೋ ಯಾವೆಲ್ಲ ರೀತಿ ಕಷ್ಟಪಡುತ್ತಾನೆ ಎಂಬ ಕಥೆ ಈ ಸಿನಿಮಾದಲ್ಲಿ ಇರಲಿದೆ. ರವಿ ಕಾಳೆ, ಶಶಿಕುಮಾರ್​ ಕೂಡ ಈ ಸಿನಿಮಾದಲ್ಲಿ ಇರಲಿದ್ದಾರೆ. ಪ್ರಥಮ್​ ಜೊತೆ ಆರನಾ, ಅನ್ವಿತಿ ಶೆಟ್ಟಿ, ಗೋಕುಲ್‌, ಕಾಮಿಡಿ ಕಿಲಾಡಿಗಳು ಸಂತು, ಮುನಿ, ರವೀಂದ್ರನಾಥ್ ಮುಂತಾದ ಕಲಾವಿದರು ‘ಕೊಕೇನ್​’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಯೋಗರಾಜ್​ ಭಟ್, ಭರ್ಜರಿ ಚೇತನ್ ಅವರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಹಾಡುಗಳಿಗೆ ಡಿ.ಆರ್. ಕಮ್ಮಿ ಅಭಿಷೇಕ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಾಮ್ರಾಟ್ ಅವರ ಛಾಯಾಗ್ರಹಣ, ರಘು ಅವರ ಸಂಕಲನ ಈ ಸಿನಿಮಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ