ನೇಹಾ ಹಿರೇಮಠ್ ಹತ್ಯೆ: ಫಯಾಜ್ಗೆ ಭಾರತ ರತ್ನ ಕೊಡಿ ಅಂತ ಪ್ರಥಮ್ ಹೇಳಿದ್ದು ಯಾಕೆ?
‘ನನ್ನ ಬಾಯಲ್ಲಿ ಅವನ ಹೆಸರು ಹೇಳಲ್ಲ. ಅವನಿಗೆ ಆ ಯೋಗ್ಯತೆ ಇಲ್ಲ. ಮುಸ್ಲಿಮರಲ್ಲಿ ನಾನು ಒಂದೇ ಕೇಳಿಕೊಳ್ಳುವುದು. ಲವ್ ಮಾಡಬೇಕು ಎಂದರೆ ನಿಮ್ಮವರನ್ನೇ ಮಾಡಿಕೊಳ್ಳಿ. ಹಿಂದು ಹುಡುಗಿಯರ ಜೊತೆ ನಿಮಗೆ ಲವ್ ಯಾಕೆ? ಅದು ನನಗೆ ಇಷ್ಟ ಆಗುವುದಿಲ್ಲ. ಪ್ರೀತಿಗೆ ಕಣ್ಣಿಲ್ಲ ಅಂತ ಸಿನಿಮಾದಲ್ಲಿ ಡೈಲಾಗ್ ಹೊಡೆಯುವ ಯಾವನಾದ್ರೂ ಇಲ್ಲಿ ಬಂದು ನ್ಯಾಯ ಕೊಡಿಸುತ್ತಾನಾ’ ಎಂದು ಪ್ರಥಮ್ ಪ್ರಶ್ನಿಸಿದ್ದಾರೆ.
ಪ್ರೀತಿ ನಿರಾಕರಿಸಿದ ನೇಹಾ ಹಿರೇಮಠ್ (Neha Hiremath) ಅವರನ್ನು ಕೊಲೆ ಮಾಡಿದ ಫಯಾಜ್ (Fayaz) ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತ ಆಗುತ್ತಿದೆ. ಹಲವಾರು ಸೆಲೆಬ್ರಿಟಿಗಳು ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ನಟ ಪ್ರಥಮ್ ಅವರು ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್ ಅವರ ಪಾಲಕರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ‘ಟಿವಿ9 ಕನ್ನಡ’ ಜೊತೆ ಮಾತನಾಡಿದ ಪ್ರಥಮ್ ಅವರು ಫಯಾಜ್ನ ತಾಯಿ ನೀಡಿದ್ದ ಹೇಳಿಕೆಯನ್ನು ಖಂಡಿಸಿದ್ದಾರೆ. ‘ನನ್ನ ಮಗ ಅಂಥವನಾಗಿರಲಿಲ್ಲ’ ಎಂದು ಫಯಾಜ್ ತಾಯಿ ಹೇಳಿದ್ದಕ್ಕೆ ಪ್ರಥಮ್ (Pratham) ವ್ಯಂಗ್ಯವಾಗಿದ್ದಾರೆ. ‘ನನ್ನ ಮಗ ಸೊಳ್ಳೆಯನ್ನೂ ಹೊಡೆಯಲ್ಲ ಅಂತ ಅವರ ತಾಯಿ ಕೇಳಿದ್ರಂತೆ. ಹಾಗಾದರೆ ಅವರ ಹುಡುಗ ಕೊಲೆ ಮಾಡಿಲ್ಲ. ಸಿಜೆ ಅಥವಾ ಎಐ ಮೂಲಕ ಈ ರೀತಿ ಚುಚ್ಚಿದ್ದಾರೆ. ವಿರೋಧ ಪಕ್ಷದವರು ಹೀಗೆಲ್ಲ ಮಾಡಿದ್ದಾರೆ. ಅವನು ಬಹಳ ಮುಗ್ಧ. ಈ ವರ್ಷದ ಭಾರತ ರತ್ನ, ನೋಬೆಲ್, ಆಸ್ಕರ್ ಹಾಗೂ ರಾಜ್ಯೋತ್ಸವ ಪ್ರಶಸ್ತಿಗೆ ಅವನ ಹೆಸರನ್ನು ಶಿಫಾರಸು ಮಾಡಬೇಕು ಹಾಗೂ ತಕ್ಷಣದಲ್ಲಿ ಅವನಿಗೆ ಪ್ರಶಸ್ತಿ ಕೊಡಬೇಕು ಅಂತ ನಾನು ಕೇಳಿಕೊಳ್ಳುತ್ತೇನೆ’ ಎಂದು ಪ್ರಥಮ್ ವ್ಯಂಗ್ಯವಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.