‘ನಿಮ್ಮ ಧರ್ಮದಲ್ಲೇ 5 ಮದುವೆ ಮಾಡಿಕೊಳ್ಳಿ; ಹಿಂದೂ ಹುಡುಗಿ ನಿಮಗೆ ಯಾಕೆ’: ಪ್ರಥಮ್​ ಆಕ್ರೋಶ

ನಟ ಪ್ರಥಮ್​ ಅವರು ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಿ ನೇಹಾ ಹಿರೇಮಠ್​ ಅವರ ಮನೆಗೆ ಭೇಟಿ ನೀಡಿದ್ದಾರೆ. ಪಾಗಲ್​ ಪ್ರೇಮಿಯಿಂದ ಕೊಲೆಯಾದ ಯುವತಿಯ ತಂದೆ-ತಾಯಿಗೆ ಅವರು ಸಾಂತ್ವನ ಹೇಳಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಥಮ್​ ಅವರು ತೀವ್ರ ಆಕ್ರೋಶ ವ್ಯಕ್ತಡಿಸಿದ್ದಾರೆ. ಅಂತರ್​ ಧರ್ಮೀಯ ವಿವಾಹಕ್ಕೆ ಕಠಿಣ ಕಾನೂನು ಬೇಕು ಎಂದು ಅವರು ಹೇಳಿದ್ದಾರೆ.

‘ನಿಮ್ಮ ಧರ್ಮದಲ್ಲೇ 5 ಮದುವೆ ಮಾಡಿಕೊಳ್ಳಿ; ಹಿಂದೂ ಹುಡುಗಿ ನಿಮಗೆ ಯಾಕೆ’: ಪ್ರಥಮ್​ ಆಕ್ರೋಶ
ಪ್ರಥಮ್​, ನೇಹಾ ಹಿರೇಮಠ್​
Follow us
ಮದನ್​ ಕುಮಾರ್​
|

Updated on: Apr 21, 2024 | 3:36 PM

ಹುಬ್ಬಳಿಯ ಯುವತಿ ನೇಹಾ ಹಿರೇಮಠ್ (Neha Hiremath) ನಿಧನಕ್ಕೆ ಅನೇಕರು ಪ್ರತಿಕ್ರಿಯಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ನಟ ಪ್ರಥಮ್​ ಅವರು ನೇಹಾ ತಂದೆ-ತಾಯಿಯನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕಲಾವಿದರು ಎಲೆಕ್ಷನ್​ ಪ್ರಚಾರಕ್ಕೆ ಬರುತ್ತಾರೆ. ಇಂಥ ಘಟನೆ ಆದಾಗ ಯಾರೂ ಬರಲ್ಲ. ಅಂಥ ಕಲಾವಿದರನ್ನು ತಲೆ ಮೇಲೆ ಇಟ್ಟುಕೊಂಡು ಮೆರೆಸಬೇಡಿ. ನೇಹಾ ಹಿರೇಮಠ್​ ನಿಧನದಿಂದ (Neha Hiremath Death) ಚಿತ್ರರಂಗದ ಎಲ್ಲರಿಗೂ ನೋವಾಗಿದೆ. ಪ್ರಹ್ಲಾದ್​ ಜೋಶಿ ಅವರೇ ನೀವು 10 ವರ್ಷದಿಂದ ಅಧಿಕಾರದಲ್ಲಿ ಇದ್ದೀರಿ. ಅಂತರ್​ ಧರ್ಮೀಯ ವಿವಾಹದ ಬಗ್ಗೆ ಕಠಿಣ ನಿಯಮ ತೆಗೆದುಕೊಂಡು ಬನ್ನಿ’ ಎಂದು ಪ್ರಥಮ್​ (Pratham) ಹೇಳಿದ್ದಾರೆ.

‘ಹಿಂದೂ ಧರ್ಮದ ಹುಡುಗಿಯರನ್ನು ಬೇರೆ ಧರ್ಮದವರು ಮದುವೆ ಆಗಲೇಬಾರದು. ಯಾಕೆ ಆಗಬೇಕು? ಹಿಂದೂ ಹುಡುಗಿಯರ ಜೊತೆ ನೀವು ಲವ್​ ಯಾಕೆ ಮಾಡುತ್ತೀರಿ? ಅದರಿಂದಲೇ ತಾನೆ ಇಷ್ಟೆಲ್ಲ ಕ್ರೌರ್ಯ ಆಗುತ್ತಿರುವುದು. ನಿಮ್ಮ ಪಾಡಿಗೆ, ನಿಮ್ಮ ಸಮುದಾಯದವರನ್ನೇ ಮದುವೆ ಆಗಿ. ಹಿಂದೂ ಹುಡುಗಿಯರ ಜೊತೆ ನಿಮಗೆ ಏನು ಕೆಲಸ? ನಿಮ್ಮ ಸಮುದಾಯದಲ್ಲೇ ಬೇಕಾದರೆ ಒಂದಲ್ಲ ಎರಡಲ್ಲ 5 ಮದುವೆ ಮಾಡಿಕೊಳ್ಳಿ. ನಿಮ್ಮನ್ನು ಯಾರು ಕೇಳ್ತಾರೆ? ಇನ್ನೊಮ್ಮೆ ಹಿಂದೂಗಳ ತಂಟೆಗೆ ಬರಬೇಡಿ’ ಎಂದು ನಟ ಪ್ರಥಮ್​ ಹೇಳಿದ್ದಾರೆ.

ಇದನ್ನೂ ಓದಿ: ‘ನೇಹಾ ಹಿರೇಮಠ್ ಹತ್ಯೆ ಅತ್ಯಂತ ಹೀನ ಕೃತ್ಯ’: ಧ್ರುವ ಸರ್ಜಾ ಆಕ್ರೋಶ

‘ನನಗೆ ತುಂಬ ನೋವಾಯಿತು. ಅದಕ್ಕಾಗಿಯೇ ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದೇನೆ. ಕಡೆಗಣಿಸಿದರೆ ಪ್ರಾಣ ತೆಗೆದುಬಿಡೋದಾ? ನನ್ನ ಮಗ ಅಂಥವನಲ್ಲ ಎಂದು ಅವರ ತಾಯಿ ಹೇಳ್ತಾರೆ. ವೀರಪ್ಪ ನಾಯಕ ಸಿನಿಮಾದ ಕಥೆ ರೀತಿ ಹೇಳಿಕೆ ನೀಡ್ತಾರೆ. 20 ವರ್ಷದ ಹಿಂದೆ ಇವರು ಸಿಕ್ಕಿದ್ದಿದ್ರೆ ನಿರ್ದೇಶಕರು ಶ್ರುತಿ ಬದಲಿಗೆ ಇವರನ್ನೇ ಆಯ್ಕೆ ಮಾಡುತ್ತಿದ್ದರು’ ಎಂದಿದ್ದಾರೆ ಪ್ರಥಮ್​.

ಇದನ್ನೂ ಓದಿ: ನೇಹಾ ಹಿರೇಮಠ್ ಸಾವಿಗೆ ನ್ಯಾಯ ಕೇಳಿದ ಸೆಲೆಬ್ರಿಟಿಗಳು; ಏನಂದ್ರು ದರ್ಶನ್​?

‘ಈಗ ಯಾರೋ ಬಂದು ಸಮಾಧಾನ ಹೇಳಿದರು. ಸಮಾಧಾನ ಹೇಳುವುದೇ ಹೌದಾದರೆ ಅವರ ಸಮುದಾಯದ ಯಾರೂ ಕೂಡ ಈ ಕೇಸ್​ ತೆಗೆದುಕೊಳ್ಳಬಾರದು ಅಂತ ಹೇಳಿ. ಮುಖಂಡರು ಹೇಳಿಕೆಗಳನ್ನು ಕೊಡುವಾಗ ನೋವು ಮಾಡಬೇಡಿ. ಇದರ ಜೊತೆ ಪಾಲಕರಿಗೆ ಒಂದು ಕಿವಿಮಾತು. ನಿಮ್ಮ ಮಕ್ಕಳು ಯಾರ ಜೊತೆ ಇರುತ್ತಾರೆ, ಎಲ್ಲಿಗೆ ಹೋಗುತ್ತಾರೆ ಎಂಬುದನ್ನು ಗಮನಿಸಿ. ಅವನು 9 ಸಲ ಚುಚ್ಚಿದ್ದಾನೆ ಎಂದರೆ ಅವನ ಮನಸ್ಥಿತಿ ಎಷ್ಟು ವಿಕೃತ ಆಗಿದೆ ನೋಡಿ. ಈ ವಿಚಾರದಲ್ಲಿ ರಾಜಕೀಯ ಬೇಡ. ಸಿನಿಮಾದ ಪ್ರಚಾರಕ್ಕೆ ಈ ಊರಿಗೆ ಬರಬೇಕು ಎಂದುಕೊಂಡಿದ್ದೆ. ಆದರೆ ಈಗ ಸಾವಿನ ಮನೆಗೆ ಬರುವಂತೆ ಆಗಿದೆ’ ಎಂದು ಪ್ರಥಮ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್