‘ವೀರ ಮದಕರಿ’ ಚಿತ್ರದಲ್ಲಿ ನಟಿಸಿದ್ದ ಬಾಲ ಕಲಾವಿದೆ ಜೆರುಶಾ ಈಗ ಹೀರೋಯಿನ್​

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಮಹೇಶ್​ ಬಾಬು ಅವರು ಈಗಾಗಲೇ ಅನೇಕ ನಾಯಕಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಆ ಪೈಕಿ ಬಹುತೇಕ ನಟಿಯರು ಯಶಸ್ವಿಯಾಗಿದ್ದಾರೆ. ಮಹೇಶ್​ ಬಾಬು ನಿರ್ದೇಶನದ ಹೊಸ ಸಿನಿಮಾಗೆ ಈಗ ನಟಿ ಜೆರುಶಾ ಅವರು ಹೀರೋಯಿನ್​ ಆಗಿದ್ದಾರೆ. ಮೇ ತಿಂಗಳಿಂದ ಈ ಚಿತ್ರದ ಶೂಟಿಂಗ್​ ಆರಂಭ ಆಗುತ್ತಿದೆ. ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ..

‘ವೀರ ಮದಕರಿ’ ಚಿತ್ರದಲ್ಲಿ ನಟಿಸಿದ್ದ ಬಾಲ ಕಲಾವಿದೆ ಜೆರುಶಾ ಈಗ ಹೀರೋಯಿನ್​
ಜೆರುಶಾ, ಸ್ಮೈಲ್​ ಗುರು ರಕ್ಷಿತ್​
Follow us
ಮದನ್​ ಕುಮಾರ್​
|

Updated on: Apr 21, 2024 | 1:02 PM

ನಿರ್ದೇಶಕ ಮಹೇಶ್ ಬಾಬು (Director Mahesh Babu) ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ‘ಆಕಾಶ್’, ‘ಅರಸು’, ‘ಅಭಯ್​’, ‘ಮೆರವಣಿಗೆ’ ಮುಂತಾದ ಸಿನಿಮಾಗೆ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈಗ ಅವರು ಮತ್ತೊಂದು ನೂತನ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಪ್ರತಿ ಬಾರಿ ಮಹೇಶ್​ ಬಾಬು ಅವರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಾರೆ. ‘ಅಪರೂಪ’ ಸಿನಿಮಾದಲ್ಲೂ ಅವರು ಯುವ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ (Kannada Film Industry) ಪರಿಚಯಿಸಿದ್ದರು. ಈಗ ಅವರು ಸ್ಮೈಲ್ ಗುರು ರಕ್ಷಿತ್ ಅವರನ್ನು ನಾಯಕನಾಗಿ ಸ್ಯಾಂಡಲ್​ವುಡ್​ಗೆ ಪರಿಚಯಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ನಟಿ ಜೆರುಶಾ (Jerusha) ಕೂಡ ಅಭಿನಯಿಸುತ್ತಿದ್ದಾರೆ.

ಡೈರೆಕ್ಟರ್​ ಮಹೇಶ್ ಬಾಬು ಜೊತೆ ರಕ್ಷಿತ್ ಅವರ ಹೊಸ ಸಿನಿಮಾ ಈಗಾಗಲೇ ಘೋಷಣೆ ಆಗಿದೆ. ಈಗಿನ ಹೊಸ ನ್ಯೂಸ್​ ಏನಂದರೆ ಈ ಸಿನಿಮಾದ ಮೂಲಕ ಜೆರುಶಾ ಅವರನ್ನು ನಾಯಕಿಯನ್ನಾಗಿ ಅವರು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲಿದ್ದಾರೆ. ‘ಮೆರವಣಿಗೆ’ ಸಿನಿಮಾದಿಂದ ಐಂದ್ರಿತಾ ರೇ, ‘ಚಿರು’ ಸಿನಿಮಾದಿಂದ ಕೃತಿ ಕರಬಂದ, ‘ಅಜಿತ್’ ಚಿತ್ರದಿಂದ ನಿಕ್ಕಿ ಗಲ್ರಾನಿ, ‘ಕ್ರೇಜಿ ಬಾಯ್’ ಸಿನಿಮಾದ ಮೂಲಕ ಆಶಿಕಾ ರಂಗನಾಥ್ ಹಾಗೂ ‘ಅಪರೂಪ’ ಚಿತ್ರದ ಮೂಲಕ ನಟಿ ಹೃತಿಕಾ ಶ್ರೀನಿವಾಸ್ ಅವರನ್ನು ಪರಿಚಯಿಸಿದ್ದು ಇದೇ ಮಹೇಶ್​ ಬಾಬು. ಈಗ ಮಹೇಶ್ ಬಾಬು ಅವರ ಸಿನಿಮಾ ಮೂಲಕ ಜೆರುಶಾ ಅವರು ಹೀರೋಯಿನ್​ ಆಗಿ ಲಾಂಚ್ ಆಗುತ್ತಿದ್ದಾರೆ.

ನಟಿ ಜೆರುಶಾ ಅವರಿಗೆ ನಟನೆ ಹೊಸದೇನೂ ಅಲ್ಲ. ಈ ಮೊದಲು ಕಿಚ್ಚ ಸುದೀಪ್ ನಟನೆಯ ‘ವೀರ ಮದಕರಿ’ ಸಿನಿಮಾದಲ್ಲಿ ಬಾಲ ನಟಿಯಾಗಿ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು. ಅಲ್ಲದೇ, ಅನೇಕ ಜಾಹೀರಾತುಗಳಲ್ಲೂ ನಟಿಸಿದ್ದರು. ರಂಗಭೂಮಿ ಹಿನ್ನೆಲೆ ಕೂಡ ಅವರಿಗೆ ಇದೆ. ಜೆರುಶಾ ಅವರು ಈಗ ಮಹೇಶ್ ಬಾಬು ನಿರ್ದೇಶನದ ಸಿನಿಮಾದ ಮೂಲಕ ನಾಯಕಿಯಾಗಿ ದೊಡ್ಡಪರದೆಗೆ ಎಂಟ್ರಿ ನೀಡಲು ಸಿದ್ಧರಾಗಿದ್ದಾರೆ.

ಇದನ್ನೂ ಓದಿ: ಒಟಿಟಿಗೆ ಕಾಲಿಟ್ಟ ‘ಗಾಮಿ’ಗೆ ಮೆಚ್ಚುಗೆ; ವಿಶ್ವಕ್ ಸೇನ್ ಸಿನಿಮಾದ ಕಥೆ ಏನು?

ಡ್ಯಾನ್ಸ್ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಖ್ಯಾತಿ ಗಳಿಸಿದ ಸ್ಮೈಲ್ ಗುರು ರಕ್ಷಿತ್ ಅವರಿಗೆ ಜೋಡಿಯಾಗಿ ಜೆರುಶಾ ನಟಿಸಲಿದ್ದಾರೆ. ಈ ಸಿನಿಮಾದಲ್ಲಿನ ಮತ್ತೊಂದು ಪ್ರಮುಖ ಪಾತ್ರಕ್ಕೆ ಇನ್ನೋರ್ವ ನಟಿಯ ಆಯ್ಕೆ ಆಗಲಿದೆ. ಆ ಬಗ್ಗೆ ಮಹೇಶ್ ಬಾಬು ಅವರು ಶೀಘ್ರದಲ್ಲೇ ಮಾಹಿತಿ ಹಂಚಿಕೊಳ್ಳಲಿದ್ದಾರೆ.ಈ ಹೊಸ ಚಿತ್ರಕ್ಕೆ ಇನ್ನೂ ಟೈಟಲ್​ ಅಂತಿಮವಾಗಿಲ್ಲ. ಯುವ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ಚೇತನ್ ಹಾಗೂ ಅನುರಾಗ್ ಅವರು ನಿರ್ಮಾಣ ಮಾಡಲಿದ್ದಾರೆ. ಮೇ ತಿಂಗಳಲ್ಲಿ ಶೂಟಿಂಗ್​ ಆರಂಭ ಆಗಲಿದೆ. ಅನೂಪ್ ಸೀಳಿನ್ ಅವರ ಸಂಗೀತ ನಿರ್ದೇಶನ, ಸತ್ಯ ಅವರ ಛಾಯಾಗ್ರಾಹಣ ಈ ಸಿನಿಮಾಗೆ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.