Gaami Movie: ಒಟಿಟಿಗೆ ಕಾಲಿಟ್ಟ ‘ಗಾಮಿ’ಗೆ ಮೆಚ್ಚುಗೆ; ವಿಶ್ವಕ್ ಸೇನ್ ಸಿನಿಮಾದ ಕಥೆ ಏನು?
ವಿಶ್ವಕ್ ಸೇನ್ ಅವರು ಶಂಕರ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಂಕರ್ಗೆ ವಿಚಿತ್ರ ವ್ಯಕ್ತಿ. ಯಾವುದಾದರೂ ಮನುಷ್ಯನ ಸ್ಪರ್ಶ ಆದರೆ ಆತನ ದೇಹ ಇದನ್ನು ತಡೆದುಕೊಳ್ಳುವುದೇ ಇಲ್ಲ. ಇದಕ್ಕೆ ಪರಿಹಾರ ಏನು? ಅದರ ಹುಡುಕಾಟದಲ್ಲಿ ಆತ ಏನು ಮಾಡುತ್ತಾನೆ ಅನ್ನೋದು ‘ಗಾಮಿ’ ಸಿನಿಮಾದ ಕಥೆ.
ವಿಶ್ವಕ್ ಸೇನ್ ನಟನೆಯ ‘ಗಾಮಿ’ ಸಿನಿಮಾ (Gaami Movie) ಜೀ 5 ಮೂಲಕ ಪ್ರಸಾರ ಕಂಡು ಮೆಚ್ಚುಗೆ ಪಡೆದಿದೆ. ತೆಲುಗು ಸಿನಿಮಾ ಇದಾಗಿದ್ದು, ಕನ್ನಡ ಮೊದಲಾದ ಭಾಷೆಗೆ ಡಬ್ ಆಗಿ ಒಟಿಟಿಯಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ನೋಡಿ ಜನರು ಮೆಚ್ಚಿಕೊಂಡಿದ್ದಾರೆ. ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಸಾಕಷ್ಟು ಟ್ವಿಸ್ಟ್ಗಳನ್ನು ಈ ಹೊಂದಿದೆ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ವಿಶ್ವಕ್ ಸೇನ್ ಅವರು ಶಂಕರ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಂಕರ್ಗೆ ವಿಚಿತ್ರ ವ್ಯಕ್ತಿ. ಯಾವುದಾದರೂ ಮನುಷ್ಯನ ಸ್ಪರ್ಶ ಆದರೆ ಆತನ ದೇಹ ಇದನ್ನು ತಡೆದುಕೊಳ್ಳುವುದೇ ಇಲ್ಲ. ಇದಕ್ಕೆ ಪರಿಹಾರ ಏನು? ಅದರ ಹುಡುಕಾಟದಲ್ಲಿ ಆತ ಏನು ಮಾಡುತ್ತಾನೆ ಅನ್ನೋದು ‘ಗಾಮಿ’ ಸಿನಿಮಾದ ಕಥೆ. ‘ಗಾಮಿ’ಯಲ್ಲಿ ಈ ಕಥೆ ಪ್ರಮುಖವಾಗಿ ಸಾಗಿದರೆ ಇದರ ಜೊತೆಗೆ ಇನ್ನೂ ಎರಡು ಕಥೆಗಳು ತೆರೆಮೇಲೆ ಬರುತ್ತವೆ. ಅದು ಯಾರ ಕಥೆ? ಆ ಕಥೆಗೂ ಶಂಕರ್ಗೂ ಏನು ಸಂಬಂಧ ಎನ್ನುವುದನ್ನು ಸಿನಿಮಾ ನೋಡಿ ತಿಳಿಯಬೇಕು.
ವಿದ್ಯಾಧರ್ ಕಗಿತ ಅವರು ‘ಗಾಮಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅವರು ಅವರು ಶಾರ್ಟ್ ಫಿಲ್ಮ್ಗಳನ್ನು ನಿರ್ದೇಶನ ಮಾಡಿದ್ದರು. ಸಿನಿಮಾ ನಿರ್ದೇಶಕನಾಗಿ ಇದು ಅವರಿಗೆ ಮೊದಲ ಅನುಭವ. ಈ ಸಿನಿಮಾದಲ್ಲಿ ಅಲ್ಲಲ್ಲಿ ಒಂದಷ್ಟು ಗೊಂದಲಗಳು ಹುಟ್ಟಿಕೊಳ್ಳುತ್ತವೆ. ಅವುಗಳನ್ನು ಪರಿಹರಿಸುವತ್ತ ನಿರ್ದೇಶಕರು ಗಮನ ಹರಿಸಬೇಕಿತ್ತು. ಅಲ್ಲಲ್ಲಿ ವಿಜ್ಞಾನವೂ ಬರುತ್ತದೆ. ಕೆಲವು ದೃಶ್ಯಗಳು ಲಾಜಿಕ್ನಿಂದ ದೂರ ಇದೆ. ಸಿನಿಮಾದಲ್ಲಿ ಬರೋ ಟ್ವಿಸ್ಟ್ ಗಮನ ಸೆಳೆಯೋ ರೀತಿಯಲ್ಲಿದೆ. ಚಿತ್ರದ ಬಹುತೇಕ ಶೂಟ್ ಗ್ರೀನ್ ಮ್ಯಾಟ್ನಲ್ಲೇ ಮಾಡಿದಂತಿದೆ.
ಇದನ್ನೂ ಓದಿ: ನನ್ನ ಸಿನಿಮಾ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ: ನಟ ವಿಶ್ವಕ್ ಸೇನ್ ಆರೋಪ
‘ಗಾಮಿ’ ಜೀ 5ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಸಿನಿಮಾ ಮಾರ್ಚ್ 8ರಂದು ಥಿಯೇಟರ್ನಲ್ಲಿ ರಿಲೀಸ್ ಆಗಿತ್ತು. ಈ ಚಿತ್ರವನ್ನು ಕಾರ್ತಿಕ್ ಶಬರೀಶ್ ಅವರು ನಿರ್ಮಾಣ ಮಾಡಿದ್ದಾರೆ. ಏಪ್ರಿಲ್ 12ರಂದು ಈ ಚಿತ್ರ ಒಟಿಟಿಗೆ ಲಗ್ಗೆ ಇಟ್ಟಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:30 pm, Mon, 15 April 24