ವೀಕೆಂಡ್ ದಿನ ಭರ್ಜರಿ ರಾಲಿ ನಡೆಸಿ ಕ್ಯಾಂಪೇನ್ ಮಾಡಿದ ಡಿಕೆ ಸುರೇಶ್
ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಉಭಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಅದರಂತೆ ಬೆಂಗಳೂರು ಗ್ರಾಮಾಂತರ ‘ಕೈ’ ಅಭ್ಯರ್ಥಿ ಡಿ.ಕೆ.ಸುರೇಶ್(DK Suresh) ಇಂದು ಅಬ್ಬರದ ಪ್ರಚಾರ ಮಾಡಿದರು. ಬಳಿಕ ಮಾತನಾಡಿದ ಅವರು, ‘ಕನ್ನಡಿಗರ ಪರ ನಿಮ್ಮ ಧ್ವನಿಯಾಗಿ ನಾನು ಮಾತನಾಡುತ್ತೇನೆ ಎಂದರು.
ಬೆಂಗಳೂರು ಗ್ರಾಮಾಂತರ, ಏ.21: ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಉಭಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಅದರಂತೆ ಬೆಂಗಳೂರು ಗ್ರಾಮಾಂತರ ‘ಕೈ’ ಅಭ್ಯರ್ಥಿ ಡಿ.ಕೆ.ಸುರೇಶ್(DK Suresh) ಇಂದು ಅಬ್ಬರದ ಪ್ರಚಾರ ಮಾಡಿದರು. ಬಳಿಕ ಮಾತನಾಡಿದ ಅವರು, ‘ಕನ್ನಡಿಗರ ಪರ ನಿಮ್ಮ ಧ್ವನಿಯಾಗಿ ನಾನು ಮಾತನಾಡುತ್ತೇನೆ. ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕೆಂದು ನಿಮ್ಮಲ್ಲಿ ಮನವಿ ಮಾಡ್ತಿದ್ದೇನೆ. ಬರುವ ದಿನಗಳಲ್ಲಿ ತೆರಿಗೆ ಹಣದ ಹೋರಾಟ ಮಾಡಬೇಕಾಗುತ್ತದೆ. ನಮ್ಮ ತೆರಿಗೆ ಹಣವನ್ನು ಉತ್ತರ ಪ್ರದೇಶ ಕೊಂಡೊಯ್ಯುತ್ತಿದ್ದಾರೆ. ಅಭಿವೃದ್ಧಿಗೆ ಯಾವುದೇ ಕೊಡುಗೆ ಕೊಡದವರಿಗೆ ಉತ್ತರ ಕೊಡಬೇಕು ಎಂದು ಬೆಂಗಳೂರಿನ ಹೆಬ್ಬಗೋಡಿಯಲ್ಲಿ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

