ನಾಮಪತ್ರ ಸಲ್ಲಿಸಿದ ಡಿಕೆ ಸುರೇಶ್‌ 593.04 ಕೋಟಿ ರೂ. ಒಡೆಯ, ಆದ್ರೂ ಒಂದು ಸ್ವಂತ ಕಾರು ಇಲ್ಲ!

DK Suresh Asset Details: ಹಾಲಿ ಸಂಸದ ಡಿಕೆ ಸುರೇಶ್ ಅವರು ಮತ್ತೊಮ್ಮೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಇಂದು (ಮಾರ್ಚ್ 28) ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ಇನ್ನು ತಮ್ಮ ನಾಮಪತ್ರ ಅಫಿಡೆವಿಟ್​ ಒಟ್ಟು ಆಸ್ತಿ ಮೌಲ್ಯ 593.04 ಕೋಟಿ ರೂ. ಎಂದು ಬಹಿರಂಗಪಡಿಸಿದ್ದಾರೆ. ಆದರೂ ಸಹ ಸುರೇಶ್​ಗೆ ಒಂದು ಸ್ವಂತ ಕಾರು ಇಲ್ಲ. ಇನ್ನು ಕಳೆದ ಲೋಕಸಭಾ ಚುನಾವಣೆ ವೇಳೆ ಎಷ್ಟು ಆಸ್ತಿ ಇತ್ತು? ಈಗ ಎಷ್ಟಾಗಿದೆ ಎನ್ನುವ ವಿವರ ಇಲ್ಲಿದೆ.

ನಾಮಪತ್ರ ಸಲ್ಲಿಸಿದ ಡಿಕೆ ಸುರೇಶ್‌ 593.04 ಕೋಟಿ ರೂ. ಒಡೆಯ, ಆದ್ರೂ ಒಂದು ಸ್ವಂತ ಕಾರು ಇಲ್ಲ!
ನಾಮಪತ್ರ ಸಲ್ಲಿಸಿದ ಡಿಕೆ ಸುರೇಶ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Mar 28, 2024 | 6:08 PM

ಬೆಂಗಳೂರು, ಮಾರ್ಚ್ 28): ಬೆಂಗಳೂರು ಗ್ರಾಮಾಂತರ (Bangalore Rural) ಕ್ಷೇತ್ರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಿಕೆ ಸುರೇಶ್‌ (DK Suresh) ಅವರು ಈಮದು (ಮಾರ್ಚ್ 28) ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಡಿಕೆ ಸುರೇಶ್,  ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ರಾಮನಗರದಲ್ಲಿ ಬೃಹತ್ ರ್ಯಾಲಿ ನಡೆಸಿದರು. ಬಳಿಕ ಡಿಕೆ ಸುರೇಶ್ ಅವರು ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಮ್ಮ ಉಮೇದವಾರಿಕೆ ಸಲ್ಲಿದರು. ಇನ್ನು ನಾಮಪತ್ರ ಅಫಿಡವಿಟ್‌ನಲ್ಲಿ ಅವರು ಬರೋಬ್ಬರಿ 593.04 ಕೋಟಿ ರೂ. ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

5 ವರ್ಷಗಳಲ್ಲಿ 259.19 ಕೋಟಿ ರೂ. ಹೆಚ್ಚಳ

ಇನ್ನು ಡಿಕೆ ಸುರೇಶ್ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ (2019ರಲ್ಲಿ) ಆಸ್ತಿ ಮೌಲ್ಯ 333.86 ಕೋಟಿ ರೂಪಾಯಿ ಇದೆ ಎಂದು ಘೋಷಿಸಿಕೊಂಡಿದ್ದರು. ಅಲ್ಲದೇ 8 ತಿಂಗಳ ಹಿಂದೆ ಅಷ್ಟೇ ಸುರೇಶ್ ಅವರು ವಿಧಾನಸಭೆ ಚುನಾವಣೆ ವೇಳೆ ಡಮ್ಮಿ ಅಭ್ಯರ್ಥಿಯಾಗಿ ಕನಕಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಆ ವೇಳೆ ತಮ್ಮ ಹೆಸರಿನಲ್ಲಿ ಒಟ್ಟು ಆಸ್ತಿ ಮೌಲ್ಯ 353.7 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದರು. ಆದ್ರೆ, ಇದೀಗ ಬೆಂಗಳೂರು ಗ್ರಾಮಾಂತರ ಲೋಕಸಭಾದಿಂದ ಕಣಕ್ಕಿಳಿದಿದ್ದು, ಈ ಸಂದರ್ಭದಲ್ಲಿ ಒಟ್ಟು 593.04 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದೊಂದಿಗೆ ಒಂದೇ ವರ್ಷದ ಅವರ ಆಸ್ತಿ ಮೌಲ್ಯ ಬರೋಬ್ಬರಿ 239.34 ಕೋಟಿ ಹೆಚ್ಚಳವಾಗಿದ್ದರೆ, ಕಳೆದ ಲೋಕಸಭಾ ಚುನಾವಣೆ ವೇಳೆ ಘೋಷಿಸಿಕೊಂಡಿರುವುದು ಮತ್ತು ಈಗ ತೋರಿಸಿರುವುದು ನೋಡಿದರೆ 5 ವರ್ಷಗಳಲ್ಲಿ ಬರೋಬ್ಬರಿ 259.19 ಕೋಟಿ ರೂಪಾಯಿಯಷ್ಟು ಆಸ್ತಿ ಮೌಲ್ಯ ಹೆಚ್ಚಳವಾಗಿದೆ.

ಇದನ್ನೂ ಓದಿ: ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಆಸ್ತಿ ವಿವರ ಘೋಷಣೆ

ಅಫಿಡವಿಟ್‌ನಲ್ಲಿ ತಾವೊಬ್ಬ ಕೃಷಿಕ, ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿರುವ ಡಿಕೆ ಸುರೇಶ್‌ 2019ರಲ್ಲಿ 1.12 ಕೋಟಿ ರೂ. ಆದಾಯ ಗಳಿಸಿರುವುದಾಗಿ ತಿಳಿಸಿದ್ದಾರೆ. ಇದೇ ಆದಾಯ 2021ರಲ್ಲಿ 32.31 ಕೋಟಿ ರೂ.ಗೆ ಏರಿಕೆ ಕಂಡಿದ್ದರೆ, 2023ರಲ್ಲಿ ಅವರು 12.30 ಕೋಟಿ ರೂ. ಆದಾಯ ಗಳಿಸಿದ್ದಾರೆ. ಇನ್ನು ತಮ್ಮ ಆದಾಯದಲ್ಲಿ ಬಾಡಿಗೆ, ವೇತನ, ಬಂಡವಾಳ ಗಳಿಕೆ, ಕೃಷಿ ಆದಾಯ ಹಾಗೂ ಬ್ಯಾಂಕ್‌ ಬಡ್ಡಿ ಸಹಿತ ಇತರ ಆದಾಯ ಸೇರಿರುವುದಾಗಿ ಅವರು ತಿಳಿಸಿದ್ದಾರೆ.

ಡಿಕೆ ಸುರೇಶ್‌ ಕೈಯಲ್ಲಿ 4.77 ಲಕ್ಷ ರೂ. ಹಣವಿದ್ದರೆ, ಒಟ್ಟು 106.71 ಕೋಟಿ ರೂ. ಚರಾಸ್ತಿ ಇದೆ. ಇದರಲ್ಲಿ ಬ್ಯಾಂಕ್‌ ಖಾತೆಯಲ್ಲಿ 16.61 ಕೋಟಿ ರೂ., ವಿವಿಧ ಹೂಡಿಕೆಗಳಲ್ಲಿ 2.14 ಕೋಟಿ ರೂ. ಇದೆ. ಇನ್ನು ಕ್ವಾರಿ ಲೀಸ್‌ಗೆ ಕೊಟ್ಟಿರುವ ಹಣ ಸೇರಿ ಒಟ್ಟು 86.79 ಕೋಟಿ ರೂ. ಸಾಲ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಇದರಲ್ಲಿ ಅಣ್ಣ ಡಿಕೆ ಶಿವಕುಮಾರ್‌ಗೆ 30.08 ಕೋಟಿ ರೂ. ಸಾಲ ನೀಡಿದ್ದರೆ, ಡಿಕೆಶಿ ಪುತ್ರಿ ಐಶ್ವರ್ಯಾಗೆ 7.94 ಕೋಟಿ ರೂ., ಡಿಕೆಶಿ ಪುತ್ರ ಆಕಾಶ್‌ಗೆ 1.06 ಕೋಟಿ ರೂ., ತಾಯಿ ಗೌರಮ್ಮಗೆ 4.75 ಕೋಟಿ ರೂ., ಕುಣಿಗಲ್‌ ಶಾಸಕ ರಂಗನಾಥ್‌ ಪತ್ನಿ ಡಾ. ಸುಮಾ ರಂಘನಾಥ್‌ಗೆ 30 ಲಕ್ಷ ರೂ. ಸಾಲ ನೀಡಿದ್ದಾರೆ.

486.33 ಕೋಟಿ ರೂ. ಸ್ಥಿರಾಸ್ತಿ

486.33 ಕೋಟಿ ರೂ. ಮೊತ್ತದ ಸ್ಥಿರಾಸ್ತಿ ಇರುವುದಾಗಿಯೂ ಡಿಕೆ ಸುರೇಶ್ ಅವರು ತಮ್ಮ ಅಫಿಡವಿಟ್‌ನಲ್ಲಿ ಹೇಳಿದ್ದಾರೆ. ಇದರಲ್ಲಿ 209.96 ಕೋಟಿ ರೂ. ಮೊತ್ತದ ಆಸ್ತಿ ಪಿತ್ರಾರ್ಜಿತವಾಗಿ ಬಂದಿದ್ದು, 276.37 ಕೋಟಿ ರೂ. ಮೊತ್ತದ ಆಸ್ತಿ ನಾನು ಖರೀದಿಸಿರುವುದು ಎಂದು ತಿಳಿಸಿದ್ದಾರೆ. ತಾವು ಖರೀದಿಸಿದ ಆಸ್ತಿಯ ಖರೀದಿ ಬೆಲೆ 56.06 ಕೋಟಿ ರೂ. ಆಗಿದ್ದು, ಇದರ ಸದ್ಯದ ಮಾರುಕಟ್ಟೆ ಮೌಲ್ಯ 276.37 ಕೋಟಿ ರೂ. ಎಂದು ಉಲ್ಲೇಖಿಸಿದ್ದಾರೆ.

21 ಕೃಷಿ ಭೂಮಿ, 27 ಕೃಷಿಯೇತರ ಜಮೀನು ಹೊಂದಿರುವುದಾಗಿಯೂ ಡಿಕೆ ಸುರೇಶ್‌ ಹೇಳಿದ್ದಾರೆ. ಈ ಮೂಲಕ ನೂರಾರು ಎಕರೆ ಭೂಮಿಯ ಒಡೆಯರಾಗಿದ್ದಾರೆ. ಕೃಷಿ ಭೂಮಿಯ ಈಗಿನ ಮೌಲ್ಯ 32.75 ಕೋಟಿ ರೂ. ಆಗಿದ್ದರೆ, ಕೃಷಿಯೇತರ ಭೂಮಿ ಮೌಲ್ಯ 210.47 ಕೋಟಿ ರೂ. ಆಗಿದೆ. 9 ವಾಣಿಜ್ಯ ಸಂಕೀರ್ಣವೂ ಇವರಿಗಿದ್ದು, ಇವುಗಳ ಮೌಲ್ಯ 211.91 ಕೋಟಿ ರೂ. ಆಗಿದೆ. ಮೈಸೂರು ರಸ್ತೆಯಲ್ಲಿರುವ ಗ್ಲೋಬಲ್‌ ಮಾಲ್‌ ಇದರಲ್ಲಿ ಸೇರಿದೆ. ಬೆಂಗಳೂರಿನ ಸದಾಶಿವನಗರದಲ್ಲಿ 25.82 ಕೋಟಿ ರೂ. ಮೌಲ್ಯದ ಮನೆ ಸೇರಿ ಒಟ್ಟು ಮೂರು ಮನೆಗಳು ಇವರ ಬಳಿ ಇದ್ದು, ಇವುಗಳ ಮೌಲ್ಯ 27.13 ಕೋಟಿ ರೂ. ಆಗಿದೆ.

ಡಿಕೆ ಸುರೇಶ್ ಬಳಿ ವಾಹನವಿಲ್ಲ, ಚಿನ್ನ-ಬೆಳ್ಳಿ ಎಷ್ಟಿದೆ?

ಇನ್ನು ಡಿಕೆ ಸುರೇಶ್ ಬಳಿಕ ಚಿನ್ನ-ಬೆಳ್ಳಿ ಎಷ್ಟಿದೆ ಎನ್ನುವುದನ್ನು ನೋಡುವುದಾದರೆ, 4.8 ಕೆಜಿ ಬೆಳ್ಳಿ, 1.26 ಕೆಜಿ ಚಿನ್ನ ಅವರ ಬಳಿ ಇದ್ದು, ಇದರ ಮೌಲ್ಯ 23.45 ಲಕ್ಷ ರೂ. ಆಗಿದೆ. 73.58 ಲಕ್ಷ ರೂ. ಮೊತ್ತದ ಪೀಠೋಪಕರಣಗಳೂ ಅವರ ಮನೆಯಲ್ಲಿವೆ. ಇನ್ನು ಡಿಕೆ ಸುರೇಶ್‌ ಬಳಿ ಯಾವುದೇ ವಾಹನಗಳಿಲ್ಲ. ತಮ್ಮ ಮೇಲೆ ಮೂರು ಕ್ರಿಮಿನಲ್‌ ಪ್ರಕರಣಗಳಿದ್ದು, ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡಿರುವುದಾಗಿಯೂ ಡಿಕೆ ಸುರೇಶ್ ಅವರು ತಮ್ಮ ನಾಮಪತ್ರ ಅಫಿಡವಿಟ್‌ನಲ್ಲಿ ವಿವರವಾಗಿ ತಿಳಿಸಿದ್ದಾರೆ.

150 ಕೋಟಿ ರೂಪಾಯಿ ಸಾಲ

ಡಿ.ಕೆ. ಸುರೇಶ್ ಹೆಸರಿನಲ್ಲಿ ಒಟ್ಟು150 ಕೋಟಿ ರೂಪಾಯಿ ಸಾಲ ಇದೆ ಎಂದು ಅಫಿಡವಿಟ್‌ನಲ್ಲಿ ತೋರಿಸಲಾಗಿದೆ. ಬ್ಯಾಂಕ್‌ನಿಂದ ಅವರು 20.04 ಕೋಟಿ ರೂ. ಸಾಲ ಪಡೆದಿದ್ದಾರೆ. ಶೋಭಾ ಡೆವಲಪರ್ಸ್‌ಗೆ 99.19 ಕೋಟಿ ರೂ., ಸಿಎಂಆರ್‌ ಟ್ರಸ್ಟ್‌ಗೆ 15 ಕೋಟಿ ರೂ. ಮತ್ತು ಬೆಂಗಳೂರಿನಲ್ಲಿರುವ ಲುಲು ಮಾಲ್‌ಗೆ 3 ಕೋಟಿ ರೂ. ಸಾಲ ನೀಡಬೇಕಿದೆ ಎಂದು ಮಾಹಿತಿ ನೀಡಿದ್ದಾರೆ. ಇಷ್ಟಾದರೂ ಇದರಲ್ಲಿ ತಾಯಿ ಗೌರಮ್ಮ, ಅಣ್ಣ ಡಿ.ಕೆ. ಶಿವಕುಮಾರ್‌, ಅಣ್ಣನ ಮಕ್ಕಳಾದ ಐಶ್ವರ್ಯ ಹಾಗೂ ಮಗ ಆಕಾಶ್‌ ಕೆಂಪೇಗೌಡ ಅವರಿಗೂ ಸಾಲವನ್ನು ನೀಡಿದ್ದಾರೆ.

ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ವಿಚಾರಣೆಯಲ್ಲಿದೆ ಎಂದು ಮಾಹಿತಿ ನೀಡಿರುವ ಸುರೇಶ್, ಪತ್ನಿ ಕಾಲಂ ಮುಂದೆ ವಿಚ್ಛೇದನವಾಗಿದೆ. ಹೀಗಾಗಿ ಸಂಬಂಧಿಸಿಲ್ಲವೆಂದು ಉಲ್ಲೇಖಿಸಿದ್ದಾರೆ. ಇನ್ನು ಓರ್ವ ಪುತ್ರನಿದ್ದು, ಆತನ ಹೆಸರು ಕೆಶಿನ್ ಸುರೇಶ್ ಎಂದು ನಾಮಪತ್ರದ ಅಫಿಡೇವಿಟ್​ನಲ್ಲಿ ನಮೂದಿಸಿದ್ದಾರೆ.

ಡಿಕೆ ಸುರೇಶ್ ಆಸ್ತಿ ವಿವರ

  • ಡಿ.ಕೆ.ಸುರೇಶ್ ಪಿತ್ರಾರ್ಜಿತ ಆಸ್ತಿಯ ಇಂದಿನ ಮೌಲ್ಯ 209 ಕೋಟಿ 96 ಲಕ್ಷ ರೂ.
  • ಸ್ವಯಾರ್ಜಿತ ಆಸ್ತಿಯ ಇಂದಿನ ಮೌಲ್ಯ 276 ಕೋಟಿ 37 ಲಕ್ಷ ರೂ.
  • ಅನೇಕಲ್ ನ ಜಿಗಣಿ, ಕನಕಪುರದ ವಿವಿದೆಡಿ ಒಟ್ಟು 21 ಆಸ್ತಿಗಳಿದ್ದು ಅದರ ಇಂದಿನ ಮೌಲ್ಯ 32 ಕೋಟಿ 75 ಲಕ್ಷ ರೂ.
  • ಬೆಂಗಳೂರು, ಕನಕಪುರ, ಮೈಸೂರಿನಲ್ಲಿ 27 ಕೃಷಿಯೇತರ ಆಸ್ತಿಗಳಿದ್ದು ಅದರ ಇಂದಿನ ಮೌಲ್ಯ 210 ಕೋಟಿ 47 ಲಕ್ಷ ರೂ.
  • ಬೆಂಗಳೂರಿನ ವಿವಿದೆಡೆ 9 ವಾಣಿಜ್ಯ ಕಟ್ಟಡಗಳಿದ್ದು ಅದರ ಇಂದಿನ ಮೌಲ್ಯ 211 ಕೋಟಿ 91 ಲಕ್ಷ ರೂ.
  • ಸದಾಶಿವನಗರ, ಪಂತರಪಾಳ್ಯ, ಕನಕಪುರದಲ್ಲಿ ವಾಸದ ಕಟ್ಟಡಗಳಿದ್ದು ಅದರ ಇಂದಿನ ಮೌಲ್ಯ 27 ಕೋಟಿ 13 ಲಕ್ಷ ರೂ.
  • ಆದಾಯ ತೆರಿಗೆ ಇಲಾಖೆ, ಬಿಬಿಎಂಪಿ ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಒಟ್ಟು 57 ಕೋಟಿ 27 ಲಕ್ಷ 49 ಸಾವಿರದ 212 ರೂಪಾಯಿ ತೆರಿಗೆ ಬಾಕಿ ಬಗ್ಗೆ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ವಿಚಾರಣೆಯಲ್ಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:32 pm, Thu, 28 March 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ