Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿರಿ ಎಲಿಮಿನೇಟ್ ಆಗಲು ಕಾರಣವಾಯ್ತು ಈ ಎಲ್ಲ ಅಂಶಗಳು

ಬಿಗ್ ಬಾಸ್​ನಲ್ಲಿ ಸಿರಿ ಅವರು ಯಾವುದೇ ಗುಂಪಿನಲ್ಲಿ ಗುರುತಿಸಿಕೊಂಡಿರಲಿಲ್ಲ. ಅವರು ಸ್ವತಂತ್ರವಾಗಿ ಇದ್ದರು. ಅವರು ಎಂದಿಗೂ ಜಗಳ ಮಾಡಿದವರಲ್ಲ. ಟಾಸ್ಕ್​ ಬಂದಾಗ ಅಗ್ರೆಸ್ ಆಗಿ ಆಡಿದವರಲ್ಲ.

ಸಿರಿ ಎಲಿಮಿನೇಟ್ ಆಗಲು ಕಾರಣವಾಯ್ತು ಈ ಎಲ್ಲ ಅಂಶಗಳು
ಸಿರಿ
Follow us
ರಾಜೇಶ್ ದುಗ್ಗುಮನೆ
|

Updated on: Jan 01, 2024 | 7:06 AM

ವೀಕೆಂಡ್ ಎಪಿಸೋಡ್​ನಲ್ಲಿ ನಟಿ ಸಿರಿ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ನಾಮಿನೇಟ್ ಆದವರ ಪೈಕಿ ಕೊನೆಯಲ್ಲಿ ಮೈಕಲ್ ಹಾಗೂ ಸಿರಿ (Siri) ಉಳಿದುಕೊಂಡಿದ್ದರು. ಸುದೀಪ್ ಅವರು ಸಿರಿ ಹೆಸರು ತೆಗೆದುಕೊಂಡರು. ಸಿರಿಗಿಂತ ಮನೆ ಮಂದಿ ಹೆಚ್ಚು ಬೇಸರಗೊಂಡಿದ್ದರು. ಸಂಗೀತಾ (Sangeetha Sringeri) ಅವರು ಬಿಕ್ಕಿ ಬಿಕ್ಕಿ ಅತ್ತರು. ಮಾರ್ಗದರ್ಶಕರಂತಿದ್ದ ಸಿರಿಯನ್ನು ಬಿಗ್ ಬಾಸ್ ಮನೆ ಕಳೆದುಕೊಂಡಿದೆ. ಈ ಮೂಲಕ ಬಿಗ್ ಬಾಸ್​ ಸದಸ್ಯರ ಸಂಖ್ಯೆ 9ಕ್ಕೆ ಇಳಿಕೆ ಆಗಿದೆ. ಇದರ ಜೊತೆ ಸ್ಪರ್ಧೆಯೂ ಜೋರಾಗಿದೆ.

‘ಬಿಗ್ ಬಾಸ್’ನಲ್ಲಿ ಸಿರಿ ಅನೇಕ ಬಾರಿ ಡೇಂಜರ್​ಜೋನ್​ಗೆ ಹೋಗಿದ್ದರು. ಕೊನೆಯ ಕ್ಷಣದಲ್ಲಿ ಅವರು ಸೇವ್ ಆಗಿ ಬಂದಿದ್ದರು. ಈಗ ಅವರು ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಹೊರ ಹೋಗುವಾಗ ಹೆಚ್ಚು ಬೇಸರ ಮಾಡಿಕೊಳ್ಳಲಿಲ್ಲ. ಅವರು ಬಿಗ್ ಬಾಸ್​ನಿಂದ ಹೊರ ಹೋಗಲು ಸಾಕಷ್ಟು ವಿಚಾರಗಳು ಕಾರಣ ಆದವು. ಆ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್ ಮನೆಯಲ್ಲಿ ಸಿರಿ ಅವರು ಸೇಫ್ ಗೇಮ್ ಆಡುತ್ತಿದ್ದಾರೆ ಎನ್ನುವ ಆರೋಪ ಮೊದಲಿನಿಂದಲೂ ಇತ್ತು. ವೀಕ್ಷಕರಿಗೂ ಕೆಲವು ಬಾರಿ ಹೀಗೆಯೇ ಅನಿಸಿದ್ದಿದೆ. ಇದು ಅವರಿಗೆ ಮುಳುವಾಗಿದೆ. ಸಿರಿ ಅವರು ತಮ್ಮ ಅಭಿಪ್ರಾಯವನ್ನು ಓಪನ್ ಆಗಿ ಹೇಳುತ್ತಿರಲಿಲ್ಲ. ಸುದೀಪ್ ಅವರ ಗಮನಕ್ಕೂ ಈ ವಿಚಾರ ಬಂದಿದೆ. ಕಿಚ್ಚ ಕೂಡ ಈ ಬಗ್ಗೆ ಮಾತನಾಡಿದ್ದರು.

ಬಿಗ್ ಬಾಸ್​ನಲ್ಲಿ ಸಿರಿ ಅವರು ಯಾವುದೇ ಗುಂಪಿನಲ್ಲಿ ಗುರುತಿಸಿಕೊಂಡಿರಲಿಲ್ಲ. ಅವರು ಸ್ವತಂತ್ರವಾಗಿ ಇದ್ದರು. ಅವರು ಎಂದಿಗೂ ಜಗಳ ಮಾಡಿದವರಲ್ಲ. ಟಾಸ್ಕ್​ ಬಂದಾಗ ಅಗ್ರೆಸ್ ಆಗಿ ಆಡಿದವರಲ್ಲ. ಇದೆಲ್ಲ ವಿಚಾರಗಳು ಅವರಿಗೆ ಹಿನ್ನಡೆ ತಂದಿರಬಹುದು ಎಂಬುದು ಅನೇಕರ ಊಹೆ.

ಇದನ್ನೂ ಓದಿ: ಕಾರ್ತಿಕ್​-ತುಕಾಲಿ ಸಂತೋಷ್​ ಕಿಸ್​; ಕೂದಲು ಕಿತ್ತ ನಮ್ರತಾ, ಸಿರಿ: ವಿಡಿಯೋ ನೋಡಿ..

ಸಿರಿ ಅವರಿಂದ ಬಿಗ್ ಬಾಸ್​ನಲ್ಲಿ ಇತರ ಸ್ಪರ್ಧಿಗಳಿಗೆ ಸಾಕಷ್ಟು ಸಹಾಯ ಆಗಿದ್ದಿದೆ. ಸ್ಪರ್ಧಿಗಳು ಡಲ್ ಆಗಿದ್ದಾಗ ಅವರು ಚಿಯರ್ ಮಾಡುತ್ತಿದ್ದರು. ಎಲ್ಲರಿಗೂ ಮಾರ್ಗದರ್ಶನ ನೀಡಿದ್ದರು. ಸದ್ಯ ಬಿಗ್ ಬಾಸ್​ನಲ್ಲಿ ಉಳಿದುಕೊಂಡಿದ್ದು 27 ದಿನ ಮಾತ್ರ. ಸ್ಪರ್ಧಿಗಳ ಮಧ್ಯೆ ಸ್ಪರ್ಧೆ ಜೋರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ