Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬಾನಿ ಕುಟುಂಬದ ಸದಸ್ಯರು ಕುಡಿಯುವ 1 ಲೀ. ಹಾಲಿನ ಬೆಲೆ 152 ರೂ. ;ಯಾಕಿಷ್ಟು ದುಬಾರಿ ಗೊತ್ತಾ?

ವರದಿಗಳ ಪ್ರಕಾರ ಪುಣೆಯಿಂದ ಬರುವ ಹೋಲ್‌ಸ್ಟೈನ್‌-ಫ್ರೀಸಿಯನ್ ಎಂಬ ತಳಿಯ ಹಸುವಿನ ಹಾಲನ್ನು ಅಂಬಾನಿ ಕುಟುಂಬ ಸದಸ್ಯರು ಕುಡಿಯುತ್ತಾರೆ. ಈ ತಳಿಯ ಹಸುಗಳನ್ನು ಪುಣೆಯ ಭಾಗ್ಯಲಕ್ಷ್ಮಿ ಡೈರಿಯಲ್ಲಿ ಸಾಕಲಾಗುತ್ತದೆ, ಇದು ಸುಮಾರು 35 ಎಕರೆಗಳಲ್ಲಿ ಹರಡಿಕೊಂಡಿದ್ದು,ಇಲ್ಲಿ 3000 ಕ್ಕೂ ಹೆಚ್ಚು ಹಸುಗಳನ್ನು ಸಾಕಲಾಗುತ್ತದೆ. ಈ ಡೈರಿಯಲ್ಲಿ ಒಂದು ಲೀಟರ್ ಹಾಲಿನ ಬೆಲೆ ಸುಮಾರು 152 ರೂ.

ಅಂಬಾನಿ ಕುಟುಂಬದ ಸದಸ್ಯರು ಕುಡಿಯುವ 1 ಲೀ. ಹಾಲಿನ ಬೆಲೆ 152 ರೂ. ;ಯಾಕಿಷ್ಟು ದುಬಾರಿ ಗೊತ್ತಾ?
ಅಂಬಾನಿ ಕುಟುಂಬ
Follow us
ಅಕ್ಷತಾ ವರ್ಕಾಡಿ
|

Updated on:Jun 13, 2024 | 4:48 PM

ಸಾಮಾನ್ಯವಾಗಿ ಒಂದು ಲೀಟರ್​​ ಹಾಲಿಗೆ 30ರಿಂದ 40 ರೂಪಾಯಿಗಳ ಒಳಗೆ ಇರುತ್ತದೆ. ಆದರೆ ಎಂದಾದರೂ ಒಂದು ಲೀಟರ್​​ ಹಾಲಿಗೆ 150ರೂ. ಎಂದು ಕೇಳಿದ್ದೀರಾ? ಇದೀಗ ಅಂಬಾನಿ ಕುಟುಂಬಸ್ಥರು ಕುಡಿಯುವ ಹಾಲಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಹೌದು ಮುಖೇಶ್​​ ಅಂಬಾನಿ ಕುಟುಂಬದ ಸದಸ್ಯರು ಕುಡಿಯುವ 1 ಲೀ. ಹಾಲಿನ ಬೆಲೆ 152 ರೂ. ಯಾಕಿಷ್ಟು ದುಬಾರಿ? ಈ ಹಾಲಿನ ವಿಶೇಷತೆ ಏನು ಎಂಬುದನ್ನುಇಲ್ಲಿ ತಿಳಿದುಕೊಳ್ಳಿ.

ವರದಿಗಳ ಪ್ರಕಾರ ಪುಣೆಯಿಂದ ಬರುವ ಹೋಲ್‌ಸ್ಟೈನ್‌-ಫ್ರೀಸಿಯನ್ ಎಂಬ ತಳಿಯ ಹಸುವಿನ ಹಾಲನ್ನು ಅಂಬಾನಿ ಕುಟುಂಬ ಸದಸ್ಯರು ಕುಡಿಯುತ್ತಾರೆ. ಇದು ಪೋಷಕಾಂಶ-ಭರಿತ ಗುಣಗಳಿಗೆ ಹೆಸರುವಾಸಿಯಾಗಿದ್ದು, ಈ ತಳಿಯ ಹಸುಗಳನ್ನು ಪುಣೆಯ ಭಾಗ್ಯಲಕ್ಷ್ಮಿ ಡೈರಿಯಲ್ಲಿ ಸಾಕಲಾಗುತ್ತದೆ, ಇದು ಸುಮಾರು 35 ಎಕರೆಗಳಲ್ಲಿ ಹರಡಿಕೊಂಡಿದ್ದು,ಇಲ್ಲಿ 3000 ಕ್ಕೂ ಹೆಚ್ಚು ಹಸುಗಳನ್ನು ಸಾಕಲಾಗುತ್ತದೆ. ಈ ಡೈರಿಯಲ್ಲಿ ಒಂದು ಲೀಟರ್ ಹಾಲಿನ ಬೆಲೆ ಸುಮಾರು 152 ರೂ.

ಹೆಚ್ಚು ಇಳುವರಿ ನೀಡುವ ಈ ಹಸುವಿನ ತಳಿಗಾಗಿ, ಕೇರಳದಿಂದ ಬರುವ ವಿಶೇಷ ರಬ್ಬರ್ ಲೇಪಿತ ಹಾಸಿಗೆಗಳನ್ನು ಬಳಸಲಾಗುತ್ತದೆ. ಈ ತಳಿಯ ಹಸುಗಳು ಆರ್‌ಓ ನೀರನ್ನು ಮಾತ್ರ ಕುಡಿಯುತ್ತವೆ. ಹೋಲ್‌ಸ್ಟೈನ್-ಫ್ರೀಸಿಯನ್ ಹಸುವಿನ ತಳಿಯು ನೆದರ್‌ಲ್ಯಾಂಡ್‌ಗೆ ಸ್ಥಳೀಯವಾಗಿದೆ ಮತ್ತು ಇದು ವಿಶ್ವದಾದ್ಯಂತ ಕೈಗಾರಿಕಾ ಡೈರಿ ಕೃಷಿಯಲ್ಲಿ ಪ್ರಬಲ ತಳಿಯಾಗಿದೆ.

ಇದನ್ನೂ ಓದಿ: ಮಳೆಗೆ ನಡುರಸ್ತೆಯಲ್ಲೇ ಪ್ರೇಮಿಗಳ ರೋಮ್ಯಾಂಟಿಕ್ ಡ್ಯಾನ್ಸ್; ವಿಡಿಯೋ ವೈರಲ್​​

ಆರೋಗ್ಯವಂತ ಕರು ಹುಟ್ಟಿದಾಗ 40 ರಿಂದ 50 ಕೆಜಿ ಅಥವಾ ಅದಕ್ಕಿಂತ ಹೆಚ್ಚು ತೂಕವಿರುತ್ತದೆ. ವಯಸ್ಕ ಹೋಲ್ಸ್ಟೈನ್ ಹಸು ಸಾಮಾನ್ಯವಾಗಿ 680-770 ಕೆಜಿ ತೂಗುತ್ತದೆ. ದಿನಕ್ಕೆ 25 ಲೀಟರ್ ಹಾಲು ನೀಡುವ ಸಾಮರ್ಥ್ಯ ಹೊಂದಿದೆ. ಹೋಲ್‌ಸ್ಟೈನ್ ಫ್ರೈಸಿಯನ್ ಹಾಲು A1 ಮತ್ತು A2 ಬೀಟಾ-ಕೇಸಿನ್ (ಪ್ರೋಟೀನ್) ನಲ್ಲಿ ಸಮೃದ್ಧವಾಗಿದೆ ಎಂದು ಅನೇಕ ಮಾಧ್ಯಮ ವರದಿಗಳು ಹೇಳುತ್ತವೆ. ಇದರ ಜೊತೆಗೆ, ಇದು ಪ್ರೋಟೀನ್, ಮೈಕ್ರೋ ನ್ಯೂಟ್ರಿಯಂಟ್ಗಳು, ಅಗತ್ಯ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಗಳಲ್ಲಿ ಸಮೃದ್ಧವಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:45 pm, Thu, 13 June 24

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !