Viral Video: ಕುಸಿದು ಬಿದ್ದ ಗ್ಲಾಸ್ ಬಾಲ್ಕನಿ; 40 ಅಡಿ ಎತ್ತರದಿಂದ ಕೆಳ ಬಿದ್ದು ನಿಂತೇಹೋಯ್ತು ಇಬ್ಬರ ಉಸಿರು
ಮೆಕ್ಸಿಕೋದ ಸ್ಯಾನ್ ಲೂಯಿಸ್ ಪೊಟೋಸಿ ಎಂಬಲ್ಲಿ ಬೆಚ್ಚಿ ಬೀಳಿಸುವ ಅವಘಡವೊಂದು ನಡೆದಿದ್ದು, ಪಾರ್ಟಿ ವೇಳೆ ನೈಟ್ ಕ್ಲಬ್ ಒಂದರ ಗಾಜಿನ ಬಾಲ್ಕನಿ ಕುಸಿದು ಬಿದ್ದಿದೆ. 40 ಅಡಿ ಎತ್ತರದಿಂದ ದೊಪ್ಪನೆ ಕುಸಿದು ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ, ಈ ಭೀಕರ ಅವಘಡಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಸಾವು ಎಂಬುದು ಅನಿರೀಕ್ಷಿತ. ಈ ಸಾವು ಯಾವಾಗ ಮತ್ತು ಹೇಗೆ ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಕ್ಷಣ ಖುಷಿ ಖುಷಿಯಿಂದ ಕಳೆಯುತ್ತಿರುವವರು ಮರು ಕ್ಷಣವೇ ಸಾಯಬಹುದು. ಹೀಗೆ ಜವರಾಯ ಯಾವ ರೂಪದಲ್ಲಿ ಬರಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಇದೀಗ ಅಂತಹದೇ ಭೀಕರ ಘಟನೆಯೊಂದು ನಡೆದಿದ್ದು, ನೈಟ್ ಕ್ಲಬ್ ಒಂದರಲ್ಲಿ ಪಾರ್ಟಿ ಮಾಡುತ್ತಿರುವ ವೇಳೆ ಗ್ಲಾಸ್ ಬಾಲ್ಕನಿ ಕುಸಿದು ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಈ ಭೀಕರ ಅವಘಡಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಡೈಲಿ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಮೆಕ್ಸಿಕೋದ ಸ್ಯಾನ್ ಲೂಯಿಸ್ ಪೊಟೋಸಿ ಎಂಬಲ್ಲಿ ನೈಟ್ ಕ್ಲಬ್ ಒಂದರಲ್ಲಿ ಜನಪ್ರಿಯ ಮೆಕ್ಸಿಕನ್ ಕಲಾವಿದ ಕೆವಿನ್ ಮೊರೆನೊ ಅವರ ಸಂಗೀತ ಕಾರ್ಯಕ್ರವನ್ನು ಆಯೋಜನೆ ಮಾಡಲಾಗಿತ್ತು. ಈ ಒಂದು ಕಾರ್ಯಕ್ರಮದಲ್ಲಿ ಹಲವಾರು ಜನ ಭಾಗವಿಸಿದ್ದರು. ಕೆಲವು ಜನರು ಕ್ಲಬ್‌ನ ಗ್ಲಾಸ್ ಬಾಲ್ಕನಿ ಮೇಲೆ ನಿಂತು ಪಾರ್ಟಿಯನ್ನು ಎಂಜಾಯ್ ಮಾಡ್ತಿದ್ರು. ಆದರೆ ಇದ್ದಕ್ಕಿದ್ದಂತೆ ಈ ಗಾಜಿನ ಬಾಲ್ಕನಿ ಛಿದ್ರಗೊಂಡು ಕುಸಿದು ಬಿದ್ದಿದೆ. ಮೇಲಿಂದ ಕುಸಿದು ಬಿದ್ದ ಪರಿಣಾಮ ಈ ಒಂದು ಅವಘಡಲ್ಲಿ ಇಬ್ಬರು ಮೃತಪಟ್ಟಿದ್ದು, ಕೆಲವರಿಗೆ ಗಂಭೀರ ಗಾಯಗಳಾಗಿವೆ. ಈ ಅವಘಡದ ಬೆಚ್ಚಿ ಬೀಳಿಸುವ ವಿಡಿಯೋ ದೃಶ್ಯಾವಳಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
— Restricted Vids (@RestrictedVids) June 12, 2024
ಇದನ್ನೂ ಓದಿ: ಮಳೆಗೆ ನಡುರಸ್ತೆಯಲ್ಲೇ ಪ್ರೇಮಿಗಳ ರೋಮ್ಯಾಂಟಿಕ್ ಡ್ಯಾನ್ಸ್; ವಿಡಿಯೋ ವೈರಲ್
RestrictedVids ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಕಟ್ಟಡದ ಮೇಲಿಂದ ಒಂದಷ್ಟು ಜನ ಕೆಳಗೆ ಬೀಳುವಂತಹ ದೃಶ್ಯವನ್ನು ಕಾಣಬಹುದು. ನೈಟ್ ಕ್ಲಬ್ ಒಂದರ ಗ್ಲಾಸ್ ಬಾಲ್ಕನಿ ಮೇಲೆ ನಿಂತು ಪಾರ್ಟಿ ಎಂಜಾಯ್ ಮಾಡುತ್ತಿದ್ದ ವೇಳೆ, ಇದ್ದಕ್ಕಿದ್ದಂತೆ ಗ್ಲಾಸ್ ಬಾಲ್ಕನಿ ಛಿದ್ರಗೊಂಡು ಅದರ ಮೇಲೆ ನಿಂತಿದ್ದ 10 ರಿಂದ 12 ಜನ 40 ಅಡಿ ಎತ್ತರದಿಂದ ದೊಪ್ಪನೆ ಕುಸಿದು ಬೀಳುತ್ತಾರೆ. ಆ ತಕ್ಷಣ ಇಬ್ಬರು ಅಲ್ಲಿಂದ ಎದ್ದು ಅತ್ತಕಡೆ ಓಡಿ ಹೋಗುತ್ತಾರೆ. ಈ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ.
ಜೂನ್ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಆಘಾತಕಾರಿ ದೃಶ್ಯ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: