AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬಡ್ತಿ ನೀಡಿಲ್ಲವೆಂದು ಕೆಲಸ ಬಿಟ್ಟ ಯುವತಿ, ಐವಿ ಲೀಗ್‌ ಪದವಿ ಪಡೆದು ಮತ್ತದೇ ಕಂಪೆನಿಯಲ್ಲಿ ದುಪ್ಪಟ್ಟು ಸಂಬಳಕ್ಕೆ ಆಯ್ಕೆ

ಐವಿ ಲೀಗ್‌ ಪದವಿಯನ್ನು ಪಡೆದಿಲ್ಲ ಎಂಬ ಕಾರಣಕ್ಕೆ ಸ್ಟಾರ್ಟ್‌ ಅಪ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ತಮ್ಮ ಉದ್ಯೋಗದಲ್ಲಿ ಬಡ್ತಿ ಸಿಗುತ್ತಿರಲಿಲ್ಲ. ಹೀಗಾಗಿ ಆ ಕೆಲಸವನ್ನು ತೊರೆದು ಆಕೆ ಐವಿ ವಿಶ್ವವಿದ್ಯಾಲಯದಲ್ಲಿ ಐವಿ ಶಿಕ್ಷಣವನ್ನು ಪಡೆದು ಮತ್ತದೇ ಕಂಪೆನಿಯಲ್ಲಿ ಹಿಂದಿಗಿಂದ 2.5 ಪಟ್ಟು ಹೆಚ್ಚು ಸಂಬಳದ ಕೆಲಸಕ್ಕೆ ಆಯ್ಕೆಯಾಗುತ್ತಾರೆ. ಈಕೆಯ ಸ್ಫೂರ್ತಿದಾಯಕ ಕಥೆಯನ್ನು ಆದಿತ್ಯ ವೆಂಕಟೇಶನ್ ಎಂಬವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Viral: ಬಡ್ತಿ ನೀಡಿಲ್ಲವೆಂದು ಕೆಲಸ ಬಿಟ್ಟ ಯುವತಿ, ಐವಿ ಲೀಗ್‌ ಪದವಿ ಪಡೆದು ಮತ್ತದೇ ಕಂಪೆನಿಯಲ್ಲಿ ದುಪ್ಪಟ್ಟು ಸಂಬಳಕ್ಕೆ ಆಯ್ಕೆ
ವೈರಲ್​​ ಸ್ಟೋರಿ
ಮಾಲಾಶ್ರೀ ಅಂಚನ್​
| Edited By: |

Updated on: Jun 14, 2024 | 12:05 PM

Share

ಮನಸ್ಸು ಮಾಡಿದರೆ ಅಸಾಧ್ಯವಾದುದು ಯಾವುದು ಇಲ್ಲ. ಅದೇ ಗುರಿ, ಉದ್ದೇಶವನ್ನಿಟ್ಟುಕೊಂಡು ಮುನ್ನುಗಿದರೆ ಯಶಸ್ಸು ಲಭಿಸುವುದು ಖಂಡಿತ. ಹೀಗೆ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ ಎಂಬುದು ಯಾವಾಗಲೂ ಸಾಬೀತಾಗುತ್ತಿರುತ್ತದೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಕಥೆಯೂ ಅದಕ್ಕೇನೂ ಹೊರತಲ್ಲ. ಸ್ಟಾರ್ಟ್‌ ಅಪ್‌ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಂತಹ ಮಹಿಳೆಯೊಬ್ಬರಿಗೆ ತಮ್ಮ ಕೆಲಸದಲ್ಲಿ ಬಡ್ತಿ ಎಂಬುದು ಸಿಗುತ್ತಿರಲಿಲ್ಲ. ಐವಿ ಪದವಿಯನ್ನು ಪಡೆಯದಿರುವುದೇ ಇದಕ್ಕೆ ಮುಖ್ಯ ಕಾರಣ. ಇಷ್ಟಕ್ಕೆಲ್ಲಾ ದೃತಿಗೆಡದ ಆಕೆ ಕೆಲಸವನ್ನು ತೊರೆದು ಐವಿ ವಿಶ್ವವಿದ್ಯಾಲಯದಲ್ಲಿ ಐವಿ ಶಿಕ್ಷಣವನ್ನು ಪಡೆದು ಮತ್ತದೇ ಕಂಪೆನಿಗೆ ಮೊದಲಿಗಿಂದ 2.5 ಪಟ್ಟು ಹೆಚ್ಚು ಸಂಬಳದ ಕೆಲಸಕ್ಕೆ ಆಯ್ಕೆಯಾಗುತ್ತಾರೆ. ಈಕೆಯ ಸ್ಫೂರ್ತಿದಾಯಕ ಕಥೆಯನ್ನು ಆದಿತ್ಯ ವೆಂಕಟೇಶನ್ ಎಂಬವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‌ ಬೆಂಗಳೂರಿನ ಆದಿತ್ಯ ವೆಂಕಟೇಶನ್ ಎಂಬವರು ಯುವತಿಯೊಬ್ಬರ ಜೊತೆ ಡೇಟಿಂಗ್‌ ಹೋದ ಸಂದರ್ಭದಲ್ಲಿ ಆಕೆಯ ಈ ಯಶಸ್ಸಿನ ಕಥೆಯ ಬಗ್ಗೆ ತಿಳಿದುಕೊಳ್ಳುತ್ತಾರೆ. ಈ ಸ್ಫೂರ್ತಿದಾಯಕ ಕಥೆಯನ್ನು ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಆಕೆ ಐವಿ ಲೀಗ್‌ ಪದವಿಯನ್ನು ಹೊಂದಿಲ್ಲದ ಕಾರಣ ಕಛೇರಿಯಲ್ಲಿ ಅವಳನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ, ಜೊತೆಗೆ ಆಕೆಗೆ ಯಾವುದೇ ಬಡ್ತಿಯೂ ಲಭಿಸುತ್ತಿರಲಿಲ್ಲ. ಇದರಿಂದ ಕೆಲಸವನ್ನು ತೊರೆದು ಐವಿ ಪದವಿಯನ್ನು ಪಡೆದು ಮತ್ತದೇ ಕಂಪೆನಿಯಲ್ಲಿ ಹಿಂದಿನದ್ದಕ್ಕಿಂತ 2.5 ಪಟ್ಟು ಹೆಚ್ಚು ಸಂಬಳದ ಕೆಲಸಕ್ಕೆ ಆಯ್ಕೆಯಾದಳು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಒಂದು ಹಾವು ಕೈಯಲ್ಲಿ, ಮತ್ತೊಂದು ಹೆಗಲಲ್ಲಿ; ದೈತ್ಯ ಹಾವುಗಳೊಂದಿಗೆ ಮೆಟ್ರೋದಲ್ಲಿ ಕಾಣಿಸಿಕೊಂಡ ವ್ಯಕ್ತಿ

@adadithya ಎಂಬ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್‌ ಒಂದುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಅನೇಕರು ಆ ಮಹಿಳೆಯ ಸ್ಫೂರ್ತಿದಾಯಕ ಯಶಸ್ಸಿನ ಕಥೆಯನ್ನು ಮೆಚ್ಚಿಕೊಂಡಿದ್ದಾರೆ. ‌

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: