Viral Video: ಒಂದು ಹಾವು ಕೈಯಲ್ಲಿ, ಮತ್ತೊಂದು ಹೆಗಲಲ್ಲಿ; ದೈತ್ಯ ಹಾವುಗಳೊಂದಿಗೆ ಮೆಟ್ರೋದಲ್ಲಿ ಕಾಣಿಸಿಕೊಂಡ ವ್ಯಕ್ತಿ
ವಿಡಿಯೋದಲ್ಲಿ ಒಂದು ಹಾವನ್ನು ಕೈಯಲ್ಲಿ ಹಿಡಿದು ಮತ್ತು ಮತ್ತೊಂದು ಹಾವನ್ನು ಹೆಗಲಲ್ಲಿ ಹಾಕಿಕೊಂಡು ವ್ಯಕ್ತಿಯೊಬ್ಬ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಆ ವೈರಲ್ ವಿಡಿಯೋ ಇಲ್ಲಿದೆ ನೋಡಿ.
ವ್ಯಕ್ತಿಯೊಬ್ಬ ಎರಡು ದೈತ್ಯ ಹಾವುಗಳನ್ನು ಹಿಡಿದುಕೊಂಡು ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ವಿಡಿಯೋವೊಂದು ವೈರಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್. ವಿಡಿಯೋದಲ್ಲಿ ಒಂದು ಹಾವು ಕೈಯಲ್ಲಿ ಹಿಡಿದು ಮತ್ತು ಮತ್ತೊಂದು ಹಾವನ್ನು ಹೆಗಲಲ್ಲಿ ಹಾಕಿಕೊಂಡು ಆತ ಕುಳಿತಿರುವುದನ್ನು ಕಾಣಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕಾರಿ ಹಾವುಗಳನ್ನು ಹೊತ್ತೊಯ್ಯುತ್ತಿರುವುದು ಎಷ್ಟು ಸರಿ? ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ ಮೂಲಕ ಪ್ರಶ್ನಿಸಿದ್ದಾರೆ.
@factsclip ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೇ 06ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 23.4 ಮಿಲಿಯನ್ ಅಂದರೆ ಎರಡು ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. 901,729 ನೆಟ್ಟಿಗರು ವಿಡಿಯೋಗೆ ಲೈಕ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಮಳೆಗೆ ನಡುರಸ್ತೆಯಲ್ಲೇ ಪ್ರೇಮಿಗಳ ರೋಮ್ಯಾಂಟಿಕ್ ಡ್ಯಾನ್ಸ್; ವಿಡಿಯೋ ವೈರಲ್
ವಿಡಿಯೋದಲ್ಲಿ ಆತನ ಮುಂದೆ ಕುಳಿತಿರುವ ಮಹಿಳೆ ಹೆದರಿರುವುದನ್ನು ಕಾಣಬಹುದು. ಉಳಿದ ಪ್ರಯಾಣಿಕರು ಏನು ಅರಿಯದಂತೆ ತಮ್ಮ ಪಾಡಿಗೆ ತಾವು ಪ್ರಯಾಣಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:13 am, Fri, 14 June 24