ತಮಿಳು ನಟ ಕೆ ವಿಜಯನ್ ಸಾವು: ಪೊಲೀಸರಿಂದ ತನಿಖೆ
ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟ, ಪೋಷಕ ನಟ ಪ್ರದೀಪ್ ಕೆ ವಿನಯನ್ ನಿಧನ ಹೊಂದಿದ್ದಾರೆ. ಅವರ ಮನೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ನಿಧನಕ್ಕೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ತಮಿಳು (Kollywood) ಸಿನಿಮಾಗಳ ಪೋಷಕ, ಹಾಸ್ಯ ನಟ ಪ್ರದೀಪ್ ಕೆ ವಿಜಯನ್ ನಿಧನ ಹೊಂದಿದ್ದಾರೆ. ಅವರ ನಿವಾಸದಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ. ನಿಧನಕ್ಕೆ ಕಾರಣ ತಿಳಿದುಬಂದಿಲ್ಲ, ಜೂನ್ 12ರಂದೇ ವಿಜಯನ್ ನಿಧನ ಹೊಂದಿದ್ದಾರೆ ಎನ್ನಲಾಗುತ್ತಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಿಜಯನ್ ತಮಿಳಿನ ಹಲವು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ, ಪೋಷಕ ನಟನಾಗಿ ನಟಿಸಿ ಖ್ಯಾತಿಗಳಿಸಿದ್ದರು.
ತಮಿಳುನಾಡಿನ ಚೆನ್ನೈನ ಪಾಲವಕ್ಕಂ ಏರಿಯಾನಲ್ಲಿ ಕೆ ವಿಜಯನ್ ಮನೆಯಲ್ಲಿಯೇ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹ ಪತ್ತೆಯಾದಾಗ ತಲೆಗೆ ಪೆಟ್ಟು ಬಿದ್ದಿತ್ತು ಎನ್ನಲಾಗಿದ್ದು, ವಿಜಯನ್ ಮೃತದೇಹ ನೆಲದ ಮೇಲೆ ಬಿದ್ದಿತ್ತು ಎನ್ನಲಾಗುತ್ತಿದೆ. ಆದರೆ ಮನೆ ಒಳಗಿನಿಂದ ಬಂದ್ ಆಗಿತ್ತು. ವಿಜಯನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆಯೇ ಅಥವಾ ಅವರ ಮೇಲೆ ಹಲ್ಲೆ ಆಗಿದೆಯೇ ಎಂಬ ಬಗ್ಗೆ ಖಾತ್ರಿ ಇಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ವಿಜಯನ್ ಅವರ ಗೆಳೆಯ ಅವರನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ವಿಜಯನ್ ಫೋನ್ ರಿಸೀವ್ ಮಾಡಿರಲಿಲ್ಲ. ಮನೆಯೂ ಸಹ ಒಳಗಿನಿಂದ ಬಂದ್ ಆಗಿತ್ತು. ಹಾಗಾಗಿ ಅವರು ನೀಲಂಕರಿ ಏರಿಯಾದ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಅಗ್ನಿ ಶಾಮಕದಳದವರ ನೆರವು ಪಡೆದು ಮನೆ ಒಳಗೆ ಹೋದಾಗ ಮನೆಯಲ್ಲಿ ನೆಲದ ಮೇಲೆ ವಿಜಯನ್ ಮೃತದೇಹ ಬಿದ್ದಿರುವುದು ಕಂಡಿದೆ.
ಇದನ್ನೂ ಓದಿ:ದರ್ಶನ್ ಹೀರೋ ಅಲ್ಲ.. ಖಳನಾಯಕ! ಮಂಡ್ಯ ರೈತರ ಆಕ್ರೋಶ ನೋಡಿ
ವಿಜಯನ್ ಸಾವಿನ ಬಗ್ಗೆ ತಮಿಳು ಚಿತ್ರರಂಗದ ಕೆಲವು ಸೆಲೆಬ್ರಿಟಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಕಿ, ನಟಿ ಸೌಂದರ್ಯಾ ನಂದ ಕುಮಾರ್ ಟ್ವೀಟ್ ಮಾಡಿ, ‘ಈ ಸುದ್ದಿ ಆಘಾತ ತಂದಿದೆ. ನನ್ನ ಪ್ರೀತಿಯ ಸಹೋದರನಂತೆ ವಿಜಯನ್ ಇದ್ದರು. ನಾವು ಪ್ರತಿದಿನವೂ ಮಾತನಾಡುತ್ತಿರಲಿಲ್ಲವಾದರೂ ಮಾತನಾಡಿದಾಗೆಲ್ಲವೂ ಬಹಳ ಪ್ರೀತಿ, ಆತ್ಮೀಯತೆಯಿಂದ ಮಾತನಾಡುತ್ತಿದ್ದೆವು, ವಿಜಯನ್ ಅವರನ್ನು ಬಹಳ ಮಿಸ್ ಮಾಡಿಕೊಳ್ಳಲಿದ್ದೇನೆ’ ಎಂದಿದ್ದಾರೆ.
ಪ್ರದೀಪ್ ವಿಜಯನ್ ಅವರನ್ನು ತಮಿಳು ಚಿತ್ರರಂಗದ ಮಂದಿ ‘ಪಪ್ಪು’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ವಿಜಯನ್, ‘ಹೇ ಸಿನಮಿಕಾ’, ‘ತೇಗಿಡಿ’, ‘ರುದ್ರನ್’, ವಿಜಯ್ ಸೇತುಪತಿ ನಟಿಸಿರುವ ‘ಮಹಾರಾಜ’ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




