Cockroach Farming: ಈ ದೇಶದಲ್ಲಿ ಜಿರಳೆಗಳ ಬೆಲೆಯಲ್ಲಿ ಭಾರೀ ಏರಿಕೆ; 1 ಕೆಜಿ ಬೆಲೆ ಕೇಳಿದ್ರೆ ಶಾಕ್ ಆಗೋದು ಖಂಡಿತಾ
ಚೀನಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಜಿರಳೆಗಳನ್ನು ಆಹಾರವಾಗಿ ಬಳಸಲಾಗುತ್ತದೆ. ಇದಲ್ಲದೆ, ಜಿರಳೆಗಳನ್ನು ಔಷಧಿಗಳು ಮತ್ತು ಸೌಂದರ್ಯವರ್ಧಕಗಳ ಉತ್ಪಾದನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಜಿರಳೆಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಇದರ ಸಾಕಣೆಯೂ ಈಗ ಹೆಚ್ಚಾಗಿ ಕಂಡುಬರುತ್ತಿದೆ.
ಎಲ್ಲರ ಮನೆಯಲ್ಲಿ ಕೇಳಿಬರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಜಿರಳೆ ಕಾಟ. ಇದಕ್ಕಾಗಿ ಸಾಕಷ್ಟು ಔಷಧಿಗಳನ್ನು ಖರೀದಿಸಿ, ಅಥವಾ ಮನೆಯಲ್ಲೇ ಔಷಧಿಗಳನ್ನು ತಯಾರಿಸಿ ಜಿರಳೆಗಳ ವಂಶವನ್ನೇ ನಾಶ ಮಾಡಿಬಿಡುತ್ತೇವೆ. ಆದರೆ ಕೆಲವು ದೇಶಗಳಲ್ಲಿ ಜಿರಳೆಗಳನ್ನು ಆಹಾರವಾಗಿ ಬಳಸಲಾಗುತ್ತದೆ. ಅದಕ್ಕಾಗಿಯೇ ಪ್ರಪಂಚದ ಕೆಲವು ಭಾಗಗಳಲ್ಲಿ ಜಿರಳೆಗಳು ಚಿನ್ನದಷ್ಟೇ ಮೌಲ್ಯಯುತವಾಗಿವೆ.
ಮೀನು, ಆಡು ಮತ್ತು ಕೋಳಿಗಳಲ್ಲಿ ಪ್ರೋಟೀನ್ ಅಂಶವಿರುವಂತೆಯೇ ಜಿರಳೆಗಳಲ್ಲೂ ಪ್ರೋಟೀನ್ ಅಂಶವಿದೆ ಎಂದು ವರದಿಯಾಗಿದೆ. ಈ ಕಾರಣಕ್ಕಾಗಿ, ಚೀನಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಜಿರಳೆಗಳನ್ನು ಆಹಾರವಾಗಿ ಬಳಸಲಾಗುತ್ತದೆ. ಜಿರಳೆಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಕೆಲವರು ಈ ಕೀಟವನ್ನು ಸಾಕಲು ಆರಂಭಿಸಿದ್ದಾರೆ.
ನಮ್ಮ ದೇಶದಲ್ಲಿ ಕುರಿ ಮತ್ತು ಕೋಳಿ ಸಾಕಣೆಯಂತೆ ಕೆಲವು ದೇಶಗಳಲ್ಲಿ ಜಿರಳೆ ಸಾಕಣೆಯೂ ನಡೆಯುತ್ತದೆ. ಜಿರಳೆಗಳನ್ನು ಸಾಕಲಾಗುತ್ತದೆ ಮತ್ತು ಉತ್ತಮ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಪ್ರಸ್ತುತ, ಸುಮಾರು 6,000 ಕೀಟಗಳನ್ನು ತಿನ್ನಲು ಬಳಸಲಾಗುತ್ತದೆ. ಜಿರಳೆಗಳೂ ಈ ವರ್ಗಕ್ಕೆ ಸೇರುತ್ತವೆ. 2030 ರ ವೇಳೆಗೆ ಸುಮಾರು 8 ಬಿಲಿಯನ್ ಜನರು ಜಿರಳೆಗಳನ್ನು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ ಎಂದು ಅಂದಾಜಿಸಲಾಗಿದೆ.
ಆಫ್ರಿಕಾದ ತಾಂಜಾನಿಯಾದಲ್ಲಿ ಜಿರಳೆಗಳು ಹೇರಳವಾಗಿ ಸಾಕಲಾಗುತ್ತದೆ. ಇಲ್ಲಿ 1 ಕೆಜಿ ಜಿರಳೆಗಳನ್ನು 5 ಯುರೋಗಳಿಗೆ ಮಾರಾಟ ಮಾಡಲಾಗುತ್ತದೆ. ಅಂದರೆ ಅಂದಾಜು 458 ರೂಪಾಯಿ. ಜಿರಳೆ ಎಣ್ಣೆಯನ್ನೂ ಉತ್ಪಾದಿಸಲಾಗುತ್ತಿದೆ. ಉಗಾಂಡಾ ಮತ್ತು ಆಫ್ರಿಕಾದ ಕೆಲವು ಬುಡಕಟ್ಟುಗಳು ಜಿರಳೆಯನ್ನು ತಮ್ಮ ಮುಖ್ಯ ಆಹಾರವೆಂದು ಪರಿಗಣಿಸುತ್ತಾರೆ.
ಇದನ್ನೂ ಓದಿ: ಕ್ರಾಪ್ ಓವರ್ ಫೆಸ್ಟಿವಲ್ನಲ್ಲಿ ಪಾಪ್ ಗಾಯಕಿ ರಿಹಾನ್ನಾ ಅವತಾರ ಹೇಗಿದೆ ನೋಡಿ
ವಿಶ್ವದ ಅತಿದೊಡ್ಡ ಜಿರಳೆ ಉತ್ಪಾದನಾ ಘಟಕವು ಚೀನಾದ ಕ್ಸಿಚಾಂಗ್‌ನಲ್ಲಿದೆ. ಇಲ್ಲಿ, ಜಿರಳೆಗಳನ್ನು AI ಸಹಾಯದಿಂದ ಜಿರಳೆಗಳ ವಂಶವನ್ನೇ ಬೆಳೆಸಲಾಗುತ್ತದೆ. ಈ ದೇಶದ ರೆಸ್ಟೋರೆಂಟ್‌ಗಳಲ್ಲಿ ಜಿರಳೆಗಳಿಗಾಗಿ ವಿಶೇಷ ಖಾದ್ಯವೂ ಇದೆ. ಇದಲ್ಲದೆ, ಜಿರಳೆಗಳನ್ನು ಔಷಧಿಗಳು ಮತ್ತು ಸೌಂದರ್ಯವರ್ಧಕಗಳ ಉತ್ಪಾದನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಹಾಗಾಗಿಯೇ ಜಿರಳೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ಇದೀಗ ಜಿರಳೆಗಳ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ