Viral: ಒಂದು ದಿನಕ್ಕೆ ನನ್ನನ್ನು ಬಾಡಿಗೆಗೆ ಪಡೆಯಬಹುದು; ಗಂಡ್ಮಕ್ಕಳಿಗೆ ವಿಶೇಷ ಆಫರ್ ನೀಡಿದ ಯುವತಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ಪೋಸ್ಟ್ ಗಳನ್ನು ಕಂಡಾಗ ನಗಬೇಕೋ ಅಳಬೇಕೋ ತಿಳಿಯಲ್ಲ. ಎಂತೆಂತಹ ಜನ ಇರ್ತಾರೆ ಎಂದೆನಿಸಬಹುದು. ಇಲ್ಲೊಬ್ಬ ಯುವತಿಯೂ ಯುವಕರಿಗೆ ಒಂದು ದಿನ ಮಟ್ಟಿಗೆ ವಿಶೇಷ ಆಫರ್ ನೀಡಿದ್ದಾಳೆ. ಯುವತಿ ಮಾಡಿದ ಪೋಸ್ಟ್ ಸದ್ಯ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಒಂದು ದಿನಕ್ಕೆ ನನ್ನನ್ನು ಬಾಡಿಗೆಗೆ ಪಡೆಯಬಹುದು; ಗಂಡ್ಮಕ್ಕಳಿಗೆ ವಿಶೇಷ ಆಫರ್ ನೀಡಿದ ಯುವತಿ
ವೈರಲ್‌ ಪೋಸ್ಟ್‌
Image Credit source: Twitter

Updated on: Jul 08, 2026 | 1:12 PM

ಕಷ್ಟ ಪಟ್ಟು ದುಡಿಯೋರಿಗಿಂತ ಸುಲಭದಲ್ಲಿ ಹಾದಿಯಲ್ಲಿ ಹಣ (money) ಹೇಗೆ ಮಾಡ್ಬಹುದು ಎಂದು ಯೋಚಿಸುವವರೇ ಹೆಚ್ಚು. ಹೀಗಾಗಿ ಕೆಲವರು ತಮ್ಮ ಬುದ್ಧಿವಂತಿಕೆ ಉಪಯೋಗಿಸಿ ಪಂಗನಾಮ ಹಾಕಿ ಬಿಡ್ತಾರೆ. ಆದರೆ ಇದೆಲ್ಲದರ ನಡುವೆ ಯುವತಿಯೊಬ್ಬಳು ದುಡ್ಡು ಮಾಡಲು ಒಳ್ಳೆಯ ಉಪಾಯ ಕಂಡುಕೊಂಡಿದ್ದಾಳೆ. ಬ್ಯಾಚುಲರ್ಸ್ ಗಳಿಗೆ ಒಂದೊಳ್ಳೆ ಆಫರ್ ನೀಡಿದ್ದಾಳೆ. ಹೌದು, ತನ್ನ ದಿನದ ಸಮಯವನ್ನು ನಿಮಗಾಗಿ ಮೀಸಲಿಡುವೆ, ಆದರೆ ನೀವು ನನಗೆ ಇಂತಿಷ್ಟು ಹಣ ಪಾವತಿಸಬೇಕು ಎಂದಿದ್ದಾಳೆ. ಈ ಯುವತಿಯ ಈ ಜಾಹೀರಾತಿನ (advertisement) ಪೋಸ್ಟ್ ಸದ್ಯ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ನಳಿನಿ ಉನಾಗರ್ (Nalini Unagar) ತಮ್ಮ ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಇದರಲ್ಲಿ ನನ್ನನ್ನು ಒಂದು ದಿನದ ಮಟ್ಟಿಗೆ ಬಾಡಿಗೆಗೆ ಪಡೆಯಬಹುದು ಎಂದು ಉಲ್ಲೇಖಿಸಿದ್ದಾಳೆ. ಪ್ರೀತಿ ಪ್ರೇಮ ಎನ್ನುವವರಿಗೆ ಈ ವಿಶೇಷ ಆಫರ್ ಇಲ್ಲ. ನಿಮ್ಮ ದಿನನಿತ್ಯದ ಚಟುವಟಿಕೆಗಳಿಗೆ ಹಾಗೂ ಹೊರಗಿನ ಕಾರ್ಯಕ್ರಮಗಳಿಗೆ ಹೋಗಲು ಮಾತ್ರ ಎಂದು ಹೇಳಿದ್ದಾಳೆ.

ವೈರಲ್ ಪೋಸ್ಟ್ ಇಲ್ಲಿದೆ

ನೀವು ಒಂದು ದಿನದ ಸಂಗಾತಿಯಾಗಿ ಇರುವೆ. ಕಾಫಿ ಕುಡಿಯುವುದು, ಸಿನಿಮಾ ನೋಡುವುದು, ಶಾಪಿಂಗ್, ಕುಟುಂಬದ ಸಮಾರಂಭಗಳಿಗೆ ಹಾಜರಾಗುವುದು, ಹೊಸ ಸ್ಥಳಗಳನ್ನು ಸುತ್ತಾಡುವುದು ಹಾಗೂ ಸುಮ್ಮನೆ ಮಾತನಾಡಲು ಒಬ್ಬರು ಬೇಕು ಎನ್ನುವವರು ತನ್ನನ್ನು ಸಂಪರ್ಕ ಮಾಡಬಹುದು ಎಂದು  ಬರೆದಿರುವುದನ್ನು ಕಾಣಬಹುದು. ಅಲ್ಲದೇ  ದಿನನಿತ್ಯದ ಚಟುವಟಿಕೆಯಲ್ಲಿ ನಾನು ನಿಮ್ಮ ಜತೆಗೆ ಇರಲು ಎಷ್ಟು ಮೊತ್ತ ಆಗುತ್ತದೆ ಎಂದು ಇಲ್ಲಿ ಉಲ್ಲೇಖಿಸಿರುವುದನ್ನು  ನೋಡಬಹುದು.

ಇದನ್ನೂ ಓದಿ: ಸಂಬಳ ಹೆಚ್ಚಳಕ್ಕಾಗಿ ಕೆಲಸ ಬದಲಾವಣೆ; ಕೆಲಸಕ್ಕೆ ಸೇರಿದ ಮೂರೇ ತಿಂಗಳಿಗೆ ಜಾಬ್‌ ಕಳೆದುಕೊಂಡ ಉದ್ಯೋಗಿ

ಜುಲೈ 6 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಇದುವರೆಗೆ ಎರಡುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಎಂಐ ಇದೆಯೇ ಎಂದು ಕೇಳಿದ್ದಾರೆ. ಮತ್ತೊಬ್ಬರು, ಜನರು ಜಪಾನಿನಿಂದ ಎಲ್ಲವನ್ನೂ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಯುವತಿ ನೀಡಿದ ಈ ಆಫರ್ ಹಣ ದುಬಾರಿಯಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us