ನೀವೊಬ್ಬ ಗಡ್ಡಧಾರಿಯಾಗಿದ್ದು ಕುಮಾವತ್ ಸಮುದಾಯದ ಯುವತಿಯನ್ನು ಮದುವೆಯಾಗುವ ಆಸೆಯಿದ್ದರೆ ಮೊದಲು ನುಣ್ಣಗೆ ಗಡ್ಡ ಬೋಳಿಸಿಕೊಳ್ಳಿ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 18, 2022 | 8:05 AM

ಇದಲ್ಲದೆ ಮದುವೆ ಸಮಾರಂಭಗಳಲ್ಲಿ ಆಡಂಬರವನ್ನು ಕಮ್ಮಿ ಮಾಡಿ ಅದನ್ನು ಸರಳಗೊಳಿಸುವ ಉದ್ದೇಶದಿಂದ ಬೇರೆ ಕೆಲ ನಿರ್ಣಯಗಳನ್ನು ಸಹ ಸಮುದಾಯದ ಹಿರಿಯರು ತೆಗೆದುಕೊಂಡಿದ್ದಾರೆ.

ನೀವೊಬ್ಬ ಗಡ್ಡಧಾರಿಯಾಗಿದ್ದು ಕುಮಾವತ್ ಸಮುದಾಯದ ಯುವತಿಯನ್ನು ಮದುವೆಯಾಗುವ ಆಸೆಯಿದ್ದರೆ ಮೊದಲು ನುಣ್ಣಗೆ ಗಡ್ಡ ಬೋಳಿಸಿಕೊಳ್ಳಿ!
ಪ್ರಾತಿನಿಧಿಕ ಚಿತ್ರ
Follow us on

Pali (Rajasthan): ನಮ್ಮ ದೇಶದ ಮದುವೆ ಸಂಪ್ರದಾಯಗಳು (traditions) ಹತ್ತು ಹಲವು ಬಗೆ. ಒಂದು ಪ್ರದೇಶದ ಅಥವಾ ರಾಜ್ಯದ ಅಚರಣೆ ಪದ್ಧತಿ ಮತ್ತೊಂದು ರಾಜ್ಯಕ್ಕಿಂತ ಭಿನ್ನ. ಬೇರೆ ಬೇರೆ ಸಮುದಾಯಗಳು (community) ತಮ್ಮವೇ ಆದ ವಿಧಿ-ವಿಧಾನ ಮತ್ತು ಆಚರಣೆಯನ್ನು ಹೊಂದಿವೆ. ಈ ಮಾತು ನಮ್ಮ ಗ್ರಾಮಗಳಿಗೂ ಅನ್ವಯಿಸುತ್ತದೆ (rural India) ಮಾರಾಯ್ರೇ. ಇದನ್ನು ನಾವು ಯಾಕೆ ಹೇಳುತ್ತಿದ್ದೇವೆ ಅಂದರೆ ರಾಜಸ್ತಾನದಲ್ಲಿ ಒಂದು ಸಮುದಾಯಯವು ಮದುವೆಗೆ ಒಂದು ವಿಲಕ್ಷಣ ಮತ್ತು ಕಠಿಣವೆನಿಸುವ ನಿಯಮನ್ನು ಜಾರಿಗೊಳಿಸಿದೆ. ಅದೇನು ಗೊತ್ತಾ? ಮದುವೆಯಾಗ ಬಯಸುವ ಯುವಕ ಗಡ್ಡಧಾರಿಯಾಗಿರಬಾರದು ಅಂದರೆ ಗಡ್ಡ ಬೆಳೆಸಿರಬಾರದು. ಪಾಲಿ ಜಿಲ್ಲೆಯ 19 ಗ್ರಾಮಗಳಲ್ಲಿ ಗಡ್ಡಧಾರಿ ಯುವಕರಿಗೆ ಮದುವೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದಿಲ್ಲ. ನುಣ್ಣಗೆ ಗಡ್ಡ ಬೋಳಿಸಿರುವ ಯುವಕ ಮಾತ್ರ ಮದುವೆಯಾಗುವ ಅವಕಾಶ!

‘ಗಡ್ಡ ಬೆಳೆಸುವುದು ಫ್ಯಾಶನ್ ಅಂತ ಪರಿಗಣಿಸುವುದು ಓಕೆ, ಅದನ್ನು ನಾವು ಕೂಡ ಒಪ್ಪುತ್ತೇವೆ, ಆದರೆ ಮದುಗೆ ಅನ್ನೋದು ಒಂದು ಪವಿತ್ರ ಸಂಸ್ಕಾರವಾಗಿದ್ದು ನಮ್ಮ ಸಂಪ್ರದಾಯದಲ್ಲಿ ಮದುವೆಯಾಗಲಿರುವ ಪುರುಷನನ್ನು ಒಬ್ಬ ಮಹಾರಾಜನೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಅವನು ನುಣ್ಣಗೆ ಬೋಳಿಸಿಕೊಂಡಿರಬೇಕು’ ಎಂದು ಪಾಲಿ ಜಿಲ್ಲೆಯ 19 ಗ್ರಾಮಗಳ ಕುಮಾವತ್ ಸಮುದಾಯದ ಹಿರಿಯರು ತೆಗೆದುಕೊಂಡಿರುವ ನಿರ್ಣಯದಲ್ಲಿ ಹೇಳಲಾಗಿದೆ.

ಇದಲ್ಲದೆ ಮದುವೆ ಸಮಾರಂಭಗಳಲ್ಲಿ ಆಡಂಬರವನ್ನು ಕಮ್ಮಿ ಮಾಡಿ ಅದನ್ನು ಸರಳಗೊಳಿಸುವ ಉದ್ದೇಶದಿಂದ ಬೇರೆ ಕೆಲ ನಿರ್ಣಯಗಳನ್ನು ಸಹ ಸಮುದಾಯದ ಹಿರಿಯರು ತೆಗೆದುಕೊಂಡಿದ್ದಾರೆ. ಇನ್ನುಮುಂದೆ ಮದುವೆಗಳಲ್ಲಿ ಬಂದೋಲಿ ಡಿಜೆ ಡ್ಯಾನ್ಸ್ಗಳನ್ನು ಮತ್ತೇರಿಸುವ ಮದ್ಯಪಾನವನ್ನು ನಿಷೇಧಿಸಲಾಗುವುದು. ಹಲ್ದೀ ಸಮಾರಂಭದಲ್ಲಿ ಹಳದಿ ಬಣ್ಣವನ್ನು ಉಪಯೋಗಿಸುವಂತಿಲ್ಲ.

ಈ ನಿಯಮಗಳಿಗೆ ಬದ್ಧರಾಗದೆ, ಬಟ್ಟೆ ಮತ್ತು ಡೆಕೋರೇಷನ್ಗಳ ಮೇಲೆ ಮನಬಂದಂತೆ ಖರ್ಚು ಮಾಡುವ ಕುಟುಂಬಗಳ ಮೇಲೆ ಜುಲ್ಮಾನೆ ವಿಧಿಸಲಾಗುವುದು. ವಧು ಧರಿಸಬಹುದಾದ ಒಡವೆ ಪ್ರಮಾಣದ ಮೇಲೂ ಒಂದು ಮಿತಿಯನ್ನು ಹೇರಲಾಗಿದೆ. ಮದುವೆ ಮತ್ತು ಅದಕ್ಕೆ ಸಂಬಂಧಿಸಿದ ಸಮಾರಂಭಗಳಲ್ಲಿ ಯಾವ್ಯಾವ ಸಿಹಿ ತಿಂಡಿ ಮತ್ತು ಊಟೋಪಚಾರಗಳನ್ನು ಮಾಡಬಹುದು ಅನ್ನವುದನ್ನು ಕೂಡ ನಿರ್ಧರಿಸಿ ಒಂದು ಪಟ್ಟಿ ತಯಾರಿಸಲಾಗಿದೆ.

‘ಇತ್ತೀಚಿಗೆ ಮದುವೆಗಳು ಆಡಂಬರದ ದ್ಯೋತಕವಾಗಿದ್ದು ಆದು ನಮ್ಮ ಸಮುದಾಯದ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳಲ್ಲಿ ಆತಂಕ ಮತ್ತು ಕಳವಳವನ್ನು ಸೃಷ್ಟಿಸುತ್ತಿದೆ. ಹಾಗಾಗಿ ನಮ್ಮ ಸಮುದಾಯದ ವಿಧಿ ವಿಧಾನಗಳ ಪ್ರಕಾರ ಅವುಗಳನ್ನು ನಾವು ಸರಳಗೊಳಿಸಿದ್ದೇವೆ’ ಎಂದು ಸಮುದಾಯದ ಹಿರಿಯರಲ್ಲಿ ಒಬ್ಬರಾಗಿರುವ ಲಕ್ಷ್ಮಿನಾರಾಯಣ ಹೇಳುತ್ತಾರೆ.

ಈ ನಿಯಮ ಪಾಲಿ ಜಿಲ್ಲೆಯ ಎಲ್ಲಾ ಜನಗಳಿಗೆ ಆಂದರೆ ಜಿಲ್ಲೆಯಿಂದ ಬೇರೆ ಭಾಗಗಳ ನಗರಗಳಿಗೆ ವಲಸೆ ಹೋಗಿರುವ ಜನರಿಗೂ ಅನ್ವಯವಾಗುತ್ತದೆ. ಲಕ್ಷ್ಮಿನಾರಾಯಣ ಅವರು ಹೇಳುವ ಪ್ರಕಾರ ಅವರ ಸಮುದಾಯ ಜನಸಂಖ್ಯೆ 20,000 ಆಗಿದ್ದು ಅವರು ದೇಶದ ನಾನಾಭಾಗಗಳಲ್ಲಿ ವಾಸವಾಗಿದ್ದಾರೆ. ಸಮುದಾಯದ ಪ್ರತಿಯೊಬ್ಬ ವ್ಯಕ್ತಿ ದೇಶದ ಯಾವುದೇ ಮೂಲೆಯಲ್ಲಿ ವಾಸವಾಗಿರಲಿ, ಸಮಿತಿ ತೆಗೆದಕೊಂಡಿರುವ ನಿರ್ಣಯಗಳಿಗೆ ಬದ್ಧರಾಗಿರಬೇಕು ಅಂತ ಅವರು ಹೇಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.