Viral Pic: ಇಲಿಯ ಬಳಿ ಇತ್ತು ಬರೋಬ್ಬರಿ 5 ಲಕ್ಷ ಮೌಲ್ಯದ ಚಿನ್ನ! ಇಲಿ ಲಕ್ಷಾಧಿಪತಿಯಾಗಿದ್ದು ಹೇಗೆ? ಇಲಿದೆ ಕುತೂಹಲಕಾರಿ ಸ್ಟೋರಿ

ಆಹಾರ ಹುಡುಕಿಕೊಂಡು ಕಸದಬುಟ್ಟಿ ಬಳಿ ಬಂದ ಇಲಿ ಲಕ್ಷಾಧಿಪತಿಯಾದ ನೈಜ ಕಥೆ ಇದು, ಇಷ್ಟಕ್ಕೂ ಇಲಿಗೆ ಅಮೂಲ್ಯ ವಸ್ತು ಸಿಕ್ಕಿದ್ದಾದರೂ ಹೇಗೆ ಎಂಬ ಕುತೂಹಲಕಾರಿ ಸಂಗತಿ ತಿಳಿಯಲು ಈ ಸುದ್ದಿ ಓದಿ.

Viral Pic: ಇಲಿಯ ಬಳಿ ಇತ್ತು ಬರೋಬ್ಬರಿ 5 ಲಕ್ಷ ಮೌಲ್ಯದ ಚಿನ್ನ! ಇಲಿ ಲಕ್ಷಾಧಿಪತಿಯಾಗಿದ್ದು ಹೇಗೆ? ಇಲಿದೆ ಕುತೂಹಲಕಾರಿ ಸ್ಟೋರಿ
ಇಲಿ ಮತ್ತು ಚಿನ್ನ
Updated By: Rakesh Nayak Manchi

Updated on: Jun 17, 2022 | 5:38 PM

ಮನುಷ್ಯರು ಚಿನ್ನ ಖರೀದಿಸಿಡುವುದು ಸಾಮಾನ್ಯ, ಆದರೆ ಪ್ರಾಣಿಗಳ ಬಳಿಯೂ ಚಿನ್ನ ಇದೆ ಎಂದರೆ ಇದು ಅಚ್ಚರಿಯ ಸಂಗತಿಯಲ್ಲದೆ ಮತ್ತಿನ್ನೇನು? ಅಷ್ಟಕ್ಕೂ ಇಲಿಯ ಬಳಿ ಇದ್ದ ಚಿನ್ನದ ದರ ಎಷ್ಟು ಭಾರ ತೂಗುತ್ತದೆ ಅಂದರೆ ಒಂದು ಕಡಿಮೆ ಮೌಲ್ಯದ ಕಾರನ್ನು ಖರೀದಿಸಬಹುದು. ಆದರೆ ಇಲಿ ಲಕ್ಷಾಧಿಪತಿಯಾಗಿದ್ದು ಹೇಗೆ? ಲಕ್ಷಾಂತರ ಮೌಲ್ಯದ ಚಿನ್ನ ಇಲಿಗೆ ಸಿಕ್ಕಿದ್ದಾದರೂ ಹೇಗೆ? ಈ ಬಗ್ಗೆ ಕುತೂಹಲಕಾರಿ ಸ್ಟೋರಿ ಇಲ್ಲಿದೆ ನೋಡಿ.

ಇದನ್ನೂ ಓದಿ: Viral Video: ಹುಲಿಗಳ ಮಧ್ಯೆ ನಾಯಿ ಜೀವಂತವಾಗಿರಲು ಸಾಧ್ಯವೇ? ಸಾಧ್ಯ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ!

ಮುಂಬೈನ ಗೋಕುಲ್‌ ಧಾಮ್‌ ಕಾಲೋನಿಯ ಮಹಿಳೆಯೊಬ್ಬರು ಚಿನ್ನಾಭರಣವನ್ನು ಠೇವಣಿ ಇಡಲು ಬ್ಯಾಂಕ್​ಗೆ ಹೋಗಿದ್ದಾರೆ. ಈ ವೇಳೆ ರಸ್ತೆಯಲ್ಲಿ ಆಡುತ್ತಿದ್ದ ಮಕ್ಕಳಿಗೆ ಚಿನ್ನ ಇದ್ದ ಪ್ಯಾಕೇಟ್​ ಅನ್ನು ಬ್ರೆಡ್ ಎಂದು ತಪ್ಪಾಗಿ ತಿಳಿದು ನೀಡಿ ಹೋಗಿದ್ದಾರೆ. ಆದರೆ ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ ಮುಗ್ದ ಮಕ್ಕಳಿಗೆ ಅದು ಚಿನ್ನ ಎಂದು ತಿಳಿಯಲೇ ಇಲ್ಲ. ಮಹಿಳೆ ನೀಡಿದ ಪ್ಯಾಕ್​ನಲ್ಲಿ ತಿನ್ನುವ ವಸ್ತು ಇಲ್ಲ ಎಂದು ತಿಳಿದ ಮಕ್ಕಳು ಅದನ್ನು ಸೀದಾ ಕಸದ ಬುಟ್ಟಿಗೆ ಎಸೆದಿದ್ದಾರೆ!

ಮಹಿಳೆಯಿಂದ ಮಕ್ಕಳ ಕೈಗೆ ಹೋಗಿದ್ದ ಚಿನ್ನ ಹೀಗೆ ಕಸದಬುಟ್ಟಿಗೆ ಸೇರಿತ್ತು. ಇದೇ ವೇಳೆ ಹಸಿದುಕೊಂಡು ಆಹಾರ ಹುಡುಕಲು ಬಂದ ಏನೂ ಅರಿಯದ ಇಲಿಯ ಕಣ್ಣಿಗೆ ಚಿನ್ನ ಕಾಣಿಸಿದೆ! ಅದನ್ನು ಕಚ್ಚಿಕೊಂಡು ಬಿಲ ಸೇರಿದೆ. ಅಷ್ಟಕ್ಕೂ ಇದರ ಮೌಲ್ಯ 5 ಲಕ್ಷ ರೂಪಾಯಿ ಆಗಿದೆ.

ಇದನ್ನೂ ಓದಿ: Viral Video: ಜಿಟಿಜಿಟಿ ಮಳೆಯಲಿ ಪುಟ್ಟ ಮಗುವಿನ ಆಟ, ನಿಮ್ಮ ಬಾಲ್ಯವನ್ನೂ ನೆನಪಿಸುವಂತಿದೆ ಈ ವೈರಲ್ ವಿಡಿಯೋ

ಚಿನ್ನ ಪತ್ತೆ ಹಚ್ಚಿದ್ದಾದರೂ ಹೇಗೆ?

ಇಲಿ ಕಚ್ಚಿಕೊಂಡುಹೋಗಿದ್ದ ಚಿನ್ನವನ್ನು ಪತ್ತೆ ಹಚ್ಚಿದ್ದು ಸಹ ಒಂದು ರೀತಿ ಕುತೂಹಲ ಕೆರಳಿಸುವಂತಹ ಸಂಗತಿ. ಅಷ್ಟಕ್ಕೂ ಪೊಲೀಸರು ಚಿನ್ನದ ಪತ್ತೆಗಾಗಿ ದೊಡ್ಡಮಟ್ಟದ ಕಾರ್ಯಾಚರಣೆ ಏನು ಕೈಗೊಂಡಿಲ್ಲವಾದರೂ ಸುಳಿವು ನೀಡಿದ್ದು ಮಾತ್ರ ಸಿಸಿ ಕ್ಯಾಮಾರ. ಇಲಿ ಚಿನ್ನವನ್ನು ಬಿಲಕ್ಕೆ ಕೊಂಡೊಯ್ಯುತ್ತಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ಮೂಲಕವೇ ಚಿನ್ನವನ್ನು ಪತ್ತೆ ಹಚ್ಚಲಾಗಿದೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:30 pm, Fri, 17 June 22