AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹುಲಿಗಳ ಮಧ್ಯೆ ನಾಯಿ ಜೀವಂತವಾಗಿರಲು ಸಾಧ್ಯವೇ? ಸಾಧ್ಯ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ!

ಹುಲಿಗಳೇ ತುಂಬಿರುವ ಆವರಣದಲ್ಲಿ ಬೇರೊಂದು ಪ್ರಾಣಿಗಳು ಜೀವಂತವಾಗಿರಲು ಸಾಧ್ಯವೇ? ಆದರೂ ಹುಲಿಗಳೊಂದಿಗೆ ನಾಯಿಯೊಂದು ಆರಾಮದಾಯಿಕವಾಗಿ ಬಾಲ ಅಲ್ಲಾಡಿಸುತ್ತಾ, ಬೊಗಳುತ್ತಾ ಇರುವ ಅಪರೂಪದ ವಿಡಿಯೋ ವೈರಲ್ ಆಗುತ್ತಿದೆ.

Viral Video: ಹುಲಿಗಳ ಮಧ್ಯೆ ನಾಯಿ ಜೀವಂತವಾಗಿರಲು ಸಾಧ್ಯವೇ? ಸಾಧ್ಯ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ!
ಹುಲಿಗಳ ಗುಂಪಿನಲ್ಲಿ ನಾಯಿಮರಿ
TV9 Web
| Updated By: Rakesh Nayak Manchi|

Updated on: Jun 17, 2022 | 1:56 PM

Share

ಇದು ಹುಲಿಗಳನ್ನು ಸಾಕುವ ಸ್ಥಳ, ಆರೇಳು ಹುಲಿಗಳು, ಇವುಗಳ ನಡುವೆ ಜೀವಂತವಾಗಿರುವ ಒಂದು ನಾಯಿ. ಅಚ್ಚರಿಯಾದರೂ ಇದು ಸತ್ಯ! ಹುಲಿಯ ಹತ್ತಿರ ನಿಂತ ಪ್ರಾಣಿಗಳು ಬದುಕಿ ಬಂದದ್ದು ಎಲ್ಲಾದರೂ ಉಂಟೆ? ತೀರ ಅಪರೂಪದ ದೃಶ್ಯಾವಳಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆರೇಳು ಹುಲಿಗಳ ಗುಂಪಿನ ನಡುವೆ ನಾಯಿಯೊಂದು ಆರಾಮವಾಗಿ, ಬಾಲ ಅಲ್ಲಾಡಿಸುತ್ತಾ ಖುಷಿ-ಖುಷಿಯಾಗಿ ಓಡಾಡುತ್ತಿರುವ ವಿಡಿಯೋ ಇದಾಗಿದೆ. ಈ ವಿಡಿಯೋ ನೋಡಿದರೆ ಹೀಗೂ ಉಂಟೆ ಎಂದು ಹೇಳದೆ ಇರಲಾಗದು.

ಇದನ್ನೂ ಓದಿ: Viral News: ತಾಲಿಬಾನ್ ಸರ್ಕಾರ ಬಂದಮೇಲೆ ರಸ್ತೆ ಬದಿ ಆಹಾರ ಮಾರುತ್ತಿದ್ದಾರೆ ಅಫ್ಘಾನಿಸ್ತಾನದ ಟಿವಿ ನಿರೂಪಕ

ವೈರಲ್ ವಿಡಿಯೋ(Viral Video)ದಲ್ಲಿ, ಗೋಲ್ಡನ್ ರಿಟ್ರೈವರ್ ಹುಲಿಗಳ ಗುಂಪಿನಲ್ಲಿ ಆಶ್ಚರ್ಯ ಮತ್ತು ಆತಂಕವನ್ನುಂಟು ಮಾಡುವ ರೀತಿಯಲ್ಲಿ ನಾಯಿಮರಿಯೊಂದು ಓಡಾಡುತ್ತ ಇರುವುದನ್ನು ನೋಡಬಹುದು. ಕೂದಲೆಳೆ ಅಂತರದಲ್ಲಿ ನಾಯಿಮರಿ ಹುಲಿಯೊಂದಿಗೆ ಇರುವುದನ್ನು ನೋಡಿದ ಕೂಡಲೇ ಹುಲಿಗಳು ಈಗಲೇ ನಾಯಿ ಮೇಲೆ ದಾಳಿ ಮಾಡಬಹುದು ಎಂದು ನಿರೀಕ್ಷಿಸಬಹುದು. ಆದರೆ ನಮ್ಮ ನಿರೀಕ್ಷೆಗಳು ಸುಳ್ಳು ಮಾಡಿವೆ ಈ ಹುಲಿಗಳು. ತನ್ನ ಹತ್ತಿರವೇ ನಾಯಿ ಬಾಲ ಅಲ್ಲಾಡಿಸುತ್ತಾ, ಬೊಗಳುತ್ತಾ ಇರುವಾಗಲೂ ಹುಲಿಗಳು ಅತ್ತಿಂದ ಇತ್ತ ಓಡಾಡುತ್ತವೆಯಷ್ಟೆ. ನಾಯಿಗೆ ಯಾವುದೇ ತೊಂದರೆ ನೀಡದೆ ಇರುವುದು ಅಚ್ಚರಿಗಳಲ್ಲೊಂದಾಗಿದೆ. ಸಾಕು ಪ್ರಾಣಿ ನಾಯಿ ಮತ್ತು ಕಾಡು ಪ್ರಾಣಿ ಎಂದೆನಿಸಿಕೊಳ್ಳುವ ಹುಲಿ ನಡುವೆ ಸ್ನೇಹ ಬೆಳೆದಂತಿದ್ದು ಬಟ್ಟಿಗೆ ಒಡಾಡುವ ಈ ವಿಡಿಯೋ ಒಗ್ಗಟ್ಟಿನ ಸಂದೇಶವನ್ನು ಸಾರುತ್ತಿದೆ.

View this post on Instagram

A post shared by Tiger (@tiger__bigfan)

ವಿಡಿಯೋವನ್ನು ಟೈಗರ್_ಬಿಗ್‌ಫಾನ್ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 52,000 ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ಗೊಂದಲಗೊಂಡಿದ್ದು, ಹುಲಿಗಳ ಆವರಣದಲ್ಲೇ ನಾಯಿ ಮರಿ ಕೂಡ ಬೆಳೆದಿರಬಹುದು ಎಂದು ಶಂಕಿಸಿದ್ದಾರೆ.

ಇದನ್ನೂ ಓದಿ: Viral Video: ಜಿಟಿಜಿಟಿ ಮಳೆಯಲಿ ಪುಟ್ಟ ಮಗುವಿನ ಆಟ, ನಿಮ್ಮ ಬಾಲ್ಯವನ್ನೂ ನೆನಪಿಸುವಂತಿದೆ ಈ ವೈರಲ್ ವಿಡಿಯೋ

ಅದೇ ಆವರಣದೊಳಗೆ ಸೆರೆಹಿಡಿಯಲಾದ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಗೋಲ್ಡನ್ ರಿಟ್ರೈವರ್ ನಾಯಿ ಕೆಲವು ಹುಲಿಗಳೊಂದಿಗೆ ಆವರಣದೊಳಗೆ ಕುಳಿತಿರುವುದು ಕಂಡುಬಂದಿದೆ. ಹುಲಿಗಳು ನಾಯಿಯ ಜೊತೆ ಬೆರೆಯುವುದು ಮತ್ತು ಅದರೊಂದಿಗೆ ಆಟವಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ