
ಮರಿಯಾನೆಗಳ (baby elephant) ಆಟ ತುಂಟಾಟಗಳನ್ನು ಕಣ್ತುಂಬಿಸಿಕೊಳ್ಳುವ ಖುಷಿಯೇ ಬೇರೆ. ಈ ಮರಿಯಾನೆಗಳ ಮುದ್ದು ಪೆದ್ದು ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತವೆ. ಇದೀಗ ಪುಟಾಣಿ ಆನೆಯ ಜತೆಗೆ ಯುವಕನೊಬ್ಬನ ತರಲೆಯ ವಿಡಿಯೋ ವೈರಲ್ ಆಗಿದೆ. ಈ ಯುವಕನ ತುಂಟಾಟಕ್ಕೆ ಮರಿಯಾನೆ ಭಯಗೊಂಡಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಹಸರ್ ಬಾ (Hsar Ba) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಕೇರ್ ಟೇಕರ್ ಮರಿಯಾನೆ ಜತೆಗೆ ತುಂಟಾಟ ಆಡಿದ್ದಾನೆ. ಹುಲ್ಲಿನ ಪೊದೆಯೊಳಗೆ ಅಡಗಿ ಕುಳಿತು ಈ ಪುಟಾಣಿ ಆನೆಯನ್ನು ಹೆದರಿಸಿದ್ದಾನೆ. ಈ ಯುವಕನ ತುಂಟಾಟಕ್ಕೆ ಬೆಚ್ಚಿ ಬಿದ್ದಿದ್ದು, ಹೆದರಿಕೊಂಡಿರುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ: ಮಲಗಿದ್ದ ಮಾಲೀಕನನ್ನು ಎಬ್ಬಿಸಲು ಪ್ರಯತ್ನಿಸಿದ ಮರಿಯಾನೆ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕ್ಯೂಟ್ ಎಂದರೆ, ಮತ್ತೊಬ್ಬರು, ಪಾಪ ಹೆದರಿ ಬಿಟ್ಟಿತು ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ಮತ್ತೆ ಮತ್ತೆ ನೋಡಬೇಕೇನಿಸುವ ದೃಶ್ಯ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ