ಕೃಷಿಮೇಳದ ಸೆಂಟರ್ ಆಫ್ ಅಟ್ರಾಕ್ಷನ್ 25 ಲೀಟರ್ ಹಾಲು ಕೊಡುವ ಆನೆಯಂಥಾ ಎಮ್ಮೆ

Edited By:

Updated on: Nov 18, 2026 | 10:15 PM

ಮೂರು ದಿನಗಳ ಕಾಲ ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳ ಇಂದಿಗೆ (ನವೆಂಬರ್ 18) ಅಂತ್ಯವಾಗಿದೆ. ಈ ಮೂರು ದಿನಗಳ ಕಾಲ ಕೃಷಿ ಮೇಳದಲ್ಲಿ ಎಲ್ಲರ ಗಮನಸೆಳೆದಿದ್ದು ಮಾತ್ರ ಗುಜರಾತ್‌ನ ಜಾಫ್ರಾಬಾದಿ ತಳಿಯ 1250 ಕೆ.ಜಿ ತೂಕದ 'ಪಂಚಕಲ್ಯಾಣಿ' ಎಂಬ ಎಮ್ಮೆ. ಹೌದು....ಬರೋಬ್ಬರಿ 1250 ಕೆ.ಜಿ. ತೂಕವಿರುವ ‘ಪಂಚ ಕಲ್ಯಾಣಿ’ ಎಮ್ಮೆ 11 ಅಡಿ ಉದ್ದವಿದ್ದು, ಐದೂಮುಕ್ಕಾಲು ಎಡಿ ಎತ್ತರವಿದ್ದು, ದಿನಕ್ಕೆ 25 ಲೀಟರ್‌ ಹಾಲು ನೀಡುವುದು ವಿಶೇಷವಾಗಿದೆ. 

ಬೆಂಗಳೂರು, (ನವೆಂಬರ್ 18): ಮೂರು ದಿನಗಳ ಕಾಲ ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳ ಇಂದಿಗೆ (ನವೆಂಬರ್ 18) ಅಂತ್ಯವಾಗಿದೆ. ಈ ಮೂರು ದಿನಗಳ ಕಾಲ ಕೃಷಿ ಮೇಳದಲ್ಲಿ ಎಲ್ಲರ ಗಮನಸೆಳೆದಿದ್ದು ಮಾತ್ರ ಗುಜರಾತ್‌ನ ಜಾಫ್ರಾಬಾದಿ ತಳಿಯ 1250 ಕೆ.ಜಿ ತೂಕದ ‘ಪಂಚಕಲ್ಯಾಣಿ’ ಎಂಬ ಎಮ್ಮೆ. ಹೌದು….ಬರೋಬ್ಬರಿ 1250 ಕೆ.ಜಿ. ತೂಕವಿರುವ ‘ಪಂಚ ಕಲ್ಯಾಣಿ’ ಎಮ್ಮೆ 11 ಅಡಿ ಉದ್ದವಿದ್ದು, ಐದೂಮುಕ್ಕಾಲು ಎಡಿ ಎತ್ತರವಿದ್ದು, ದಿನಕ್ಕೆ 25 ಲೀಟರ್‌ ಹಾಲು ನೀಡುವುದು ವಿಶೇಷವಾಗಿದೆ.  ನಾಲ್ಕು ಕಾಲು, ಬಾಯಿ, ಕಣ್ಣು, ಹಣೆ, ಬಾಲ ಮಾತ್ರ ಬಿಳಿ ಬಣ್ಣವಿದ್ದು ಉಳಿದಂತೆ ಕಪ್ಪು ಬಣ್ಣ ಹೊಂದಿದೆ. ಅದಕ್ಕಾಗಿಯೇ ಇದನ್ನು ‘ಪಂಚ ಕಲ್ಯಾಣಿ’ ಎಂದು ಕರೆಯಲಾಗುತ್ತದೆ. ಬೃಹತ್‌ ಗಾತ್ರದಿಂದಾಗಿ ಈ ಎಮ್ಮೆ ಕೃಷಿ ಮೇಳದಲ್ಲಿ ಸೆಂಟರ್ ಅಫ್ ಅಟ್ರಕ್ಷನ್ ಅಗಿದೆ. ಇನ್ನು ಇದರ ಹತ್ತು ಹಲವು ವಿಶೇಷತೆಗಳ ಬಗ್ಗೆ ಮಾಲೀಕ ಕೃಷ್ಣ ಮೂರ್ತಿ ಜೊತೆ ಬಗ್ಗೆ ನಮ್ಮ ಪ್ರತಿನಿಧಿ ಶಿವರಾಜ್ ಕುಮಾರ್ ನೆಡೆಸಿದ ಮಾತುಕತೆ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
Shivaraj