Modi Jacket: ಹುಬ್ಬಳ್ಳಿಯಲ್ಲಿ ದೇಶದ ಅತೀ ಉದ್ದದ ಮೋದಿ ಜಾಕೆಟ್ ಅನಾವರಣ, ಹೇಗಿದೆ ನೋಡಿ

| Updated By: ರಮೇಶ್ ಬಿ. ಜವಳಗೇರಾ

Updated on: Jan 12, 2023 | 7:15 PM

ಅಭಿಮಾನಿಯೊಬ್ಬ 3ಲಕ್ಷ ವೆಚ್ಚ ಖರ್ಚು ಮಾಡಿ ದೇಶದ ಅತೀ ಉದ್ದದ ಮೋದಿ ಜಾಕೆಟ್ ಅನಾವರಣ ಮಾಡಿದ್ದಾನೆ.

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಅದಕ್ಕೂ ಮೊದಲ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್​ ಶೋ ಮೂಲಕ ಕಾರ್ಯಕ್ರಮದ ವೇದಿಕೆ ಆಗಮಿಸಿದರು. ಈ ವೇಳೆ ಹುಬ್ಬಳ್ಳಿಯಲ್ಲಿ ದೇಶದ ಅತಿ ಉದ್ದದ ಮೋದಿ ಜಾಕೆಟ್ ಅನಾವರಣ ಮಾಡಲಾಯ್ತು.

ಗೋಕುಲ್ ರಸ್ತೆಯಲ್ಲಿ 60 ಅಡಿ ಉದ್ದ, 30 ಅಡಿ ಅಗಲವಿರುವ ಪ್ರಧಾನಿ ಮೋದಿ ಜಾಕೆಟ್ ನೇತು ಹಾಕಿದ್ದು, ಬೆಳಗಾವಿಯ ಎಸ್​.ಕೆ ಕಾಕಡೆ ಟೈಲರ್ ತಯಾರು ಮಾಡಿದ ಜಾಕೆಟ್. ಮೋದಿ ಅಭಿಮಾನಿ ಕಾಕಡೆ ಜಾಕೆಟ್​ಗಾಗಿ 3ಲಕ್ಷ ವೆಚ್ಚ ಮಾಡಿದ್ದಾರೆ.