ಬೆಂಗಳೂರು ಮೆಜೆಸ್ಟಿಕ್​ನಲ್ಲಿ ಹಾಡಿನ ಮೂಲಕ ಕೊರೊನಾ ಜಾಗೃತಿ ಮೂಡಿಸುತ್ತಿರುವ ಬಸ್ ಚಾಲಕ

Edited By:

Updated on: Jan 08, 2022 | 1:07 PM

ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಜವಬ್ದಾರಿ ಮೆರೆಯುತ್ತಿದ್ದಾರೆ. ಹೀಗಾಗಿ ಬೆಂಗಳೂರು ಮೆಜೆಸ್ಟಿಕ್​ನಲ್ಲಿ ಬಸ್ ಚಾಲಕರೊಬ್ಬರು ಹಾಡಿನ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಕೊರೊನಾ ಮೂರನೇ ಅಲೆ ನಿಯಂತ್ರಿಸಲು ಸರ್ಕಾರ ಕೆಲ ನಿಯಮಗಳನ್ನ ಜಾರಿಗೆ ತಂದಿದೆ. ನಿನ್ನೆ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಆದರೆ ರಾಜ್ಯದ ಹಲವೆಡೆ ಜನರು ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಜವಬ್ದಾರಿ ಮೆರೆಯುತ್ತಿದ್ದಾರೆ. ಹೀಗಾಗಿ ಬೆಂಗಳೂರು ಮೆಜೆಸ್ಟಿಕ್​ನಲ್ಲಿ ಬಸ್ ಚಾಲಕರೊಬ್ಬರು ಹಾಡಿನ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಚಾಲಕ ಕಮ್ ನಿರ್ವಾಹಕ ಮುನಿಕೃಷ್ಣ ಧರೆಗಿಳಿಯಿತೇ ಕಾಣದ ಕೊರೊನಾ ಅಂತ ಸಾಹಿತ್ಯ ಬರೆದು ಬಸ್ನಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸಿಪಾಯಿರಾಮು ಸಿನಿಮಾದ ಕಥೆ ಮುಗಿಯಿತೆ ಹಾಡಿಗೆ ಕೊರೊನಾ ಜಾಗೃತಿ ಸಾಹಿತ್ಯ ಬರೆದಿದ್ದಾರೆ.

ಇದನ್ನೂ ಓದಿ

ಮೂಡಲಪಾಳ್ಯದಲ್ಲಿ ಸಿಲಿಂಡರ್ ರೀಫಿಲ್ಲಿಂಗ್ ವೇಳೆ ಗ್ಯಾಸ್​ ಲೀಕ್​ ಸ್ಫೋಟ, ತಪ್ಪಿದ ಭಾರಿ ಅನಾಹುತ

Novak Djokovic: ವೀಸಾ ರದ್ದು: ಅಭಿಮಾನಿಗಳಿಗೆ ಧನ್ಯವಾದ ಹೇಳಿ ಮೌನ ಮುರಿದ ನೊವಾಕ್ ಜೊಕೋವಿಚ್