ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮಾಡಿದಕ್ಕೆ ಅಸಮಾಧಾನವನ್ನು ಸಂಸದ ರಮೇಶ್​​​​ ಜಿಗಜಿಣಗಿ ಬೇರೆ ರೀತಿ ಹೊರಹಾಕಿದರು!

ಅರುಣ್​ ಕುಮಾರ್​ ಬೆಳ್ಳಿ

Updated on: Nov 13, 2023 | 6:27 PM

ವಿಜಯೇಂದ್ರರನ್ನು ಅಯ್ಕೆ ಮಾಡಿದ್ದಕ್ಕೆ ತನಗೆ ಹೊಟ್ಟೆಯುರಿ ಏನೂ ಇಲ್ಲ ಎಂದು ಹೇಳುವ ಅವರು ದಲಿತರಿಗೆ ಆಗತ್ತಿರುವ ಅನ್ಯಾಯದ ಬಗ್ಗೆ ಹೇಳುತ್ತಾರೆ. ಕಳೆದ 75 ವರ್ಷಗಳಿಂದ ದಲಿತರು ಗೌಡರು, ಸವರ್ಣೀಯರ ಪರ ಕೈ ಎತ್ತುತ್ತಲೇ ಬಂದಿದ್ದಾರೆ, ಇದು ಕೇವಲ ವಿಧಾನ ಸಭೆಗೆ ಮಾತ್ರ ಸೀಮಿತವಾಗಿರದೆ ಈಗ ಸಂಸತ್ತಿಗೂ ವ್ಯಾಪಿಸಿದೆ, ದಲಿತರನ್ನು ಕೇಳೋರು ಯಾರೂ ಇಲ್ಲ ಅಂತ ಅವರು ಹೇಳುತ್ತಾರೆ

ವಿಜಯಪುರ: ಸಂಸದ ರಮೇಶ್ ಜಿಗಜಿಣಗಿ (MP Ramesh Jigajinagi) ಮಾಧ್ಯಮಗಳೊಂದಿಗೆ ಮಾತಾಡೋದು ಅಪರೂಪಕ್ಕೊಮ್ಮೆ. ಆದರೆ ಇವತ್ತು ತಮ್ಮ ನೋವು, ಹತಾಶೆ ಮತ್ತು ದಶಕಗಳಿಂದ ಮಡುಗಟ್ಟಿರಬಹುದಾದ ಯಾತನೆ ಮತ್ತು ಬೇಗುದಿಯನ್ನು ಹೊರಹಾಕಲೆಂದೇ ಪತ್ರಕರ್ತರೊಂದಿಗೆ ಮಾತಾಡಿದರು ಅನ್ನೋದು ಅವರ ಮಾತುಗಳಿಂದ ಗೊತ್ತಾಗುತ್ತದೆ. ಬಿವೈ ವಿಜಯೇಂದ್ರರನ್ನು (BY Vijayendra) ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಮಾಡಿದ್ದು ಜಿಗಜಿಣಗಿ ಅವರಲ್ಲಿ ತೀವ್ರ ಬೇಸರ ಮೂಡಿಸಿದೆ. ಪಕ್ಷದ ವರಿಷ್ಠರು ಬಹಳ ಯೋಚನೆ ಮಾಡಿಯೇ ಯಡಿಯೂರಪ್ಪನವರ (BS Yediyurappa) ಮಗನನ್ನು ಪಕ್ಷದ ಅಧ್ಯಕ್ಷ ಮಾಡಿರುತ್ತಾರೆ. ವಿಜಯೇಂದ್ರರನ್ನು ಅಯ್ಕೆ ಮಾಡಿದ್ದಕ್ಕೆ ತನಗೆ ಹೊಟ್ಟೆಯುರಿ ಏನೂ ಇಲ್ಲ ಎಂದು ಹೇಳುವ ಅವರು ದಲಿತರಿಗೆ ಆಗತ್ತಿರುವ ಅನ್ಯಾಯದ ಬಗ್ಗೆ ಹೇಳುತ್ತಾರೆ. ಕಳೆದ 75 ವರ್ಷಗಳಿಂದ ದಲಿತರು ಗೌಡರು, ಸವರ್ಣೀಯರ ಪರ ಕೈ ಎತ್ತುತ್ತಲೇ ಬಂದಿದ್ದಾರೆ, ಇದು ಕೇವಲ ವಿಧಾನ ಸಭೆಗೆ ಮಾತ್ರ ಸೀಮಿತವಾಗಿರದೆ ಈಗ ಸಂಸತ್ತಿಗೂ ವ್ಯಾಪಿಸಿದೆ, ದಲಿತರನ್ನು ಕೇಳೋರು ಯಾರೂ ಇಲ್ಲ ಅಂತ ಅವರು ಹೇಳುತ್ತಾರೆ. ಅವರ ಮಾತಿನ ತಾತ್ಪರ್ಯ ಸ್ಪಷ್ಟವಾಗಿದೆ-ತಮ್ಮನ್ನಲ್ಲದಿದ್ದರೂ ಬೇರೆ ಯಾವುದೇ ದಲಿತನೊಬ್ಬನನ್ನು ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಪರಿಗಣಿಸಬೇಕಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.