ಬಿಜೆಪಿಯಲ್ಲಿ ದಲಿತರು ರಾಜ್ಯ ಘಟಕದ ಅಧ್ಯಕ್ಷ ಆಗಬಾರದೇ? ರಮೇಶ್​​ ಜಿಗಜಿಣಗಿ ಪ್ರಶ್ನೆ

ರಾಜ್ಯಾಧ್ಯಕ್ಷ ಯಾರು ಆಗಬೇಕೆಂದು ಬಹಿರಂಗ ಚರ್ಚೆ ಸರಿಯಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ರಾಷ್ಟ್ರೀಯ ನಾಯಕರಿಂದಲೇ ಆಯ್ಕೆಯಾಗುತ್ತಾರೆ. ನಳಿನ್‌ ಕುಮಾರ್ ಕಟೀಲ್​ ಅವರ ಅವಧಿ ಮುಗಿದಿದೆ ಎಂದು ಗೊತ್ತಾಗಿದೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷನಾಗಬೇಕೆಂದು ಎಲ್ಲರಿಗೂ ಆಸೆ ಇರುತ್ತೆ. ನಾನು ಕೂಡ ಬಿಜೆಪಿಯ ಹಿರಿಯ ನಾಯಕ. ಪಕ್ಷ ಅವಕಾಶ ಕೊಟ್ಟರೆ ನಾನು ಕೂಡ ರಾಜ್ಯಾಧ್ಯಕ್ಷನಾಗುವೆ ಎಂದು ಸಂಸದ ರಮೇಶ್​​ ಜಿಗಜಿಣಗಿ ಹೇಳಿದ್ದಾರೆ.

ಬಿಜೆಪಿಯಲ್ಲಿ ದಲಿತರು ರಾಜ್ಯ ಘಟಕದ ಅಧ್ಯಕ್ಷ ಆಗಬಾರದೇ? ರಮೇಶ್​​ ಜಿಗಜಿಣಗಿ ಪ್ರಶ್ನೆ
ಸಂಸದ ರಮೇಶ್​​ ಜಿಗಜಿಣಗಿ
Follow us
ವಿವೇಕ ಬಿರಾದಾರ
|

Updated on: Jun 25, 2023 | 2:28 PM

ಬೆಳಗಾವಿ: ರಾಜ್ಯಾಧ್ಯಕ್ಷ ಯಾರು ಆಗಬೇಕೆಂದು ಬಹಿರಂಗ ಚರ್ಚೆ ಸರಿಯಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ರಾಷ್ಟ್ರೀಯ ನಾಯಕರಿಂದಲೇ ಆಯ್ಕೆಯಾಗುತ್ತಾರೆ. ನಳಿನ್‌ ಕುಮಾರ್ ಕಟೀಲ್​ (Nalin Kumar Kateel) ಅವರ ಅವಧಿ ಮುಗಿದಿದೆ ಎಂದು ಗೊತ್ತಾಗಿದೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷನಾಗಬೇಕೆಂದು ಎಲ್ಲರಿಗೂ ಆಸೆ ಇರುತ್ತೆ. ನಾನು ಕೂಡ ಬಿಜೆಪಿಯ (BJP) ಹಿರಿಯ ನಾಯಕ. ಪಕ್ಷ ಅವಕಾಶ ಕೊಟ್ಟರೆ ನಾನು ಕೂಡ ರಾಜ್ಯಾಧ್ಯಕ್ಷನಾಗುವೆ. ಬಿಜೆಪಿಯಲ್ಲಿ ದಲಿತರು ರಾಜ್ಯ ಘಟಕದ ಅಧ್ಯಕ್ಷ ಆಗಬಾರದೇ? ಎಂದು ಸಂಸದ ರಮೇಶ್​​ ಜಿಗಜಿಣಗಿ (Ramesh Jigajinagi) ಪ್ರಶ್ನಿಸಿದ್ದಾರೆ.

ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಕೇಳುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರ ಎಲ್ಲಿ ಕೇಳಬೇಕು ಎಂಬುದು ನನಗೆ ಗೊತ್ತಿದೆ ಅದನ್ನ ಬಹಿರಂಗವಾಗಿ ಹೇಳುವುದಿಲ್ಲ. ಚುನಾವಣೆಯಲ್ಲಿ ಸೋಲು, ಗೆಲವು ಸಹಜ ಯಾರು ನಿರಾಶೆ ಆಗಬಾರದು. ನಮ್ಮ ಮತಗಳು ನಮಗೆ ಬಿದ್ದಿವೆ ಯಾರು ಎದೆಗುಂದಬೇಡಿ. ಕಾರ್ಯಕರ್ತರ ಸುಸ್ತ ಆಗಿ ಕೂರಬೇಡಿ. ಮತ್ತೆ ಸೆಡ್ಡು ಹೊಡೆದು ಕೆಲಸ ಆರಂಭಿಸಬೇಕು ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

ಇದನ್ನೂ ಓದಿ: ಎರಡರಲ್ಲೂ ಸೋತು ನಿರುದ್ಯೋಗಿಯಾಗಿದ್ದೇನೆ ಎನ್ನುತ್ತಲ್ಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟ ಸೋಮಣ್ಣ

ಅಧಿಕಾರಕ್ಕೆ ಬಂದಾಗ ಕಾರ್ಯಕರ್ತರ ಕಡೆ ಗಮನ ಹರಿಸಬೇಕು. ಮಂತ್ರಿಗಳಿದ್ದವರು, ಅಧಿಕಾರದಲ್ಲಿದ್ದವರು ಕಾರ್ಯಕರ್ತರ ಕಡೆ ಗಮನ ಕೊಡಬೇಕು. ಯಾರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇದನ್ನು ಹೇಳಿಲ್ಲ. ಸಂಘಟನೆಯ ಬಗ್ಗೆ ಹೆಚ್ಚು ಗಮನಹಿರಸಬೇಕು. ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ ಅವರಿಗೆ ಟಾಂಗ್ ಕೊಟ್ಟರು.

ಅಕ್ಕಿ ನಿಮಗೆ ಕೊಡುವ ಯೋಗ್ಯತೆ ಇಲ್ಲಾ ಅಂದರೇನಾವಣೆ ಸುಳ್ಳು ಹೇಳಿ ಯಾಕೆ ವೋಟ್ ತೆಗೆದುಕೊಂಡರಿ? ಬಡವರ ಬಗ್ಗೆ ಬಹಳ ಮಾತಾಡುತ್ತೀರಿ ಈಗ ಅಕ್ಕಿ ಕೊಡಿ. ಬಡವರನ್ನು ಗುತ್ತಿಗೆ ಹಿಡಿದಿದ್ದೀರಾ ಇದೆಲ್ಲಾ ನಾಟಕ ಬಿಡಿ. ನಿಮ್ಮ ಸಹಾಯಕ್ಕೆ ಯಾರು ಬರಬೇಕು ನಿಮ್ಮ ನಾಯಕರು ಬರಬೇಕು. ನಿದ್ದೆಗಣ್ಣಲು ಅಕ್ಕಿ ಕೊಟ್ಟಿಲ್ಲಾ ಅಂತಾ ಬಡಬಡಿಸುತ್ತಿದ್ದೀರಿ. ಈ ಸರ್ಕಾರ ಬಹಳ ದಿನ ನಡೆಯುವುದಿಲ್ಲ. ಅವರ ಪಕ್ಷದವರೇ ಎಡಕ್ಕೆ ಬಲಕ್ಕೆ ನೋಡುತ್ತಿದ್ದಾರೆ. ಸುಳ್ಳು ಹೇಳಿ ವೋಟ್ ತಗೊಂಡಿರೀ ಬಹಳ ದಿನ ಉಳಿಯುವುದಿಲ್ಲ. ಸುಳ್ಳು ಹೇಳಿ ವೋಟ್ ತಗೊಂಡಿದ್ದಾರೆ ಇದೇ ನಾಟಕ ಲೋಕಸಭಾ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ಮಾಡಿದರು.

ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್