ಕರ್ನಾಟಕದಿಂದ ಶಬರಿಮಲೆಗೆ ಹೋಗುವ ಅಯ್ಯಪ್ಪಸ್ವಾಮಿ ಭಕ್ತರಿಗೆ ವಿಶೇಷ ಮನವಿ

Updated on: Nov 19, 2025 | 10:24 PM

ಶಬರಿಮಲೆಯಲ್ಲಿ ಈ ವರ್ಷದ ಮಂಡಲ ಪೂಜೆ, ಮಕರವಿಳಕ್ಕು ಉತ್ಸವ ಶುರುವಾಗಿದೆ. ಜ್ಯೋತಿ ಮಾಸಾಚರಣೆಗಾಗಿ ಗರ್ಭಗುಡಿ ಬಾಗಿಲು ತೆರೆದ ಎರಡೇ ದಿನಗಳಲ್ಲಿ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬಂದಿದ್ದು, ಅವ್ಯವಸ್ಥೆಯ ಆಗರವೇ ಸೃಷ್ಟಿಯಾಗಿದೆ. ಅತಿಯಾದ ಜನಸಂದಣಿಯಿಂದಾಗಿ ಮಹಿಳಾ ಮಾಲಾಧಾರಿಯೊಬ್ಬಳು ಮೃತಪಟ್ಟಿದ್ದಾಳೆ. ಕ್ಷೇತ್ರದಲ್ಲಿ ಭಾರೀ ಅವ್ಯವಸ್ಥೆ ಉಂಟಾಗಿರುವ ಆರೋಪ ಕೇಳಿ ಬಂದಿದ್ದು, ಕೇರಳ ಸರ್ಕಾರ ಮತ್ತು ಶಬರಿಮಲೆ ದೇವಸ್ಥಾನ ಆಡಳಿತ ಮಂಡಳಿಯನ್ನು ಕೇರಳ ಕೋರ್ಟ್​ ತರಾಟೆ ತೆಗೆದುಕೊಂಡಿದೆ. ಇನ್ನು ಶಬರಿಮಲೆಗೆ ತೆರಳಲು ಪ್ಲ್ಯಾನ್ ಮಾಡಿಕೊಂಡಿರುವ ಅಯ್ಯಪ್ಪ ಭಕ್ತರಿಗೆಗೊಂದು ವಿಶೇಷ ಮನವಿ ಮಾಡಲಾಗಿದೆ.

ಬೆಂಗಳೂರು, (ನವೆಂಬರ್ 19): ಶಬರಿಮಲೆಯಲ್ಲಿ ಈ ವರ್ಷದ ಮಂಡಲ ಪೂಜೆ, ಮಕರವಿಳಕ್ಕು ಉತ್ಸವ ಶುರುವಾಗಿದೆ. ಜ್ಯೋತಿ ಮಾಸಾಚರಣೆಗಾಗಿ ಗರ್ಭಗುಡಿ ಬಾಗಿಲು ತೆರೆದ ಎರಡೇ ದಿನಗಳಲ್ಲಿ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬಂದಿದ್ದು, ಅವ್ಯವಸ್ಥೆಯ ಆಗರವೇ ಸೃಷ್ಟಿಯಾಗಿದೆ. ಅತಿಯಾದ ಜನಸಂದಣಿಯಿಂದಾಗಿ ಮಹಿಳಾ ಮಾಲಾಧಾರಿಯೊಬ್ಬಳು ಮೃತಪಟ್ಟಿದ್ದಾಳೆ. ಕ್ಷೇತ್ರದಲ್ಲಿ ಭಾರೀ ಅವ್ಯವಸ್ಥೆ ಉಂಟಾಗಿರುವ ಆರೋಪ ಕೇಳಿ ಬಂದಿದ್ದು, ಕೇರಳ ಸರ್ಕಾರ ಮತ್ತು ಶಬರಿಮಲೆ ದೇವಸ್ಥಾನ ಆಡಳಿತ ಮಂಡಳಿಯನ್ನು ಕೇರಳ ಕೋರ್ಟ್​ ತರಾಟೆ ತೆಗೆದುಕೊಂಡಿದೆ. ಇನ್ನು ಶಬರಿಮಲೆಗೆ ತೆರಳಲು ಪ್ಲ್ಯಾನ್ ಮಾಡಿಕೊಂಡಿರುವ ಅಯ್ಯಪ್ಪ ಭಕ್ತರಿಗೆಗೊಂದು ವಿಶೇಷ ಮನವಿ ಮಾಡಲಾಗಿದೆ.