ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಕಾಲಿಗೆ ಬಿದ್ದರೂ ಬಿಡದೆ ಸಿಬ್ಬಂದಿಗೆ ಥಳಿತ

Edited By: Rakesh Nayak Manchi

Updated on: Dec 09, 2023 | 7:23 PM

ಗರುಡ ಮಾಲ್​ನ ಐನಾಕ್ಸ್ ಮಾಲ್​ನಲ್ಲಿ ಕುಡಿದ ಮತ್ತಲ್ಲಿ ಮಹಿಳೆಯೊಬ್ಬಳು ರಾದ್ಧಾಂತ ನಡೆಸಿದ ಆರೋಪ ಕೇಳಿಬಂದಿದೆ. ಸೆಕ್ಯೂರಿಟಿ ಹಾಗೂ ಮಾಲ್ ಸಿಬ್ಬಂದಿ ಜೊತೆಗೆ ಜಗಳವಾಡಿ ಥಳಿಸಿದ್ದಾಳೆ. ಸದ್ಯ, ಗಲಾಟೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರು, ಡಿ.9: ಕುಡಿದ ಮತ್ತಲ್ಲಿ ಮಹಿಳೆಯೊಬ್ಬಳು ರಾದ್ಧಾಂತ ನಡೆಸಿದ ಘಟನೆ ನಗರದ (Bengaluru) ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಗರುಡಾ ಮಾಲ್​ನ ಐನಾಕ್ಸ್ ಮಾಲ್​ನಲ್ಲಿ ನಡೆದಿದೆ. ಕಳೆದ ರಾತ್ರಿ 2 ಗಂಟೆಗೆ ನಡೆದಿದೆ ಎನ್ನಲಾದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗುತ್ತಿದೆ. ಸೆಕ್ಯೂರಿಟಿ ಹಾಗೂ ಮಾಲ್ ಸಿಬ್ಬಂದಿ ಜೊತೆ ಜಗಳ ಮಾಡಿಕೊಂಡಿದ್ದಲ್ಲದೆ, ಕಾಲಿಗೆ ಬಿದ್ದು ಬೇಡಿದರೂ ಬಿಡದೆ ಸಿಬ್ಬಂದಿಯನ್ನು ಥಳಿಸಿದ್ದಾಳೆ.

ನೆನ್ನೆ ರಾತ್ರಿ ಹಿಂದಿ ಸಿನಿಮಾ ಅನಿಮಲ್ ವೀಕ್ಷಿಸಲು ಪಿವಿಆರ್​ಗೆ ಬಂದಿದ್ದ ಮಹಿಳೆಯ ಪರ್ಸ್ ಕಾಣೆಯಾಗಿತ್ತು. ಈ ಪರ್ಸ್ ಹೌಸ್ ಕೀಪಿಂಗ್ ಸಿಬ್ಬಂದಿಗೆ ಸಿಕ್ಕಿದ್ದು, ಸೆಕ್ಯೂರಿಟಿಗೆ ಒಪ್ಪಿಸಿದ್ದಾರೆ. ಸೆಕ್ಯೂರಿಟಿ ಪ್ರೊಸಿಜರ್ ಮುಗಿಸಿ ನಿಮ್ಮ ಪರ್ಸ್ ಐಡೆಂಟಿಟಿ ಮಾಡಿ ಎಂದು ಮಹಿಳೆಗೆ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ಕೋಪಗೊಂಡ ಮಹಿಳೆ ಪಿವಿಆರ್ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾಳೆ.

ಇದನ್ನೂ ಓದಿ: ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿ ಎಡವಟ್ಟು; ವಿದ್ಯಾರ್ಥಿ ಮೇಲೆ ರಾಡ್​ನಿಂದ ಹಲ್ಲೆ

ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಲ್ಲದೇ ಅಶೋಕನಗರ ಠಾಣೆಗೆ ದೂರು ನೀಡಿದ್ದು, ನನಗೆ ನಿಂದಿಸಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಗರುಡಾಮಾಲ್ ಪಿವಿಆರ್ ಸಿಬ್ಬಂದಿ ಕೂಡ ಮಹಿಳೆ ವಿರುದ್ದ ದೂರು ದಾಖಲಿಸಿದ್ದಾರೆ. ಸಿಸಿಟಿವಿ ಮುಂದೆಯೇ ಮಹಿಳೆ ಪರ್ಸ್ ತೋರಿಸಿದ್ದೇವೆ. ಸೆಕ್ಯೂರಿಟಿ ಪ್ರೊಸಿಜರ್ ಮುಗಿಸಿ ಪರ್ಸ್ ತೆಗೆದುಕೊಳ್ಳಿ ಎಂದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಹಿಂದೆ ಕೂಡ ಮಹಿಳೆ ಇದೇ ರೀತಿ ಮಾಲ್​ನಲ್ಲಿ ಹಲವು ಬಾರಿ ಕೃತ್ಯ ಎಸಗಿದ್ದಾರೆಂದು ಆರೋಪಿಸಿದ್ದಾರೆ.

ಅಲ್ಲದೇ ಹಿಗ್ಗಾಮುಗ್ಗಾ ಬೈದು ದೈಹಿಕವಾಗಿ ನಿಂದಿಸಿದ್ದಾರೆಂದು ಸಿಸಿಟಿವಿ ಫೂಟೇಜ್ ಸಮೇತ ಸಿಬ್ಬಂದಿ ದೂರು ನೀಡಿದ್ದಾರೆ. ಅಶೋಕನಗರ ಪೊಲೀಸರು ದೂರು ಪ್ರತಿದೂರು ದಾಖಲಿಸಿಕೊಂಡಿದ್ದು, ಮಹಿಳೆ ಹಾಗೂ ಪಿವಿಆರ್ ಸಿಬ್ಬಂದಿ ಎರಡು ಕಡೆಯ ಹೇಳಿಕೆ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Dec 09, 2023 06:41 PM
Loading...
Unable to load recommendations.
Follow Us
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More