ಟೊಮೆಟೊ ಬೆಳೆದು ಕೈ ಸುಟ್ಟುಕೊಂಡ ರೈತನಿಂದ ಪ್ರಧಾನಿ ಮೋದಿಗೆ ಪತ್ರ ಬರೆಯಲು ತಯಾರಿ
ಟೊಮೆಟೊ ಬೆಳೆದು ಕೈ ಸುಟ್ಟುಕೊಂಡ ರೈತನಿಂದ ಪ್ರಧಾನಿ ಮೋದಿಗೆ ಪತ್ರ ಬರೆಯಲು ತಯಾರಿ

ಟೊಮೆಟೊ ಬೆಳೆದು ಕೈ ಸುಟ್ಟುಕೊಂಡ ರೈತನಿಂದ ಪ್ರಧಾನಿ ಮೋದಿಗೆ ಪತ್ರ ಬರೆಯಲು ತಯಾರಿ

|

Updated on: Mar 22, 2021 | 5:59 PM

ಕೋಟೆನಾಡಿನ ಅನೇಕ ರೈತರು ಸಾಂಪ್ರದಾಯಿಕ ಬೆಳೆ ಬಿಟ್ಟು ಇತರೆ ಬೆಳೆಯತ್ತ ಚಿತ್ತ ಹರಿಸಿದ್ದಾರೆ. ಆ ಮೂಲಕ ಕೃಷಿಯಲ್ಲಿ ಖುಷಿ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ, ಬೆಲೆ ಕುಸಿತ ಎಂಬ ಭೂತ ಮಾತ್ರ ರೈತನಿಗೆ ಬೆನ್ನು ಬಿದ್ದ ಬೇತಾಳದಂತೆ ಕಾಡುತ್ತಿದೆ. ಅದ್ಯಾವ ಪರಿ ಅನ್ನೋದರ ಡಿಟೈಲ್‌ ಇಲ್ಲಿದೆ ನೋಡಿ...

A Farmer From Chitradurga Set To Write A Letter To Prime Minister Narendra Modi | ಟೊಮೆಟೊ ಬೆಳೆದು ಕೈ ಸುಟ್ಟುಕೊಂಡ ರೈತನಿಂದ ಪ್ರಧಾನಿ ಮೋದಿಗೆ ಪತ್ರ ಬರೆಯಲು ತಯಾರಿ

ಕೋಟೆನಾಡಿನ ಅನೇಕ ರೈತರು ಸಾಂಪ್ರದಾಯಿಕ ಬೆಳೆ ಬಿಟ್ಟು ಇತರೆ ಬೆಳೆಯತ್ತ ಚಿತ್ತ ಹರಿಸಿದ್ದಾರೆ. ಆ ಮೂಲಕ ಕೃಷಿಯಲ್ಲಿ ಖುಷಿ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ, ಬೆಲೆ ಕುಸಿತ ಎಂಬ ಭೂತ ಮಾತ್ರ ರೈತನಿಗೆ ಬೆನ್ನು ಬಿದ್ದ ಬೇತಾಳದಂತೆ ಕಾಡುತ್ತಿದೆ. ಅದ್ಯಾವ ಪರಿ ಅನ್ನೋದರ ಡಿಟೈಲ್‌ ಇಲ್ಲಿದೆ ನೋಡಿ…

ಟೊಮೆಟೊ ಬೆಳೆಗಾಗಿ ಹಗಲಿರುಳು ಶ್ರಮಿಸಿ ಉತ್ತಮ ಬೆಳೆ ತೆಗೆದ ರೈತ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಾಲು. ಖರ್ಚು ಮಾಡಿದಷ್ಟೂ ಹಣ ಕೈಸೇರದ್ದು ಕಂಡು ಚಿಂತೆಗೀಡಾದ ರೈತನ ಕುಟುಂಬ. ಇದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ಬಳಿ ಕಂಡು ಬಂದ ಪರಿಸ್ಥಿತಿ. ಹೌದು, ಈ ಗ್ರಾಮದ ರೈತ ಲಕ್ಷ್ಮಣ ತನಗಿರುವ ಏಳು ಎಕರೆ ಜಮೀನಿನಲ್ಲಿ ಈ ಭಾಗದ ಸಾಂಪ್ರದಾಯಿಕ ಬೆಳೆ ಬಿಟ್ಟು ವಿಭಿನ್ನ ಕೃಷಿ ಮಾಡಿ ಬದುಕು ಕಟ್ಟಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದ. ಎರಡು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆ ಬೆಳೆಯಲು ಸುಮಾರು ಎರಡು ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ.

ಉತ್ತಮ ಫಸಲು ಸಹ ಬಂದಿದ್ದು ರೈತನ ಮನದಲ್ಲಿ‌ ಆಶಾ ಗೋಪರವೇ ನಿರ್ಮಾಣ ಆಗಿತ್ತು. ಮೊನ್ನೆ 118 ಬಾಕ್ಸ್ ಟೊಮೆಟೊ ಕೋಲಾರದ ಕೃಷಿ ಮಾರುಕಟ್ಟೆಗೆ ಕೊಂಡಯ್ದರೆ ಬಾಕ್ಸ್ ಗೆ 45 ರೂ. ನಂತೆ ಕೊಂಡು ಕೊಂಡಿದ್ದಾರೆ. 118 ಬಾಕ್ಸ್ ಗೆ 5350 ರೂ. ಆಗಿದೆ. ಆದ್ರೆ, ಟೊಮೆಟೊ ಸಾಗಣೆ ಖರ್ಚು ಮಾತ್ರ 6092ರೂ. ಆಗಿದೆ. ಟೆಂಪೋ, ಟ್ಯಾಕ್ಸ್ ಮತ್ತು ಕೂಲಿ‌ ಸೇರಿ ಹಣ ಲೆಕ್ಕ ಹಾಕಿದಾಗ 742 ರೂ. ರೈತನೇ ಟೊಮೆಟೊ ಖರೀಧಿದಾರರಿಗೆ ನೀಡುವಂತಾಗಿದೆ. ಕೊನೆಗೆ ರೈತನಿಗೆ ಖಾಲಿಯಾಗಿಸೋದು ಬೇಡ ಅಂತ ಗೌರವ ಧನದ ರೂಪದಲ್ಲಿ 10 ರೂ. ನೀಡಲಾಗಿದೆ. ಹೀಗಾಗಿ, ರೈತ ಕಂಗಾಲಾಗಿದ್ದು ಪ್ರಧಾನಿ ನರೇಂದ್ರ ಮೋದಿಗೆ ದಾಖಲೆ ಸಮೇತ ಈ ಬಗ್ಗೆ ಪತ್ರ ಬರೆದು ರೈತರ ಸಂಕಷ್ಟ ಮುಂದಿಡಲು ನಿರ್ಧರಿಸಿದ್ದಾನೆ.