ಚಿಕ್ಕಮಗಳೂರಿನ ಅಬ್ಬಿಕಲ್ಲು ಗ್ರಾಮದಲ್ಲಿ ನಿರ್ಮಾಣ ಹಂತದ ಸೇತುವೆ ಮೇಲೆ ಮೂರ್ಖ ಯುವಕರ ಹುಚ್ಚು ಸಾಹಸ!

|

Updated on: Aug 01, 2023 | 1:10 PM

ಕಬ್ಬಿಣದ ಕಂಬಿಗಳ ಮೇಲೆ ಬ್ಯಾಲೆನ್ಸ್ ಮಾಡಿಕೊಂಡು ನಡೆಯುತ್ತಾ ಸೇತುವೆ ನಡುಭಾಗಕ್ಕೆ ಹೋಗಿ ಫೋಟೋ ತೆಗೆದುಕೊಳ್ಳುವ ಹುಚ್ಚು ಮತ್ತು ಆಪಾಯಕಾರಿ ಸಾಹಸವನ್ನು ಯುವಕರು ಮಾಡುತ್ತಿದ್ದಾರೆ.

ಚಿಕ್ಕಮಗಳೂರು: ನಿದ್ರೆ ಮಾಡುತ್ತಿರುವವರನ್ನು ಎಬ್ಬಿಸುವುದು ಸುಲಭ, ಆದರೆ ನಿದ್ರೆ ಮಾಡುವಂತೆ ನಟಿಸುವವರನ್ನು ಎಬ್ಬಿಸಲಾದೀತೇ? ನೈಸರ್ಗಿಕ ಮತ್ತು ಜೈವಿಕವಾಗಿ ತಲೆಯಲ್ಲಿ ಬುದ್ಧಿ ಇಟ್ಟುಕೊಂಡು ಧರೆಗೆ ಬಂದಿದ್ದರೂ ಮೂರ್ಖರಂತೆ ವರ್ತಿಸುವವರಿಗೆ ಏನು ಹೇಳಲಾದೀತು? ಭದ್ರಾವತಿ ಯುವಕ ಶರತ್ ಕುಮಾರ್ (Sharat Kumar) ದಾರುಣ ಸಾವನ್ನು ಕನ್ನಡಿಗರೆಲ್ಲ ನೋಡಿದ್ದಾರೆ. ಆದರೆ ಕೆಲವರಿನ್ನೂ ಎಚ್ಚೆತ್ತುಕೊಳ್ಳಲೊಲ್ಲರು. ಯಾಕೆ ಇದನ್ನು ಹೇಳಬೇಕಾಗಿದೆ ಅಂತ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಅತ್ತಿಕುಡಿಗೆ ಗ್ರಾಮ ಪಂಚಾಯಿತಿಯಲ್ಲಿ ಬರುವ ಅಬ್ಬಿಕಲ್ಲು (Abbikallu) ಹೆಸರಿನ ಗ್ರಾಮದಲ್ಲಿ ಸೇತುವೆಯೊಂದು ನಿರ್ಮಾಣ ಹಂತದಲ್ಲಿದೆ (under construction bridge). ಸೇತುವೆ ಕೆಳಗೆ ಪ್ರಪಾತ, ಜಾರಿಬಿದ್ದರೆ ದೇಹದ ಮೂಳೆಗಳು ಪುಡಿಯಾಗೋದು ನಿಶ್ಚಿತ. ಕಬ್ಬಿಣ ಸರಳು ಮತ್ತು ಕಂಬಿಗಳ ಮೇಲೆ ಬ್ಯಾಲೆನ್ಸ್ ಮಾಡಿಕೊಂಡು ನಡೆಯುತ್ತಾ ಸೇತುವೆ ನಡುಭಾಗಕ್ಕೆ ಹೋಗಿ ಫೋಟೋ ತೆಗೆದುಕೊಳ್ಳುವ ಹುಚ್ಚು ಮತ್ತು ಆಪಾಯಕಾರಿ ಸಾಹಸವನ್ನು ಯುವಕರು ಮಾಡುತ್ತಿದ್ದಾರೆ. ಅನಾಹುತ ಸಂಭವಿಸುವ ಮೊದಲು ಯುವಕರಿಗೆ ಬುದ್ಧಿ ಬಂದರೆ ಸಾಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ