ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಗಣೇಶ್ ಕೊಟ್ಟ ಭರವಸೆಗಳಿವು
Film Chamber Of Commerce: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಕೆಲವೇ ದಿನಗಳಲ್ಲಿ ನಡೆಯಲಿದೆ. ಇಂದು ಹಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿ ಎ ಗಣೇಶ್ ಸಹ ಒಬ್ಬರು. ತಾವು ಆಯ್ಕೆ ಆದರೆ ಏನೇನು ಕೆಲಸ ಮಾಡಲಿದ್ದೇನೆ ಎಂಬುದನ್ನು ಗಣೇಶ್ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber Of Commerce) ಚುನಾವಣೆ ಘೋಷಣೆ ಆಗಿದ್ದು, ಇಂದು ಹಲವು ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಧ್ಯಕ್ಷರಾಗಿರುವ ಬಾಮಾ ಹರೀಶ್ ಅಧ್ಯಕ್ಷ ಸ್ಥಾನದ ಅವಧಿ ಈಗಾಗಲೇ ಮುಗಿದಿದ್ದು, ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಎನ್ಎಂ ಸುರೇಶ್ ಈ ಬಾರಿ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದು ಅವರಿಗೆ ಸಾರಾ ಗೋವಿಂದು ಬೆಂಬಲ ನೀಡಿದ್ದಾರೆ. ನಿರ್ಮಾಪಕ ಎ ಗಣೇಶ್ ಸಹ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ತಾವು ಆಯ್ಕೆ ಆದರೆ ಏನೇನು ಕೆಲಸ ಮಾಡಲಿದ್ದೇನೆಂಬ ಪಟ್ಟಿ ನೀಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us