AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಭಾ.ಮಾ.ಹರೀಶ್ ಆಯ್ಕೆ

ಚುನಾವಣಾ ಕಾವು ಮುಂಜಾನೆಯಿಂದಲೇ ಜೋರಾಗಿತ್ತು. ಭಾ.ಮಾ. ಹರೀಶ್ ಹಾಗೂ ಸಾರಾ ಗೋವಿಂದು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದರು. ಮಧ್ಯಾಹ್ನ 2 ಗಂಟೆಯಿಂದ ಆರಂಭವಾಗಿದ್ದ ಮತದಾನ ಪ್ರಕ್ರಿಯೆ ಸಂಜೆ ಪೂರ್ಣಗೊಂಡಿತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಭಾ.ಮಾ.ಹರೀಶ್ ಆಯ್ಕೆ
ಭಾಮಾ ಹರೀಶ್
TV9 Web
| Edited By: |

Updated on:May 29, 2022 | 9:38 AM

Share

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Karnataka Film Chamber Of Commerce) ಚುನಾವಣೆ ಮೇ 28ರಂದು ನಡೆಯಿತು. ಇದರ ಫಲಿತಾಂಶ ಹೊರಬಿದ್ದಿದೆ. ಭಾ.ಮ. ಹರೀಶ್​ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಅವರಿಗೆ ಚಿತ್ರರಂಗದ ಕಡೆಯಿಂದ ಶುಭಾಶಯಗಳು ಬರುತ್ತಿವೆ. ನಿರ್ಮಾಪಕ ಸಾ.ರಾ. ಗೋವಿಂದು ಅವರು (Sa Ra Govindu) ಈಗಾಗಲೇ ಮೂರು ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಬಾರಿ ಅವರು ಮತ್ತೆ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆಯಲ್ಲಿ ನಿಂತಿದ್ದರು. ಅವರಿಗೆ ಎದುರಾಳಿಯಾಗಿ ಭಾ.ಮ. ಹರೀಶ್​ ಅವರು (Bha Ma Harish) ಚುನಾವಣೆಯ ಕಣದಲ್ಲಿ ಇದ್ದರು. ಅಂತಿಮವಾಗಿ ಗೆಲುವು ಭಾ.ಮ. ಹರೀಶ್​ ಪಾಲಾಗಿದೆ. ಸಾ.ರಾ. ಗೋವಿಂದು ಅವರಿಗೆ 371  ಮತ ಹಾಗೂ ಭಾ.ಮ. ಹರೀಶ್ ಅವರಿಗೆ 781 ಮತಗಳು ಬಿದ್ದಿವೆ. ಈ ಮೂಲಕ 410 ವೋಟ್​ಗಳ ಅಂತರದಿಂದ ಹರೀಶ್ ಗೆಲುವು ಸಾಧಿಸಿದ್ದಾರೆ. ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾಗಿ ಜೈ ಜಗದೀಶ್ ಹಾಗೂ ಖಜಾಂಚಿಯಾಗಿ ಟಿ.ಪಿ.ಸಿದ್ದರಾಜು ಆಯ್ಕೆ ಆಗಿದ್ದಾರೆ.

ನಿರ್ಮಾಪಕರ ವಲಯದಿಂದ 910 ವೋಟ್ ಚಲಾವಣೆ ಆಗಿತ್ತು. ವಿತರಕರಿಂದ 200ರ ಆಸುಪಾಸಿನಲ್ಲಿ  ವೋಟ್​ಗಳು ಚಲಾವಣೆಗೊಂಡವು. ಪೇಪರ್ ಹರಿಯದೇ ಮತ ಏಣಿಕೆ ಮಾಡಲಾಗಿದೆ. 8 ಆಫೀಸರ್​​ಗಳು ಮತ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಚುನಾವಣಾ ಕಾವು ಮುಂಜಾನೆಯಿಂದಲೇ ಜೋರಾಗಿತ್ತು. ಭಾ.ಮಾ. ಹರೀಶ್ ಹಾಗೂ ಸಾ.ರಾ. ಗೋವಿಂದು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದರು. ಮೇ 28ರ ಮಧ್ಯಾಹ್ನ 2 ಗಂಟೆಯಿಂದ ಆರಂಭವಾಗಿದ್ದ ಮತದಾನ ಪ್ರಕ್ರಿಯೆ ಸಂಜೆ ಪೂರ್ಣಗೊಂಡಿತು. ರಾತ್ರಿ 7 ಗಂಟೆಯಿಂದ ಮತಗಳ ಎಣಿಕೆ ಕಾರ್ಯ ಆರಂಭ ಆಯಿತು.

ಇದನ್ನೂ ಓದಿ
Image
ಫಿಲ್ಮ್​ ಚೇಂಬರ್​ ಚುನಾವಣೆಯಲ್ಲಿ ಗೆಲುವಿಗಾಗಿ ದೇವರ ಮೊರೆ ಹೋದ ಭಾ.ಮ. ಹರೀಶ್​; ಇಲ್ಲಿದೆ ವಿಡಿಯೋ
Image
ಇಂದು ಫಿಲ್ಮ್​ ಚೇಂಬರ್ ಚುನಾವಣೆ; ಸಾ.ರಾ.ಗೋವಿಂದು, ಬಾ.ಮಾ.ಹರೀಶ್ ಮಧ್ಯೆ ಪ್ರಬಲ ಪೈಪೋಟಿ
Image
ಫಿಲ್ಮ್​ ಚೇಂಬರ್​ನಲ್ಲಿ ಚುನಾವಣೆ ಗಲಾಟೆ; ಭಾಮಾ ‌ಹರೀಶ್ ಹಾಗು ಸುರೇಶ್ ನಡುವೆ ಮಾತಿನ ಚಕಮಕಿ
Image
ನಿಧನರಾದ ಮೇಲೂ ಸಂಚಾರಿ ವಿಜಯ್​ಗೆ ಅಗೌರವ; ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಎಡವಟ್ಟು

ಇದನ್ನೂ ಓದಿ: ಫಿಲ್ಮ್​ ಚೇಂಬರ್​ ಚುನಾವಣೆಯಲ್ಲಿ ಗೆಲುವಿಗಾಗಿ ದೇವರ ಮೊರೆ ಹೋದ ಭಾ.ಮ. ಹರೀಶ್​; ಇಲ್ಲಿದೆ ವಿಡಿಯೋ

ಫಿಲ್ಮ್ ಚೇಂಬರ್ ಚುನಾವಣೆಗೆ ಮತ ಚಲಾಯಿಸಲು ಸ್ಯಾಂಡಲ್​​ವುಡ್​ನ ಅನೇಕರು ಆಗಮಿಸಿದ್ದರು. ರಾಘವೇಂದ್ರ ರಾಜ್​ಕುಮಾರ್, ನಟಿ ಲೀಲಾವತಿ, ವಿನೋದ್ ರಾಜ್, ನಿರ್ಮಾಪಕ ಮುನಿರತ್ನ, ರಾಕ್ ಲೈನ್ ವೆಂಕಟೇಶ್, ನಟಿ ಶೃತಿ, ದಿನಕರ್ ತೂಗುದೀಪ, ನಟಿ ಜಯಮಾಲಾ, ವಿಜಯ್ ರಾಘವೇಂದ್ರ, ಸೃಜನ್ ಲೋಕೇಶ್, ಓಂ ಸಾಯಿ ಪ್ರಕಾಶ್ ಮೊದಲಾದವರು ಮತ ಚಲಾಯಿಸಿದ್ದರು.

‘ನಮ್ಮ ಮೇಲೆ ನಂಬಿಕೆ ಇಟ್ಟು ಜಯ ತಂದುಕೊಟ್ಟ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರಿಗೆ ಧನ್ಯವಾದ. ಮುಂದಿನ ದಿನಗಳಲ್ಲಿ ನಮ್ಮ ಬಣದಿಂದ ಒಳ್ಳೆಯ ಕೆಲಸ ಮಾಡುತ್ತೇವೆ. ಈ  ಮೂಲಕ  ಸದಸ್ಯರ ಸಮಸ್ಯೆಗಳನ್ನ ಬಗೆಹರಿಸುತ್ತೇವೆ’ ಎಂದು ಭಾ.ಮಾ. ಹರೀಶ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:28 am, Sun, 29 May 22

Follow Us
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ