ಫಿಲ್ಮ್ ಚೇಂಬರ್ನಲ್ಲಿ ಚುನಾವಣೆ ಗಲಾಟೆ; ಭಾಮಾ ಹರೀಶ್ ಹಾಗು ಸುರೇಶ್ ನಡುವೆ ಮಾತಿನ ಚಕಮಕಿ
‘ಅಧ್ಯಕ್ಷರ ಚುನಾವಣೆ ನಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಹೋರಾತ್ರಿ ಧರಣಿ ಮಾಡುತ್ತೇವೆ’ ಎಂದು ಮಾಜಿ ಕಾರ್ಯದರ್ಶಿ ಭಾ.ಮಾ. ಹರೀಶ್ ಹೇಳಿದ್ದಾರೆ.
ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ (Kannada Film Chamber of Commerce) ಕಳೆದ 3 ವರ್ಷಗಳಿಂದ ಅಧ್ಯಕ್ಷರ ಆಯ್ಕೆಯ ಚುನಾವಣೆ ನಡೆಸಿಲ್ಲ. ಹೀಗಾಗಿ ಕೆಲ ನಿರ್ಮಾಪಕರು ಹಾಗು ಫಿಲ್ಮ್ ಚೇಂಬರ್ ಸದಸ್ಯರ ನಡುವೆ ಇಂದು ಮಾತಿನ ಚಕಮಕಿ ನಡೆದಿದೆ. ಎನ್.ಎಂ. ಸುರೇಶ್ ಅವರು (NM Suresh) ಮಾತನಾಡುತ್ತಿದ್ದರು. ಈ ವೇಳೆ, ಭಾ.ಮಾ. ಹರೀಶ್ ಹಾಗೂ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಏಕವಚನ ಪ್ರಯೋಗ ಮಾಡಿ ಇಬ್ಬರೂ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ ಎಂದು 30ಕ್ಕೂ ಹೆಚ್ಚು ನಿರ್ಮಾಪಕರು ಆಗ್ರಹಿಸಿದ್ದಾರೆ. ಈ ಮನವಿಗೆ ಸ್ಪಂದಿಸಿಲ್ಲ ಎಂದು ಕೆಲ ನಿರ್ಮಾಪಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಅಧ್ಯಕ್ಷರ ಚುನಾವಣೆ ನಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಹೋರಾತ್ರಿ ಧರಣಿ ಮಾಡುತ್ತೇವೆ’ ಎಂದು ಮಾಜಿ ಕಾರ್ಯದರ್ಶಿ ಭಾ.ಮಾ. ಹರೀಶ್ ಹೇಳಿದ್ದಾರೆ.
ಇದನ್ನೂ ಓದಿ: 27 ಸಾವಿರ ರೂಪಾಯಿ ಬೆಲೆಯ ಚಪ್ಪಲಿ ಧರಿಸಿ ಸಿನಿಮಾ ಪ್ರಚಾರಕ್ಕೆ ಬಂದ ಪೂಜಾ ಹೆಗ್ಡೆ; ಫೋಟೋ ವೈರಲ್
Pooja Hegde: ಕಿಲ್ಲಿಂಗ್ ಲುಕ್ನಲ್ಲಿ ಪೂಜಾ ಹೆಗ್ಡೆ; ಇಲ್ಲಿವೆ ಮಸ್ತ್ ಫೋಟೋಸ್
Published On - 2:00 pm, Tue, 15 March 22