ನಾವೆಲ್ಲ ಮೊದಲಿನ ಹಾಗೆಯೇ ಪ್ರೀತಿ-ವಿಶ್ವಾಸದಿಂದ ಒಟ್ಟಾಗಿ ಜೀವಿಸೋಣ ಎಂದರು ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್

ನಾವೆಲ್ಲ ಮೊದಲಿನ ಹಾಗೆಯೇ ಪ್ರೀತಿ-ವಿಶ್ವಾಸದಿಂದ ಒಟ್ಟಾಗಿ ಜೀವಿಸೋಣ ಎಂದರು ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 15, 2022 | 5:00 PM

ಮೊದಲು ಅಣ್ಣ ತಂಗಿಯರಂತೆ ಇದ್ದ ನಾವು ಮುಂದೆಯೂ ಹಾಗೆಯೇ ಇರೋಣ. ನನ್ನ ಹಿಂದೂ ಸಹಪಾಠಿಗಳೆಲ್ಲ ನನ್ನ ಸಹೋದರು. ಗದ್ದಲ ಗಲಾಟೆ ನಮಗೆ ಬೇಡ, ಪ್ರೀತಿ-ವಿಶ್ವಾಸ ಮತ್ತು ಶಾಂತಿಯಿಂದ ನೆಮ್ಮದಿಯಾಗಿ ಜೀವಿಸೋಣ ಎಂದು ಮುಸ್ಕಾನ್ ಹೇಳಿದರು.

ಹಿಜಾಬ್ ವಿವಾದದ (hijab row) ಬಗ್ಗೆ ಹೈಕೋರ್ಟ್ ತೀರ್ಪು ನೀಡಿಯಾಗಿದೆ. ನ್ಯಾಯಾಲಯದ ತೀರ್ಪಿನ ಬಗ್ಗೆ ಮತ್ತೊಮ್ಮೆ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ನಿಮಗೆ ಮಂಡ್ಯದ (Mandya) ಹುಡುಗಿ ಮುಸ್ಕಾನ್ (Muskan) ನೆನಪಿದ್ದಾರೆ ತಾನೆ? ಮಂಡ್ಯದ ಡಿಗ್ರಿ ಕಾಲೇಜೊಂದರಲ್ಲಿ ಬಿ. ಕಾಮ್ ಓದುತ್ತಿರುವ ವಿದ್ಯಾರ್ಥಿನಿ ಮುಸ್ಕಾನ್, ಹಿಜಾಬ್ ಪ್ರಕರಣ ವಿವಾದ ಉತ್ತುಂಗದಲ್ಲಿದ್ದಾಗ ಬುರ್ಖಾ ಮತ್ತು ಹಿಜಾಬ್ ಧರಿಸಿ ಕಾಲೇಜು ಆವರಣ ಪ್ರವೇಶಿಸಿದ ಬಳಿಕ ಕೆಲ ಹಿಂದೂ ಪುರುಷ ವಿದ್ಯಾರ್ಥಿಗಳು ಅವರನ್ನು ಹಿಂಬಾಲಿಸಿ ಘೋಷಣೆಗಳನ್ನು ಕೂಗುತ್ತಾ ಪೀಡಿಸಿದ್ದರು. ಅವರೊಂದಿಗಿದ್ದ ಬೇರೆ ವಿದ್ಯಾರ್ಥಿನಿಯರು ಹೆದರಿ ಬೇರೆ ಕಡೆ ಓಡಿದರೂ ಮುಸ್ಕಾನ್ ಮಾತ್ರ ಒಂದಿಷ್ಟೂ ಧೃತಿಗೆಡದೆ ಕಾಲೇಜಿನೊಳಗೆ ಹೋಗಿ ಅಲ್ಲಾಹ್ ಹು ಅಕ್ಬರ್ ಅಂತ ಜೋರಾಗಿ ಕೂಗಿದ್ದರು. ಅದಾದ ಮೇಲೆ ಕಾಲೇಜಿನ ಸಿಬ್ಬಂದಿ ಮುಸ್ಕಾನ್ ನೆರವಿಗೆ ಧಾವಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿತ್ತು.

ಮಂಗಳವಾರ ಹೈಕೋರ್ಟ್ ತೀರ್ಪು ಹೊರಬೀಳುವ ಮುನ್ನ ಮಾಧ್ಯಮದವರು ಮುಸ್ಕಾನ್ ರನ್ನು ಮಾತಾಡಿಸಿ ಕೋರ್ಟ್ ನಿಂದ ಎಂಥ ತೀರ್ಪು ನಿರೀಕ್ಷೆ ಮಾಡುತ್ತಿರುವಿರಿ ಎಂದು ಕೇಳಿದರು. ಕೇವಲ 20 ರ ತರುಣಿಯಾಗಿರುವ ಮುಸ್ಕಾನ್ ಒಂದು ಪ್ರಭುದ್ಧ ಉತ್ತರ ನೀಡುವ ಮೂಲಕ ಗಮನ ಸೆಳೆಯುತ್ತಾರೆ.

ನಮಗೆ ಭಾರತದ ಸಂವಿಧಾನದ ಮೇಲೆ ವಿಶ್ವಾಸವಿದೆ ಮತ್ತು ನಮ್ಮ ದೇವರ ಮೇಲೆ ನಂಬಿಕೆ ಇದೆ. ತೀರ್ಪು ಏನೇ ಅಗಿರಲಿ, ನಾವೆಲ್ಲ ಶಾಂತಿಯಿಂದ ಇರಬೇಕು ಮತ್ತು ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕು. ನಮ್ಮ ನಡುವೆ ಮೊದಲಿದ್ದ ಪ್ರೀತಿ ವಿಶ್ವಾಸಗಳನ್ನು ಇನ್ನು ಮುಂದೆಯೂ ಕಾಯ್ದುಕೊಳ್ಳಬೇಕಿದೆ. ಮೊದಲು ಅಣ್ಣ ತಂಗಿಯರಂತೆ ಇದ್ದ ನಾವು ಮುಂದೆಯೂ ಹಾಗೆಯೇ ಇರೋಣ. ನನ್ನ ಹಿಂದೂ ಸಹಪಾಠಿಗಳೆಲ್ಲ ನನ್ನ ಸಹೋದರು. ಗದ್ದಲ ಗಲಾಟೆ ನಮಗೆ ಬೇಡ, ಪ್ರೀತಿ-ವಿಶ್ವಾಸ ಮತ್ತು ಶಾಂತಿಯಿಂದ ನೆಮ್ಮದಿಯಾಗಿ ಜೀವಿಸೋಣ ಎಂದು ಮುಸ್ಕಾನ್ ಹೇಳಿದರು.

ಇದನ್ನೂ ಓದಿ:  ಮುಸ್ಕಾನ್​ಗೆ ಸನ್ಮಾನ ಮಾಡಲು ಮುಂದಾದ ಕಾಂಗ್ರೆಸ್ ಅಲ್ಪ ಸಂಖ್ಯಾತ ನಾಯಕರು; ಪಕ್ಷದಲ್ಲೇ ವಿರೋಧ- ಕಾರಣವೇನು?