Martin: ಕಾಶ್ಮೀರದಲ್ಲಿ ‘ಮಾರ್ಟಿನ್’ ಭರ್ಜರಿ ಶೂಟಿಂಗ್; ವೈರಲ್ ಆಯ್ತು ಧ್ರುವ ಸರ್ಜಾ ಫೋಟೋಗಳು
Dhruva Sarja | Kashmir: ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ಎಪಿ ಅರ್ಜುನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಪ್ರಸ್ತುತ ಕಾಶ್ಮೀರದಲ್ಲಿ ಚಿತ್ರೀಕರಣವಾಗುತ್ತಿದೆ. ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದ್ದು, ಚಿತ್ರತಂಡದ ಫೋಟೋಗಳು ವೈರಲ್ ಆಗಿವೆ.
ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ (Dhruva Sarja) ‘ಮಾರ್ಟಿನ್’ (Martin) ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಎ.ಪಿ. ಅರ್ಜುನ್ (AP Arjun) ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಚಿತ್ರೀಕರಣ ಸದ್ಯ ಕಾಶ್ಮೀರದಲ್ಲಿ ನಡೆಯುತ್ತಿದೆ. ಐಸ್ ವಾರ್ ಸಾಹಸ ದೃಶ್ಯಗಳ ಶೂಟಿಂಗ್ನಲ್ಲಿ ಚಿತ್ರತಂಡ ನಿರತವಾಗಿದೆ. ಇದರೊಂದಿಗೆ ರೋಮಾಂಚನಕಾರಿ ಸ್ಕೇಟಿಂಗ್ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈಗಾಗಲೇ ಸಖತ್ ಸದ್ದು ಮಾಡುತ್ತಿರುವ ‘ಮಾರ್ಟಿನ್’ ಚಿತ್ರದ ಕಾಶ್ಮೀರ್ ಡೈರೀಸ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.
ಕನ್ನಡ, ತಮಿಳು, ತೆಲುಗು ಸೇರಿ ಐದು ಭಾಷೆಗಳಲ್ಲಿ ಮಾರ್ಟಿನ್ ರಿಲೀಸ್ ಆಗುತ್ತಿದೆ. ಆಕ್ಷನ್, ಥ್ರಿಲ್ಲರ್ ಮಾದರಿಯ ಸಿನಿಮಾ ಇದಾಗಿದೆ. ಈ ಬಾರಿ ಹೊಸ ಮಾದರಿಯ ಮೇಕಿಂಗ್ ಅನ್ನು ನಿರ್ದೇಶಕರು ಟ್ರೈ ಮಾಡುತ್ತಿದ್ದಾರೆ. ಚಿತ್ರದ ಕುರಿತ ಹೊಸ ಅಪ್ಡೇಟ್ ಫ್ಯಾನ್ಸ್ ಕಾತರದಿಂದ ಕಾದಿದ್ದಾರೆ.
ಇದನ್ನೂ ಓದಿ:
Alia Bhatt: 29ನೇ ವಸಂತಕ್ಕೆ ಕಾಲಿಟ್ಟ ಆಲಿಯಾ; ಮದುವೆ ಬಗ್ಗೆ ಕೇಳಿಬಂತು ಹೊಸ ಸುದ್ದಿ!
‘ನಾನು ದಿ ಕಾಶ್ಮೀರ್ ಫೈಲ್ಸ್ ವಿರೋಧಿಯಲ್ಲ, ಅಪಾರ್ಥ ಮಾಡಿಕೊಳ್ಳಬೇಡಿ’; ಕನ್ನಡ ನಿರ್ದೇಶಕನ ಸ್ಪಷ್ಟನೆ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

