Chetan: ಪ್ರಾಣ ಬೆದರಿಕೆ, ಅಭದ್ರತೆ ಇರುವ ಕಾರಣ ಗನ್​ಮ್ಯಾನ್​ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ ಚೇತನ್ ಅಹಿಂಸಾ

Chetan: ಪ್ರಾಣ ಬೆದರಿಕೆ, ಅಭದ್ರತೆ ಇರುವ ಕಾರಣ ಗನ್​ಮ್ಯಾನ್​ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ ಚೇತನ್ ಅಹಿಂಸಾ

TV9 Web
| Updated By: shivaprasad.hs

Updated on: Mar 15, 2022 | 10:56 AM

Chetan Ahimsa: ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ತಮಗೆ ಗನ್​ಮ್ಯಾನ್ ನೀಡುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಲ್ಲಿ ಮನವಿ ಮಾಡಿದ್ದಾರೆ. ಈ ಹಿಂದೆ ಅವರಿಗೆ ನೀಡಿದ್ದ ಗನ್​ಮ್ಯಾನ್ ವಾಪಸ್ ಪಡೆಯಲಾಗಿತ್ತು.

ಬೆಂಗಳೂರು: ಪ್ರಾಣ ಬೆದರಿಕೆ, ಅಭದ್ರತೆ ಇರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಗನ್‌ಮ್ಯಾನ್ ನೀಡಲು ಗೃಹ ಸಚಿವ ಆರಗ ಜ್ಞಾನೇಂದ್ರಗೆ (Araga Jnanendra) ನಟ ಚೇತನ್ ಅಹಿಂಸಾ (Chetan Ahimsa) ಮನವಿ ಮಾಡಿದ್ದಾರೆ. ನಂತರ ಮಾತನಾಡಿದ ಚೇತನ್, ‘‘ಗೌರಿ ಲಂಕೇಶ್ ಹತ್ಯೆಯಾದ ಬಳಿಕ ನನಗೆ ನಾಲ್ಕು ವರ್ಷದಿಂದ ಗನ್ ಮ್ಯಾನ್ ಕೊಟ್ಟಿದ್ದರು. ಆದರೆ ಮೊನ್ನೆ ಜೈಲಿಗೆ ಹೋದ ಬಳಿಕ ವಾಪಸ್ ಪಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಬರುತ್ತಲೇ ಇದೆ. ಕೋಮುವಾದದ ಪರ ಮಾತನಾಡುವ ಜನಪ್ರತಿನಿಧಿಗಳಿಗೆ ಗನ್ ಮ್ಯಾನ್ ಪ್ರೊಟೆಕ್ಷನ್ ಕೊಡುತ್ತಾರೆ. ಆದರೆ ಸತ್ಯ ವಾಸ್ತವ ಹೇಳುವ ನಮಗೆ ಗನ್ ಮ್ಯಾನ್ ಪ್ರೊಟೆಕ್ಷನ್ ಇಲ್ಲ. ಹೀಗಾಗಿ ಗೃಹ ಸಚಿವರಿಗೆ ಮನವಿ ಮಾಡಿಕೊಂಡಿದ್ದೇನೆ’’ ಎಂದಿದ್ದಾರೆ ಚೇತನ್.

ಬೆದರಿಕೆ ಯಾರಿಂದ ಬರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಇಂಥದ್ದೇ ಮೂಲದಿಂದ ಎನ್ನಲಾಗುವುದಿಲ್ಲ. ಸಾಮಾಜಿಕ ಜಾಲತಾಣಗಳಿಂದ ಸೇರಿದಂತೆ ಹಲವೆಡೆಯಿಂದ ಬರುತ್ತದೆ. ಇದರ ಒಂದು ಪಟ್ಟಿಯನ್ನು ನೀಡಲಾಗಿದೆ’’ ಎಂದಿದ್ದಾರೆ ಚೇತನ್.

ಗಡಿಪಾರಿನ ವಿಚಾರದ ಬಗ್ಗೆ ಮಾತನಾಡಿದ ಚೇತನ್, ‘‘ಇದು ಅತಿರೇಕದ ವಿಚಾರ. ಇದರಲ್ಲಿ ಸತ್ಯವಿಲ್ಲ. ನನಗಂತೂ ಯಾವುದೇ ಅಧಿಕೃತ ಮಾಹಿತಿ ಇಲ್ಲ’’ ಎಂದಿದ್ದಾರೆ.

ಇದನ್ನೂ ಓದಿ:

Samantha: ‘ಜನರು ನನ್ನ ಹಳೆಯ ಚಿತ್ರಗಳನ್ನು ಮರೆತೇಬಿಟ್ಟಿದ್ದಾರೆ’; ‘ಊ ಅಂಟಾವಾ’ ಯಶಸ್ಸಿನ ಬಗ್ಗೆ ಸಮಂತಾ ಮಾತು

Martin: ಕಾಶ್ಮೀರದಲ್ಲಿ ‘ಮಾರ್ಟಿನ್’ ಭರ್ಜರಿ ಶೂಟಿಂಗ್; ವೈರಲ್ ಆಯ್ತು ಧ್ರುವ ಸರ್ಜಾ ಫೋಟೋಗಳು