Girl student takes on the government: ಗ್ಯಾರಂಟಿಗಳನ್ನು ಈಡೇರಿಸಲಾಗದಿದ್ದರೆ ನೀಡೋದಾದರೂ ಯಾಕೆ, ಸರ್ಕಾರವನ್ನು ಪ್ರಶ್ನಿಸಿದ ಬಾಗಲಕೋಟೆ ವಿದ್ಯಾರ್ಥಿನಿ

ಅರುಣ್​ ಕುಮಾರ್​ ಬೆಳ್ಳಿ

Updated on: May 31, 2023 | 5:42 PM

ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸದಿದ್ದರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಮುಗ್ಗುರಿಸುವುದು ಗ್ಯಾರಂಟಿ ಎಂದು ಜ್ಯೋತಿ ಹೇಳುತ್ತಾಳೆ.

ಬಾಗಲಕೋಟೆ: ಶಾಲಾ ಕಾಲೇಜುಗಳು ಪುನರಾರಂಭಗೊಂಡಿವೆ ಮತ್ತು ವಿದ್ಯಾರ್ಥಿನಿಯರು ಗೊಂದಲದಲ್ಲಿದ್ದಾರೆ. ಸರ್ಕಾರ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ (free bus pass) ಭರವಸೆ ನೀಡಿದೆ. ಆದರೆ ಆ ಗ್ಯಾರಂಟಿ (guarantee) ಜಾರಿಗೊಳ್ಳಲು ವಿಳಂಬವಾಗುತ್ತಿದೆ. ಸರ್ಕಾರದ ಭರವಸೆಯನ್ನು ನೆಚ್ಚಿಕೊಂಡು ಕೂರುವ ಬದಲು ತಮ್ಮ ಬಸ್ ಪಾಸ್ ಗಳನ್ನು ನವೀಕರಿಸಿಕೊಳ್ಳುವುದೇ ಬೆಟರ್ ಅಂದುಕೊಂಡಿರುನ ನಗರದ ವಿದ್ಯಾರ್ಥಿನಿಯರು ನಗರದ ಬಸ್ ನಿಲ್ದಾಣದಲ್ಲಿ ಸರತಿ ಸಾಲಲ್ಲಿ ನಿಂತಿದ್ದಾರೆ. ಏತನ್ಮಧ್ಯೆ, ಜ್ಯೋತಿ ಬಸನಗೌಡ್ (Jyoti Basangooud) ಹೆಸರಿನ ವಿದ್ಯಾರ್ಥಿನಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಆಶ್ವಾಸಗಳನ್ನು ಈಡೇರಿಸಲು ಸಾಧ್ಯವಾಗದು ಅಂತಾದರೆ ಕೊಡೋದಾದರೂ ಯಾಕೆ, ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸದಿದ್ದರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಮುಗ್ಗುರಿಸುವುದು ಗ್ಯಾರಂಟಿ ಎಂದು ಜ್ಯೋತಿ ಹೇಳುತ್ತಾಳೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.