ರಾಮನಗರ ರೇಲ್ವೆ ಸ್ಟೇಶನ್ ಬಳಿಯ ಅಂಡರ್ಪಾಸ್ನಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಸಂಪೂರ್ಣವಾಗಿ ಮುಳುಗಿತು!
ಅದೃಷ್ಟವಶಾತ್ ಬಸ್ಸಲ್ಲಿದ್ದ ಪ್ರಯಾಣಿಕರು, ಚಾಲಕ ಮತ್ತು ನಿರ್ವಾಹಕ ಎಲ್ಲರೂ ಸುರಕ್ಷಿತವಾಗಿದ್ದಾರೆ. ಕಳೆದ ರಾತ್ರಿ ರಾಮನಗರ ಪಟ್ಟಣ ಮತ್ತು ಸುತ್ತಮುತ್ತಲ ಭಾಗಗಳಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ.
ಮmಅಮರಾಮನಗರ: ಇಲ್ಲಿ ಕಾಣುತ್ತಿರುವ ರೇಲ್ವೇ ಅಂಡರ್ಪಾಸ್ನಲ್ಲಿ (railway underpass) ನಿಂತಿರುವ ನೀರಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (KSRTC) ಸೇರಿದ ಒಂದು ಬಸ್ಸಿದೆ ಅದನ್ನು ಹುಡುಕಬಲ್ಲಿರಾ? ನಾವು ತಮಾಷೆ ಮಾಡುತ್ತಿಲ್ಲ ಮಾರಾಯ್ರೇ. ಬಸ್ ಇರೋದು ನಿಜ, ಆದರೆ ಅದು ಸಂಪೂರ್ಣವಾಗಿ ಮುಳುಗಿದೆ (submerged). ಅದೃಷ್ಟವಶಾತ್ ಬಸ್ಸಲ್ಲಿದ್ದ ಪ್ರಯಾಣಿಕರು, ಚಾಲಕ ಮತ್ತು ನಿರ್ವಾಹಕ ಎಲ್ಲರೂ ಸುರಕ್ಷಿತವಾಗಿದ್ದಾರೆ. ಕಳೆದ ರಾತ್ರಿ ರಾಮನಗರ ಪಟ್ಟಣ ಮತ್ತು ಸುತ್ತಮುತ್ತಲ ಭಾಗಗಳಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ.