Udupi News: ಸೆಲ್ಫೀ ಗೀಳಿಗಾಗಿ ಸಮುದ್ರಕ್ಕಳಿಯದಂತೆ ಪ್ರವಾಸಿಗರನ್ನು ಎಚ್ಚರಿಸುತ್ತಾ ಸಲಹೆ ನೀಡಿದ ಉಡುಪಿಯ ಒಬ್ಬ ಪೊಲೀಸ್ ಇನ್ಸ್​ಪೆಕ್ಟರ್

|

Updated on: Jul 25, 2023 | 12:55 PM

ಸಾಮಾನ್ಯವಾಗಿ ಜನ ಇಂಥ ಸೂಚನಾ ಫಲಕಗಳನ್ನು ಕಡೆಗಣಿಸುತ್ತಾರೆ, ಈ ಎಚ್ಚರಿಕೆ ತಮಗಲ್ಲ ಬೇರೆ ಗ್ರಹದವರಿಗೆ ಅಂತ ಭಾವಿಸುತ್ತಾರೆ!

ಉಡುಪಿ: ಸೆಲ್ಫೀ ಹುಚ್ಚಾಟಗಳ ಬಗ್ಗೆ ನಾವು ವರದಿ ಮಾಡುತ್ತಲೇ ಇದ್ದೇವೆ. ಜಲಪಾತಗಳ ಬಳಿ ಉಕ್ಕಿ ಹರಿಯುತ್ತಿರುವ ನದಿಗಳ ಸೇತುವೆಗಳ ಮೇಲೆ, ಸಮುದ್ರ ತೀರದಲ್ಲಿ-ಹೀಗೆ ಮಳೆಗಾಲದಲ್ಲಿ ಅಪಾಯಕಾರಿಯಾಗಿರುವ ಸ್ಥಳಗಳಲ್ಲಿ (dangerous places) ಜನ ತಮ್ಮ ಜೀವಗಳನ್ನು ಪಣಕ್ಕಿಟ್ಟು ಸೆಲ್ಫೀ (selfie) ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಉಡುಪಿ ಸಮುದ್ರ ತೀರದಲ್ಲಿ ಕೆಲ ಪ್ರವಾಸಿಗರು ಸೆಲ್ಫೀ ಹುಚ್ಚಾಟಕ್ಕಿಳಿದಿದ್ದನ್ನು ಗಮನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಹರೀಶ್ ಆರ್ ನಾಯ್ಕ್ (Harish R Naik) ಹುಚ್ಚು ಸಾಹಸಗಳನ್ನು ಮಾಡದಂತೆ ಎಚ್ಚರಿಸಿದ್ದಾರೆ. ಈ ತೀರದಲ್ಲಿ ಇತ್ತೀಚಿಗೆ ಯುವಕನೊಬ್ಬ ಸೆಲ್ಫೀ ತೆಗೆದುಕೊಳ್ಳುವ ಭರದಲ್ಲಿ ಸಮುದ್ರ ಪಾಲಾಗಿದ್ದನ್ನು ಅವರು ಪ್ರವಾಸಕ್ಕೆ ಬಂದವರಿಗೆ ತಿಳಿಸುತ್ತಾರೆ. ತೀರದಲ್ಲಿ ಹಾಕಿರುವ ಎಚ್ಚರಿಕೆಯ ಬೋರ್ಡ್ ಅನ್ನು ಗೌರವಿಸುವಂತೆಯೂ ಅವರು ತಿಳಿ ಹೇಳುತ್ತಾರೆ. ಸಾಮಾನ್ಯವಾಗಿ ಜನ ಇಂಥ ಸೂಚನಾ ಫಲಕಗಳನ್ನು ಕಡೆಗಣಿಸುತ್ತಾರೆ, ಈ ಎಚ್ಚರಿಕೆ ತಮಗಲ್ಲ ಬೇರೆ ಗ್ರಹದವರಿಗೆ ಅಂತ ಭಾವಿಸುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on