ಚಾಮರಾಜನಗರದ ಈ ವ್ಯಕ್ತಿಯಲ್ಲಿ ಪತ್ನಿಯ ಶವಸಂಸ್ಕಾರಕ್ಕೂ ಹಣವಿರಲಿಲ್ಲ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 07, 2022 | 1:10 PM

ಆದರೆ ರಸ್ತೆಗಳ ಮೇಲೆ ಬಿದ್ದಿರುವ ಪ್ಲಾಸ್ಟಿಕ್ ವಸ್ತುಗಳು ಹಾಗೂ ಚೀಲಗಳನ್ನು ಅಯ್ದು ಬದುಕು ನಡೆಸುವ ರವಿ ಕಡುಬಡವ, ಶವಸಂಸ್ಕಾರಕ್ಕೂ ಅವನಲ್ಲಿ ದುಡ್ಡಿಲ್ಲ.

ಚಾಮರಾಜನಗರ (Chamarajanagar): ಜಿಲ್ಲೆಯ ಯಳಂದೂರಿನ ಕಂದಹಳ್ಳಿಯಲ್ಲಿ ಒಂದು ಮನಕಲುಕುವ ದೃಶ್ಯ ಜರುಗಿದೆ. ತಲೆಮೇಲೆ ಕ್ಯಾಪ್ ಧರಿಸಿರುವ ವ್ಯಕ್ತಿಯ ಹೆಸರು ರವಿ (Ravi) ಮತ್ತು ಅವನ ಪತ್ನಿ ಅನಾರೋಗ್ಯದಿಂದ ತೀರಿಕೊಂಡಿದ್ದಾಳೆ. ಆದರೆ ರಸ್ತೆಗಳ ಮೇಲೆ ಬಿದ್ದಿರುವ ಪ್ಲಾಸ್ಟಿಕ್ ವಸ್ತುಗಳು ಹಾಗೂ ಚೀಲಗಳನ್ನು ಅಯ್ದು ಬದುಕು ನಡೆಸುವ ರವಿ ಕಡುಬಡವ, ಶವಸಂಸ್ಕಾರಕ್ಕೂ (funeral) ಅವನಲ್ಲಿ ದುಡ್ಡಿಲ್ಲ. ಹಾಗಾಗಿ ಶವವನ್ನು ಒಂದು ಪ್ಲಾಸ್ಟಿಕ್ ಚಿಲದಲ್ಲಿ ಇಟ್ಟುಕೊಂಡು ಊರಿನ ರುದ್ರಭೂಮಿಗೆ ಒಯ್ಯುವಾಗ ಪೊಲೀಸರಿಗೆ ಮತ್ತು ಇತರ ಕೆಲ ಇಲಾಖೆಗಳ ಅಧಿಕಾರಿಗಳಿಗೆ ಗೊತ್ತಾಗಿ ಗೌರವಯುತವಾಗಿ ಮೃತಮಹಿಳೆಯ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ನೆರವಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ