ಕೆಟ್ಟು ನಿಂತಿದ್ದ ಲಾರಿಯೊಂದಕ್ಕೆ ಢಿಕ್ಕಿ ಹೊಡೆದ ಸುಟ್ಟು ಮತ್ತೊಂದು ಟ್ರಕ್ ಬೆಂಕಿಹೊತ್ತಿಕೊಂಡು ಭಸ್ಮವಾಗಿದ್ದು ತುಮಕೂರು ಬಳಿ
ಒಂದು ಮೊಬೈಲ್ ವಿಡಿಯೋನಲ್ಲಿ ಜ್ವಾಲೆಗಳಿಂದಾವೃತ ಲಾರಿಯನ್ನು ನೋಡಬಹುದು. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ತುಮಕೂರು ಬಳಿ ಬಟವಾಡಿ ಎಂಬ ಸ್ಥಳವಿದೆ ಮತ್ತು ಅಲ್ಲಿ ಈ ಉಕ್ಕಿನ ಲೋಡ್ ಹೊತ್ತ ಟ್ರಕ್ಕೊಂದು (steel laden truck) ಕೆಟ್ಟು ನಿಂತಿದೆ. ಕಳೆದ ರಾತ್ರಿ ಪುಣೆ (Pune) ನಗರದಿಂದ ಬೆಂಗಳೂರಿಗೆ (Bengaluru) ಬರುತ್ತಿದ್ದ ಮೈದಾಹಿಟ್ಟಿನ ಮೂಟೆಗಳನ್ನು ಲೋಡ್ ಹೊತ್ತ ಲಾರಿಯೊಂದು ಕೆಟ್ಟು ನಿಂತಿದ್ದ ಟ್ರಕ್ಕಿಗೆ ಜೋರಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸ ಎಷ್ಟಿತ್ತೆಂದರೆ ಉಕ್ಕಿನ ಲೋಡ್ ಹೊಂದಿದ್ದ ಲಾರಿಯ ಮುಂಭಾಗ ಪೂರ್ತಿಯಾಗಿ ಜಜ್ಜಿಹೋಗಿದ್ದರೆ ಮೈದಾ ಹಿಟ್ಟು ಹೊತ್ತ ಲಾರಿ ಹೊತ್ತಿ ಉರಿದು ಹೆಚ್ಚು ಕಡಿಮೆ ಭಸ್ಮವಾಗಿದೆ. ಒಂದು ಮೊಬೈಲ್ ವಿಡಿಯೋನಲ್ಲಿ ಜ್ವಾಲೆಗಳಿಂದಾವೃತ ಲಾರಿಯನ್ನು ನೋಡಬಹುದು. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.