ಮೈಸೂರು: ವಸತಿ ನಿಲಯದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಸಿದ್ದರಾಮಯ್ಯ ಜೊತೆ ಗಹನ ಚರ್ಚೆ ನಡೆಸಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 29, 2022 | 4:23 PM

ಸಮಾರಂಭದಲ್ಲಿ ಅತಿಥಿಯೊಬ್ಬರು ಮಾತಾಡುತ್ತಿದ್ದಾಗ ಒಬ್ಬ ಮಹಿಳೆ ವಿರೋಧ ಪಕ್ಷದ ನಾಯಕರೊಂದಿಗೆ ಗಹನವಾದ ಚರ್ಚೆಯಲ್ಲಿ ತೊಡಗಿದ್ದು ಎಲ್ಲರ ಗಮನ ಸೆಳೆಯಿತು.

ಮೈಸೂರು: ಕಾಗಿನೆಲೆ ಗುರುಪೀಠದ (Kaginele Gurupeetha) ವಸತಿ ನಿಲಯ ನಿರ್ಮಾಣ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಅವರ ಪುತ್ರ ಹಾಗೂ ಶಾಸಕ ಡಾ ಯತೀಂದ್ರ (Dr Yatindra) ಭಾಗಿಯಾಗಿದ್ದರು. ಸಮಾರಂಭದಲ್ಲಿ ಅತಿಥಿಯೊಬ್ಬರು ಮಾತಾಡುತ್ತಿದ್ದಾಗ ಒಬ್ಬ ಮಹಿಳೆ ವಿರೋಧ ಪಕ್ಷದ ನಾಯಕರೊಂದಿಗೆ ಗಹನವಾದ ಚರ್ಚೆಯಲ್ಲಿ ತೊಡಗಿದ್ದು ಎಲ್ಲರ ಗಮನ ಸೆಳೆಯಿತು. ಮೊನ್ನೆ ಬಾಗಲಕೋಟೆಯಲ್ಲೂ ವಿಜಯ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ್ ಸಹ ಸಿದ್ದರಾಮಯ್ಯನವರ ಜೊತೆ ಬಹಳ ಹೊತ್ತಿನವರೆಗೆ ಹೀಗೆಯೇ ಮಾತಾಡಿದ್ದರು.