Karnataka Assembly Polls: ಪುರುಷ ಅಭಿಮಾನಿಗಳು ಸಹ ಸಿದ್ದರಾಮಯ್ಯನವರ ಕೆನ್ನೆಗೆ ಮುತ್ತಿಡುತ್ತಾರೆ, ಗೊತ್ತಾ? ವಿಡಿಯೋ ನೋಡಿ

Updated on: May 05, 2023 | 4:24 PM

ಅವನ ವರ್ತನೆಯಿಂದ ಸಿದ್ದರಾಮಯ್ಯ ಅವಾಕ್ಕಾದರರೂ ನಂತರ ಸಾವರಿಸಿಕೊಂಡು ಥೂ ಇವ್ನಾ..ಅನ್ನುವ ಹಾಗೆ ಕೈ ಮಾಡುತ್ತಾರೆ!

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ಅಸಂಖ್ಯಾತ ಮಹಿಳಾ ಅಭಿಮಾನಿಗಳಿದ್ದಾರೆ. ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಸಿದ್ದರಾಮಯ್ಯರನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತಿಟ್ಟು ಅಭಿಮಾನ ಪ್ರದರ್ಶಿಸುವುದನ್ನು ನಾವು ನೋಡಿದ್ದೇವೆ. ಯುವಕರಲ್ಲೂ ಸಿದ್ದರಾಮಯ್ಯಗೆ ಅಂಥ ಉತ್ಕಟ ಅಭಿಮಾನಿಗಳಿದ್ದಾರೆ ಅಂತ ನಿಮಗೆ ಗೊತ್ತಾ? ಇವತ್ತು ವರುಣಾ ಕ್ಷೇತ್ರದಲ್ಲಿ (Varuna constituency) ಮಾಜಿ ಮುಖ್ಯಮಂತ್ರಿಗಳು ಸುಡುಬಿಸಿಲಲ್ಲಿ ಸಿನಿಮಾ ತಾರೆಯರೊಂದಿಗೆ (film stars) ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾಗ ಯುವ ಅಭಿಮಾನಿಯೊಬ್ಬ ವಾಹನವನ್ನು ಹತ್ತಿ ಅವರಿಗೆ ಹಾರ ಹಾಕಿ ಕೆನ್ನೆಗೆ ಮುತ್ತಿಡುತ್ತಾನೆ. ಅವನ ವರ್ತನೆಯಿಂದ ಸಿದ್ದರಾಮಯ್ಯ ಅವಾಕ್ಕಾದರರೂ ನಂತರ ಸಾವರಿಸಿಕೊಂಡು ಥೂ ಇವ್ನಾ..ಅನ್ನುವ ಹಾಗೆ ಕೈ ಮಾಡುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 05, 2023 04:21 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More