Abhishek Ambareesh Reception: ಅಂಬಿ ಪುತ್ರನ ಅದ್ದೂರಿ ರಿಸೆಪ್ಷನ್​; ಅಭಿಷೇಕ್​-ಅವಿವಾ ಆರತಕ್ಷತೆ ಕಾರ್ಯಕ್ರಮದ ಲೈವ್​ ವಿಡಿಯೋ ಇಲ್ಲಿದೆ..

|

Updated on: Jun 07, 2023 | 6:48 PM

Abhishek Ambareesh Aviva Bidapa Reception: ರಿಸೆಪ್ಷನ್​ಗೆ ಆಗಮಿಸುವವರಿಗಾಗಿ 3 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. 25 ಸಾವಿರ ಜನರಿಗೆ ಭೋಜನ ಸಿದ್ಧವಾಗಿದೆ. ವಿವಿಧ ಕ್ಷೇತ್ರದ ಗಣ್ಯರು ಹಾಜರಿ ಹಾಕುತ್ತಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಅಭಿಷೇಕ್​ ಅಂಬರೀಷ್ (Abhishek Ambareesh)​ ಹಾಗೂ ಅವಿವಾ ಬಿಡಪ ಅವರ ಆರತಕ್ಷತೆ ಕಾರ್ಯಕ್ರಮ ಇಂದು (ಜೂನ್​ 7) ನಡೆಯುತ್ತಿದೆ. ಇದಕ್ಕಾಗಿ ಸುಂದರವಾದ ವೇದಿಕೆ ನಿರ್ಮಾಣ ಆಗಿದೆ. ಜೂನ್​ 5ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ನವ ಜೋಡಿಯ ರಿಸೆಪ್ಷನ್​ಗೆ (Abhishek Ambareesh Reception) ವಿವಿಧ ಕ್ಷೇತ್ರದ ಗಣ್ಯರು ಹಾಜರಿ ಹಾಕುತ್ತಿದ್ದಾರೆ. ಸಂಜೆ 7 ಗಂಟೆಯಿಂದ ಅದ್ದೂರಿಯಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ರಿಸೆಪ್ಷನ್​ಗೆ ಆಗಮಿಸುವವರಿಗಾಗಿ 3 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. 25 ಸಾವಿರ ಜನರಿಗೆ ಭೋಜನ ಸಿದ್ಧವಾಗಿದೆ. ಅಭಿಷೇಕ್​ ಅಂಬರೀಷ್​-ಅವಿವಾ ಬಿಡಪ (Aviva Bidapa) ರಿಸೆಪ್ಷನ್​ ಲೈವ್​ ವಿಡಿಯೋ ಇಲ್ಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.