ವಿಶಾಖಪಟ್ಟಣ ಸಮುದ್ರ ದಡಕ್ಕೆ ಕೊಚ್ಚಿ ಬಂದಿದೆ ಪುರಾತನ ಬೃಹತ್ ಪೆಟ್ಟಿಗೆ! ಪೊಲೀಸರು ಕಾವಲು ಕಾಯುತ್ತಿದ್ದಾರೆ

|

Updated on: Sep 30, 2023 | 1:20 PM

ದೊಡ್ಡ ಪೆಟ್ಟಿಗೆಯೊಂದು ದಡದಲ್ಲಿ ಬಿದ್ದಿರುವ ಮಾಹಿತಿ ಮೇರೆಗೆ ಪೊಲೀಸರು ವೈಎಂಸಿಎ ಬೀಚ್‌ಗೆ ಬಂದು ಕಾವಲು ಕಾಯುತ್ತಿದ್ದಾರೆ. ಯಾರೂ ಬಾಕ್ಸ್ ಮುಟ್ಟದಂತೆ ಎಚ್ಚರಿಕೆ ವಹಿಸಲಾಗಿದೆ. ಪುರಾತತ್ವ ಇಲಾಖೆ ಅಧಿಕಾರಿಗಳು ಬಂದು ಬಾಕ್ಸ್ ತೆರೆಯುವ ಸಾಧ್ಯತೆ ಇದ್ದು, ಈಗಾಗಲೇ ಅವರಿಗೆ ಮಾಹಿತಿ ನೀಡಲಾಗಿದೆ

ಸಮುದ್ರದಾಳ ಬಲ್ಲವರಾರು? ಇನ್ನು ಅದು ತನ್ನಲ್ಲಿ ಅಡಗಿಸಿಕೊಂಡಿರುವ ರಹಸ್ಯಗಳನ್ನು ಬಲ್ಲವರು ಯಾರು? ಆದರೆ, ಕೆಲವೊಮ್ಮೆ ಆ ರಹಸ್ಯಗಳು ತೀರವನ್ನು ತಲುಪಿದಾಗ, ಜನರು ವಿಪರೀತ ಆಸಕ್ತಿಯಿಂದ ಅದನ್ನು ನೊಡುತ್ತಾರೆ. ಇಂತಹದೊಂದು ಸ್ವಾರಸ್ಯಕರ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ. 100 ಟನ್ ದೈತ್ಯನ ಪ್ರಾಚೀನ ಪೆಟ್ಟಿಗೆಯೊಂದು ಕಡಲತೀರಕ್ಕೆ ತೇಲಿಬಂದಿದೆ. ವಿವರಗಳೇನು ಎಂದು ನೋಡಿದಾಗ

ವಿಶಾಖಪಟ್ಟಣಂನ ದಡಕ್ಕೆ ಕೊಚ್ಚಿಬಂದಿರುವ ಪುರಾತನವಾದ ಆ ದೊಡ್ಡ ಪೆಟ್ಟಿಗೆಯೊಂದು ಪೊಲೀಸರಿಗೆ ನಿಗೂಢವಾಗಿದೆ. ಸೆಪ್ಟೆಂಬರ್ 29 ರಂದು ದೊಡ್ಡ ಪುರಾತನ ಪೆಟ್ಟಿಗೆಯೊಂದು ದಡಕ್ಕೆ ಕೊಚ್ಚಿ ಬಂದಿದೆ ಎಂಬ ಸುದ್ದಿ ಸ್ಥಳೀಯವಾಗಿ ವೈರಲ್ ಆಗಿದೆ. ಇದನ್ನು ನೋಡಲು ನೂರಾರು ಜನರು ನೆರೆದಿದ್ದರು. ಇದರಿಂದಾಗಿ ಇಡೀ ಪ್ರದೇಶ ಜನರಿಂದ ತುಂಬಿ ತುಳುಕುತ್ತಿದೆ. ಆ ಪೆಟ್ಟಿಗೆಯಲ್ಲಿ ಏನಾದರೂ ಬೆಲೆಬಾಳುವ ನಿಧಿ ಇರಬಹುದೇ ಎಂಬ ಚರ್ಚೆ ಪ್ರಬಲವಾಗಿ ಕೇಳಿಬಂದಿದೆ. ಮತ್ತೊಂದೆಡೆ, ಹಡಗುಗಳನ್ನು ಆಂಕರ್ ಮಾಡುವಾಗ, ಅವು ಜೆಟ್ಟಿಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಳಸುವ ಮರದ ದಿಮ್ಮಿ ತರಹದ್ದೇನಾದರೂ ಆಗಿರಬಹುದಾ? ಎಂದೂ ಕೆಲವರು ನಿರುತ್ಸಾಹ ತಾಲಿದ್ದಾರೆ.

ದೊಡ್ಡ ಪೆಟ್ಟಿಗೆಯೊಂದು ದಡದಲ್ಲಿ ಬಿದ್ದಿರುವ ಮಾಹಿತಿ ಮೇರೆಗೆ ಪೊಲೀಸರು ವೈಎಂಸಿಎ ಬೀಚ್‌ಗೆ ಬಂದು ಕಾವಲು ಕಾಯುತ್ತಿದ್ದಾರೆ. ಯಾರೂ ಬಾಕ್ಸ್ ಮುಟ್ಟದಂತೆ ಎಚ್ಚರಿಕೆ ವಹಿಸಲಾಗಿದೆ. ಪುರಾತತ್ವ ಇಲಾಖೆ ಅಧಿಕಾರಿಗಳು ಬಂದು ಬಾಕ್ಸ್ ತೆರೆಯುವ ಸಾಧ್ಯತೆ ಇದ್ದು, ಈಗಾಗಲೇ ಅವರಿಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ. ಇಷ್ಟೊಂದು ಬೃಹತ್ ಪೆಟ್ಟಿಗೆ ದಡಕ್ಕೆ ಕೊಚ್ಚಿ ಬಂದಿರುವುದು ಇದೇ ಮೊದಲು ಎಂದು ಸ್ಥಳೀಯರು ಹೇಳುತ್ತಾರೆ. ಅಲ್ಲದೆ, ಆ ಪೆಟ್ಟಿಗೆಯ ಬಳಿ ಶ್ವಾನದಳ ಮತ್ತು ಬಾಂಬ್ ಸ್ಕ್ವಾಡ್ ಕೂಡ ಬಂದಿವೆ. ಅದನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಆದರೆ, ಇದು ಎಲ್ಲಿಂದ ಬಂತು ಎಂಬುದು ಅಧಿಕಾರಿಗಳಿಗೆ ಯಕ್ಷಪ್ರಶ್ನೆಯಾಗಿದೆ. ಇನ್ನೇನು ಸದ್ಯದಲ್ಲೇ ಈ ನಿಗೂಢತೆ ಹೇಗೆ ಬಯಲಾಗುತ್ತದೋ ನೋಡೋಣ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ