Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಯಾನ 3 ಹೆಸರಿಟ್ಟು ರೈಸ್ ಪುಲ್ಲಿಂಗ್! 3 ಕೋಟಿ ರೂಪಾಯಿ ಪಂಗನಾಮ, ಸಿಸಿಎಸ್ ಪೊಲೀಸರ ಮೊರೆ ಹೋದ ಸಂತ್ರಸ್ತ

ಚಂದ್ರಯಾನ 3 ಹೆಸರಿಟ್ಟು ರೈಸ್ ಪುಲ್ಲಿಂಗ್! 3 ಕೋಟಿ ರೂಪಾಯಿ ಪಂಗನಾಮ, ಸಿಸಿಎಸ್ ಪೊಲೀಸರ ಮೊರೆ ಹೋದ ಸಂತ್ರಸ್ತ

ಸಾಧು ಶ್ರೀನಾಥ್​
|

Updated on: Sep 30, 2023 | 2:27 PM

ಬ್ಲಫ್ ಮಾಸ್ಟರ್ ಸಿನಿಮಾದಲ್ಲಿ ನೋಡಿದ ಈ ದೃಶ್ಯ ನೆನಪಿಗೆ ಬರುತ್ತದೆ.. ನಿಜ ಹೈದರಾಬಾದ್ ನಲ್ಲಿ ಸೇಮ್ ಟು ಸೇಮ್ ಘಟನೆ ನಡೆದಿದೆ. ರೈಸ್ ಪುಲ್ಲಿಂಗ್ ಹೆಸರಲ್ಲಿ ಕೇಡಿಗಳು ದುಡ್ಡು ಮಾಡಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಗೆ ತಾಮ್ರದ ಚೆಂಬು ಆಸೆ ತೋರಿಸಿ, 3 ಕೋಟಿ ರೂಪಾಯಿಗೆ ಪಂಗನಾಮ ಹಾಕಿದ್ದಾರೆ. ಘಟನೆಯ ವಿವರ ಇಂತಿದೆ.

ಹೈದರಾಬಾದ್, ಸೆಪ್ಟೆಂಬರ್ 30: ಹೈದರಾಬಾದ್, ಸೆಪ್ಟೆಂಬರ್ 20: ಬ್ಲಫ್ ಮಾಸ್ಟರ್ ಸಿನಿಮಾದಲ್ಲಿ ನೋಡಿದ ಈ ದೃಶ್ಯ ನೆನಪಿಗೆ ಬರುತ್ತದೆ.. ನಿಜ ಹೈದರಾಬಾದ್ ನಲ್ಲಿ ಸೇಮ್ ಟು ಸೇಮ್ ಘಟನೆ ನಡೆದಿದೆ. ರೈಸ್ ಪುಲ್ಲಿಂಗ್ ಹೆಸರಲ್ಲಿ ಕೇಡಿಗಳು ದುಡ್ಡು ಮಾಡಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಗೆ ತಾಮ್ರದ ಚೆಂಬು ಆಸೆ ತೋರಿಸಿ, 3 ಕೋಟಿ ರೂಪಾಯಿಗೆ ಪಂಗನಾಮ ಹಾಕಿದ್ದಾರೆ. ಘಟನೆಯ ವಿವರ ಇಂತಿದೆ.

ವಿಜಯಕುಮಾರ್ ಮೇಡಿಪಲ್ಲಿಯ ಕ್ಷೌರಿಕ. ಇತ್ತೀಚೆಗೆ ಆಡಂಬರದ ಜೀವನಕ್ಕೆ ಒಗ್ಗಿಹೋಗಿದ್ದಾನೆ. ವಿಜಯ್​, ಪಂಜಾಗುಟ್ಟದ ಪಬ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕಿರಣ್ ಅವರನ್ನು ಭೇಟಿಯಾಗಿದ್ದ. ಕಿರಣ್ ಅವರ ದೌರ್ಬಲ್ಯವನ್ನು ಗಮನಿಸಿದ ವಿಜಯ ಕುಮಾರ್ ಅವರ ಬಳಿ ವೈಭವೋಪೇತ ತಾಮ್ರದ ಚೆಂಬು ಇದೆ ಎಂದು ಆಸೆ ತೋರಿಸಿದ. ಆಕಾಶದಿಂದ ಸಿಡಿದ ಸಿಡಿಲುಗಳ ಚೂರುಗಳಿಂದ ತಯಾರಿಸಿದ ತಾಮ್ರದ ಬಟ್ಟಲು ತನ್ನ ಬಳಿ ಇದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿ ಕಿರಣ್‌ಗೆ ತಿಳಿಸಿದ್ದಾನೆ.

ಆ ರೀತಿಯಾಗಿ ವಿಜಯ್, ಕಿರಣ್ ಅವರನ್ನು ನಂಬುವಂತೆ ಮಾಡಿದ್ದಾನೆ. ತನ್ನ ಬಾವ ಸಂತೋಷ್, ಐಟಿ ಉದ್ಯೋಗಿ ಸಾಯಿ ಭಾರದ್ವಾಜ್ ಮತ್ತು ಮೌಲಾಲಿ ಸುರೇಂದ್ರ ಜೊತೆ ಸೇರಿ ನಾಟಕವನ್ನು ಆಡಿದರು. ಈ ತಾಮ್ರದ ಬಟ್ಟಲನ್ನು ಉಪಗ್ರಹಗಳು ಮತ್ತು ಪರಮಾಣು ಶಸ್ತ್ರಾಸ್ತ್ರಗಳಲ್ಲಿ ಬಳಸಲಾಗುವುದು. ನಾಸಾ ಮತ್ತು ಇಸ್ರೋ ಇದನ್ನು ಖರೀದಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತವೆ ಎಂದು ನಂಬಿಸಿದ್ದರು.

ಅದ್ಭುತ ಶಕ್ತಿ ಹಾಗೂ ವೈಭವ ಹೊಂದಿರುವ ತಾಮ್ರದ ಬಟ್ಟಲನ್ನು 3 ಕೋಟಿ ರೂ.ಗೆ ಮಾರಾಟ ಮಾಡುವುದಾಗಿ ವಿಜಯ ಕುಮಾರ್ ರಿಯಲ್ ಎಸ್ಟೇಟ್ ಉದ್ಯಮಿ ಕಿರಣ್ ಗೆ ಮನವರಿಕೆ ಮಾಡಿಕೊಟ್ಟಿದ್ದ. ಹಾಗಾಗಿ ಕಿರಣ್ ಅದನ್ನು ನಿಜವೆಂದು ನಂಬಿ ಮೊದಲ ಏಟಿಗೆ ರೂ. 50 ಲಕ್ಷ ನೀಡಿದ್ದಾರೆ. ಎರಡನೇ ಕಂತು ರೂ. 90 ಲಕ್ಷ, ನಂತರ ರೂ. 12 ಲಕ್ಷ, ಇನ್ನೊಂದು ಕಂತು ರೂ. 1.30 ಕೋಟಿ.. ಹೀಗೆ ಒಟ್ಟು 6 ತಿಂಗಳಲ್ಲಿ ಕಂತುಗಳಲ್ಲಿ ಒಟ್ಟು ರೂ. 3 ಕೋಟಿಯನ್ನು ವಿಜಯ್​​ ಗೆ ಕಿರಣ್ ನೀಡಿದ್ದಾರೆ. ಆದರೆ ಕಿರಣ್​ಗೆ, ಕೊನೆಯಲ್ಲಿ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಆ ಬೆಲೆ ಬಾಳುವ ತಾಮ್ರದ ಬಟ್ಟಲು ನೀಡದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ.

ಕಿರಣ್ ದೂರಿನನ್ವಯ ಫೀಲ್ಡಿಗಿಳಿದ ಸಿಸಿಎಸ್ ವಿಶೇಷ ಅಪರಾಧ ಪೊಲೀಸರ ತಂಡ ಕಣ್ಗಾವಲು ಕೆಲವರ ಮೇಲೆ ಇಟ್ಟಿದೆ. ಕೊನೆಗೆ ವಿಜಯಕುಮಾರ್ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ವಿಜಯ್ ಜೊತೆಗೆ ಆತನಿಗೆ ಸಹಾಯ ಮಾಡಿದ ಸಾಯಿ ಭಾರದ್ವಾಜ್, ಸಂತೋಷ್ ಮತ್ತು ಸುರೇಂದರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಕಿರಣ್​ ಅಷ್ಟೇ ಅಲ್ಲ; ಇನ್ನೂ ಹಲವು ವ್ಯಾಪಾರಿಗಳಿಂದ ಸುಮಾರು ರೂ. 20 ಕೋಟಿಗೂ ಹೆಚ್ಚು ಮೊತ್ತವನ್ನು ಹೀಗೆ ಪೀಕಿರುವುದು ಬಯಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ