ಮೂರು ದಶಕಗಳಿಂದ ಮುಖ್ಯಮಂತ್ರಿಗಳ ಮಕ್ಕಳು ಮಾಡಿರುವ ಆಸ್ತಿಯನ್ನು ಗಮನಿಸಿದ್ದೇನೆ: ಲಕ್ಷ್ಮಣ ಸವದಿ, ಕಾಂಗ್ರೆಸ್ ಶಾಸಕ
ಯಾರ್ಯಾರು ಎಷ್ಟು ದುಡ್ಡು ಮಾಡಿದ್ದಾರೆ, ಎಷ್ಟೆಷ್ಟು ಅಸ್ತಿ ಮಾಡಿದ್ದಾರೆ ಅಂತ ಚೆನ್ನಾಗಿ ಗೊತ್ತಿದೆ, ಅದನ್ನೆಲ್ಲ ಕೆದಕುತ್ತಾ ಕೂತರೆ ಚರ್ಚೆ ದೊಡ್ಡದಾಗುತ್ತಾ ಹೋಗುತ್ತದೆ. ಹಾಗಾಗಿ ಆ ವಿಷಯದ ಬಗ್ಗೆ ಮಾತಾಡುವುದು ಬೇಡ ಎಂದು ಹೇಳಿದರು. ರಾಜ್ಯದ ಮತ್ತೊಂದು ಶಕ್ತಿಕೇಂದ್ರ ಅನಿಸಿಕೊಂಡಿರುವ ಬೆಳಗಾವಿಯಲ್ಲೂ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆಯೇ ಅಂತ ಕೇಳಿದ ಪ್ರಶ್ನೆಗೆ ಅವರು ಸಮಯ ಬರಲಿ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಚಿಕ್ಕೋಡಿ: ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ (HD Kumaraswamy) ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ಬಗ್ಗೆ ಮಾಡಿರುವ ಕಾಮೆಂಟ್ ಗಳಿಗೆ ಕಾಂಗ್ರೆಸ್ ಶಾಸಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಚಿಕ್ಕೋಡಿಯಲ್ಲಿಂದು ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡಿದ ಅಥಣಿಯ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ (Laxman Savadi), ಮುಪ್ಪಾದ ಮೇಲೆ ಗರತಿ ಎಂಬ ಗಾದೆಯನ್ನು ನೆನಪಿಸುವಂತಿದೆ ಕುಮಾರಸ್ವಾಮಿ ಆಡಿರುವ ಮಾತು ಎಂದರು. ತಮ್ಮ ಮೂರು ದಶಕಗಳ ರಾಜಕೀಯ ಬದುಕಿನಲ್ಲಿ ಹಲವಾರು ಮುಖ್ಯಮಂತ್ರಿಗಳನ್ನು ಮತ್ತು ಅವರ ಮಕ್ಕಳನ್ನು ನೋಡಿದ್ದು; ಯಾರ್ಯಾರು ಎಷ್ಟು ದುಡ್ಡು ಮಾಡಿದ್ದಾರೆ, ಎಷ್ಟೆಷ್ಟು ಅಸ್ತಿ ಮಾಡಿದ್ದಾರೆ ಅಂತ ಚೆನ್ನಾಗಿ ಗೊತ್ತಿದೆ, ಅದನ್ನೆಲ್ಲ ಕೆದಕುತ್ತಾ ಕೂತರೆ ಚರ್ಚೆ ದೊಡ್ಡದಾಗುತ್ತಾ ಹೋಗುತ್ತದೆ. ಹಾಗಾಗಿ ಆ ವಿಷಯದ ಬಗ್ಗೆ ಮಾತಾಡುವುದು ಬೇಡ ಎಂದು ಹೇಳಿದರು. ರಾಜ್ಯದ ಮತ್ತೊಂದು ಶಕ್ತಿಕೇಂದ್ರ ಅನಿಸಿಕೊಂಡಿರುವ ಬೆಳಗಾವಿಯಲ್ಲೂ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆಯೇ ಅಂತ ಕೇಳಿದ ಪ್ರಶ್ನೆಗೆ ಅವರು ಸಮಯ ಬರಲಿ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ