ಶಿವಮೊಗ್ಗ; ಕೇವಲ ಹಿಂದೂ ಮನೆಗಳನ್ನು ಟಾರ್ಗೆಟ್ ಮಾಡಿ ಕಲ್ಲು ತೂರಾಟ ನಡೆಸಲಾಗಿದೆ: ಸ್ಥಳೀಯರು
ಶಿವಮೊಗ್ಗ ರಾಗಿಗುಡ್ಡ ಪ್ರದೇಶದ 8ನೇ ಕ್ರಾಸ್ ನಲ್ಲಿರುವ ಮನೆಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಕಿಟಕಿ ಬಾಗಿಲು ಗ್ಲಾಸ್ ಗಳು ಚೂರುಚೂರಾಗಿವೆ. ಏರಿಯಾದ ನಿವಾಸಿಗಳು ಭಯಭೀತರಾಗಿದ್ದು ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಹೊರಗಡೆ ಬರಲು ಹೆದರುತ್ತಿದ್ದಾರೆ.
ಶಿವಮೊಗ: ನಗರದಲ್ಲಿ ಉದ್ವಿಗ್ನ ಸ್ಥಿತಿ (Shivamogga tense) ನಿರ್ಮಾಣಗೊಂಡಿದೆ. ಪೊಲೀಸರು ಹೇಳುವ ಪ್ರಕಾರ ಪರಿಸ್ಥಿತಿ ಹತೋಟಿಯಲ್ಲಿದೆ ಆದರೆ ಸ್ಥಳೀಯರು ಹೇಳುವಂತೆ ಬೂದಿ ಮುಚ್ಚಿದ ಕೆಂಡದಂಥ ಸ್ಥಿತಿಯಲ್ಲಿ ನಗರ ಇದೆ. ಈದ್ ಮಿಲಾದ್ ಮೆರವಣಿಗೆ (Eid Milad procession) ಸಂದರ್ಭದಲ್ಲಿ ಶಿವಮೊಗ್ಗ ರಾಗಿಗುಡ್ಡ ಪ್ರದೇಶದ 8ನೇ ಕ್ರಾಸ್ ನಲ್ಲಿರುವ ಮನೆಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಕಿಟಕಿ ಬಾಗಿಲು ಗ್ಲಾಸ್ ಗಳು ಚೂರುಚೂರಾಗಿವೆ. ಏರಿಯಾದ ನಿವಾಸಿಗಳು ಭಯಭೀತರಾಗಿದ್ದು ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಹೊರಗಡೆ ಬರಲು ಹೆದರುತ್ತಿದ್ದಾರೆ. ಟಿವಿ9 ಕನ್ನಡ ವಾಹಿನಿಯ ಶಿವಮೊಗ್ಗ ವರದಿಗಾರ ಸ್ಥಳೀಯರೊಂದಿಗೆ ಮಾತಾಡಿ ರವಿವಾರ ಸಾಯಂಕಾಲ ಅಸಲಿಗೆ ನಡೆದಿದ್ದೇನು ಅಂತ ತಿಳಿಯುವ ಪ್ರಯತ್ನ ಮಾಡಿದ್ದಾರೆ. ಮೊದಲು ಮಾತಾಡಿದವರು ಘಟನೆಯ ವೇಳೆ ಸಿಟಿಯಲ್ಲಿದ್ದಿದ್ದುರಿಂದ ಕುಟುಂಬದ ಸದಸ್ಯರು ಫೋನ್ ಮಾಡಿದ ಬಳಿಕವೇ ವಿಷಯ ಗೊತ್ತಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ಅವರು ಹೇಳುತ್ತಾರೆ. ಎರಡನೇ ವ್ಯಕ್ತಿ ಹೇಳುವ ಪ್ರಕಾರ ಮೆರವಣಿಗೆ ಏರಿಯಾವನ್ನು ದಾಟಿ ಹೋದ ಬಳಿಕ 100-200 ಕಿಡಿಗೇಡಿಗಳು ವಾಪಸ್ಸು ಬಂದು ಕಲ್ಲು ತೂರಾಟ ಮಾಡಿದ್ದಾರೆ. ಕೇವಲ ಹಿಂದೂಗಳ ಮನೆಗಳನ್ನು ಗುರಿಯಗಿಸಿಕೊಂಡು ದಾಳಿ ಮಾಡಲಾಗಿದೆ ಎಂದು ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ