ಚಿತ್ರದುರ್ಗ: ಬಿಜೆಪಿ ಅಭ್ಯರ್ಥಿಗೆ ಮೇಕೆ ಮರಿ ಗಿಫ್ಟ್​ ನೀಡಿದ ಕಾರ್ಯಕರ್ತರು

|

Updated on: Apr 25, 2023 | 10:07 AM

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಅಬ್ಯರ್ಥಿ ಪೂರ್ಣಿಮಾ ಅವರಿಗೆ ರಾಮಚಂದ್ರ ಎಂಬ ಕಾರ್ಯಕರ್ತ ಮೇಕೆ ಮರಿ ಗಿಫ್ಟ್​​ ನೀಡಿದ್ದಾರೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರು ಜನರಿಗೆ ದುಡ್ಡು, ಗಿಫ್ಟ್​​ಗಳನ್ನು ಕೊಡುವುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಬದಲಾಗಿದ್ದು, ಜನರೇ ರಾಜಕಾರಣಿಗಳಿಗೆ ದುಡ್ಡು ಮತ್ತು ಗಿಫ್ಟ್​ಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ, ನಿಖಿಲ್​ ಕುಮಾರಸ್ವಾಮಿ ಹೀಗೆ ಅನೇಕ ನಾಯಕರಿಗೆ ಜನರು ಹಣ ಮತ್ತು ಗಿಫ್ಟ್​​ಗಳನ್ನು ನೀಡುತ್ತಾರೆ. ಅದರಂತೆ ಈಗ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಅಬ್ಯರ್ಥಿ ಪೂರ್ಣಿಮಾ ಅವರಿಗೆ ರಾಮಚಂದ್ರ ಎಂಬ ಕಾರ್ಯಕರ್ತ ಮೇಕೆ ಮರಿ ಗಿಫ್ಟ್​​ ನೀಡಿದ್ದಾರೆ. ಈ ವೇಳೆ ಕಾರ್ಯಕರ್ತರು ಮೇಕೆ ಮರಿಗೂ ಬಿಜೆಪಿ ಶಾಲು ಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ ಹಿರಿಯೂರು ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕಿ, ಅಭ್ಯರ್ಥಿ ಪ್ರೀತಿಯಿಂದ ಕಾರ್ಯಕರ್ತರು ಅನೇಕ ಕಡೆ ಕುರಿ, ಮೇಕೆ ನೀಡಿದ್ದಾರೆ. ಉಡುಗೊರೆ ಬಂದ ಮೇಕೆ, ಕುರಿಗಳನ್ನು ನಮ್ಮ ಫಾರಂನಲ್ಲಿ ಸಾಕುತ್ತೇನೆಂದು ಹೇಳಿದರು. ಅಲ್ಲದೇ ಮೇಕೆ ಗಿಫ್ಟ್ ಪಡೆದ ವಿಚಾರವನ್ನು ಪೂರ್ಣಿಮಾ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.